ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೇನು ವೆಲ್ಕಮ್ ಬೋರ್ಡು ಹಾಕಿಲ್ಲ..

ಅಶ್ವಿನಿ ಶ್ರೀಪಾದ್

ಒಮ್ಮೊಮ್ಮೆ ಹಾಗೆ ಇದ್ದು ಬಿಡುವಾಸೆ
ಕೆಲಸ ಬಂಡಿಯಷ್ಟಿದ್ದರು ,
ಮರೆತುಬಿಟ್ಟು ಹಾಯಾದ ಸುಖದ ಕ್ಷಣ !
ಕೈ ತುಂಬಾ ಸಾಲ ಮಾಡಿ ಪಾಯಸ ತಿಂದಂತೆ
ತಿಂಗಳ ಕೊನೆಯಲ್ಲಿ ಓಲಾ ಉಬರ್ ಓಡಾಟದಂತೆ ,

ಬ್ಯಾಟರಿ ಕಡಿಮೆ ಇದ್ದರೂ ಯೂಟ್ಯೂಬಿನಲ್ಲಿ ಸಿನಿಮಾ ನೋಡುವಂತೆ ,
ಹೊಟ್ಟೆಗೆ ಹಿಟ್ಟು ಇರದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವಂತೆ
ಕಷ್ಟವೋ ತಾಪತ್ರಯವೋ ತೊಂದರೆಯೂ
ಅದಕ್ಕೊಂದಿಷ್ಟು ಹೆಸರು ,
ಅದು ಇರಲಿ ಬಿಡಿ ಅದರ ಪಾಡಿಗೆ ಅದು ,
ನಾನೇನು ವೆಲ್ಕಮ್ ಬೋರ್ಡು ಹಾಕಿಲ್ಲ
ಆದರೂ ನನ್ನೊಳಗೆ ಅದು ಬಂದೆ ಬರ್ತವೆ ,
ಅದು ಇದ್ದದ್ದೇ
ಕತ್ತಲಿಗೆ ಅಂಜಿ ಬಣ್ಣದ ಕನಸು ಬೀಳುವುದು ನಿಲ್ಲದು ,
ಬೆಟ್ಟದಂತ ಕಷ್ಟ ನಿಂತುಬಿಡಲಿ ಬಿಡಿ , ಅದು ಇದ್ದದ್ದೇ
ನಾನು ನಿಲ್ಲದ ಮೋಡ, ಅಪ್ಪಳಿಸಿದಾಗಲೇ
ಮಳೆ, ಜೋರಾದ ಮಳೆ !!

‍ಲೇಖಕರು avadhi

6 June, 2018

1 Comment

  1. Anagha LH

    Superb!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading