ಪಿಕ್ನಿಕ್ ಮತ್ತು joy
– ಚಿನುವಾ
ನಮ್ಮನ್ನೆಲ್ಲ ಅಪ್ಪ , ಅಮ್ಮ ಶಾಲೆಗೆ ಕರೆದುಕೊಂದು ಹೋದರು. ಸ್ವಲ್ಪ ಹೊತ್ತು ಹಳೆ ಬಾಲಬಳಗದಲ್ಲಿ ಟೆಂಪೋಗಾಗಿ ಕಾದ್ವಿ. ಅಷ್ಟರಲ್ಲಿ ಭಾರ್ಗವ್ ಬಂದ. ಖುಷಿ ಆಯ್ತು. ಬರುವುದಿಲ್ಲವೆಂದುಕೊಂಡ ನನ್ನ ಫ್ರೆಂಡ್ ಭಾರ್ಗವ್ ಬಂದದ್ದು ನಂಗೆ ತುಂಬಾ ಖುಷಿ ಆಯ್ತು.
ನಾವು ‘ಜಾಣ ಜಪಾನಿನ ಮಂಗಗಳು’ ಹಾಗೂ ‘ಮೈಸೂರಜ್ಜ’ ಹಾಡು ಹೇಳಿಕೊಂಡು ಮುಂಡಗೋಡ ಹತ್ತಿರದ ಒಂದು ಪಕ್ಷಿಧಾಮಕ್ಕೆ ಹೋದ್ವಿ. ಅದರ ಹೆಸರು ಅತ್ತಿವೇರಿ ಪಕ್ಷಿಧಾಮ. ಆದ್ರೆ ಅಲ್ಲಿ ಕಾಗೆ ಮಾತ್ರ ಇತ್ತು. ಬೇರೆ ಹಕ್ಕಿನೇ ನಮಗೆ ಕಾಣಿಸ್ಲಿಲ್ಲ. ಅಲ್ಲಿ ಒಂದು ಜಾತಿಯ ಮೀನಿತ್ತು. ಆ ಮೀನು ದೊಡ್ಡದಿತ್ತು. ಆ ಮೀನು ಎಲೆ ಅಡಿಕೆ ತಿಂತಿತ್ತು. ನಾವು ಹಾಕೇ ಹಾಕಿದ್ವಿ. ಅದು ತಿಂತಾ ಇತ್ತು. ಮೌಶಿ ದೊಡ್ದ ಕವರ್ ಒಳಗೆ ಎಲೆ ಅಡಿಕೆ ತಂದಿದ್ರು.

ಅಲ್ಲೊಂದು ಸೇತುವೆ ಇದೆ. ನಾವು ಬೆಳ್ಳಕ್ಕಿ ಕ್ಲಾಸ್ನವರು ಮೊದಲು ಮೌಶಿಗಳ ಜೊತೆ ಅದನ್ನು ದಾಟಿದೆವು. ಮತ್ತೆ ಮೌಶಿಗಳು ನಮಗಿಂತ ಸಣ್ಣವರಾದ ಗುಬ್ಬಚ್ಚಿ, ಮಿಂಚುಳ್ಳಿ ಮಕ್ಕಳನ್ನು ಕರಕೊಂಡು ಬರಲು ಸೇತುವೆಯ ಇನ್ನೊಂದು ಭಾಗಕ್ಕೆ ಹೋದ್ರು. ಆಗ ನಮ್ಮನ್ನು ಪ್ರಕಾಶಿನಿ ಮೌಶಿ ನೋಡಿಕೊಂಡ್ರು. ಅಲ್ಲಿ ಒಂದು ಹೊಸ ಗಾಡಿಯೂ (ಟಿವಿಎಸ್) ಬಂದಿತ್ತು.
ಪಕ್ಶಿಧಾಮ ನೋಡಿ ಟಾಟಾ ಟೆಂಪೋ ನಿಂತಲ್ಲಿಗೆ ವಾಪಾಸ್ ಬಂದ್ವಿ. ಅಲ್ಲಿ ಡ್ರೈವರ್ ಇರಲೇ ಇಲ್ಲ. ಅವರು ಸ್ವಲ್ಪ ದೂರದಲ್ಲಿದ್ದ ಬೊಲೆರೋ ಮಹಿಂದ್ರ ಜೀಪ್ ಹತ್ರ ಇದ್ದರು. ಇನ್ನೊಬ್ಬರು ಟೆಂಪೋದಲ್ಲಿ ಮಲಗಿದ್ದರು. ನಂತರ ಅವರು ಬಾಗಿಲು ತೆಗೆದರು. ನಮ್ಮ ನಮ್ಮ ಬ್ಯಾಗ್ಗಳನ್ನು ಹಿಡ್ಕೊಂಡು ಕೆಳಗಿಳ್ದ್ವಿ. ಅಲ್ಲಿ ಒಂದು ಊಟ ಮಾಡುವ ಜಾಗ ಇತ್ತು. ಅಲ್ಲಿ ಊಟ ಮಾಡಿದ್ವಿ. ಅದು ಒಂದು ಗುಡಿ ತರಹ ಇತ್ತು. ನಮ್ಮ ಊಟ ಬೇಗ ಬೇಗ ಆಯ್ತು. ಬಾಕ್ಸ್ ಬ್ಯಾಗ್ ಒಳಗಿಟ್ವಿ. ಮತ್ತೆ ಚಲೋ ಚಲೋ ಆಟ ಆಡಿದ್ವಿ. ಟೊಪ್ಪಿ, ಟೊಪ್ಪಿ ಆಟ ಆಡಿದ್ವಿ.
ಮತ್ತೆ ಮೌಶಿಗಳು ಬೇಡ ಬೇಡ ಅಂತಿದ್ರೂ ಸುನಿಲ್ ಅನ್ನೋವ್ನು ಟೆಂಪೋಗೆ ಹತ್ತೇ ಬಿಟ್ಟ. ಮೌಶಿಗಳು ಜೋರು ಮಾಡಿದ್ರು. ಆಟ ಮುಗಿದ ಮೇಲೆ ನಾವೆಲ್ಲ ಟೆಂಪೋ ಹತ್ತಿದ್ವಿ. ನಾನು ಕಿಟಕಿ ಹತ್ತಿರವೇ ಕುಳಿತೆ. ಟೆಂಪೋ ಹೊರಟಿತು. ಟೆಂಪೋ ಮಾಮ ಕೇಳಿದ್ರು -‘ ಈಗ ಎಲ್ಲಿ ಹೋಗುವುದು?’. ನಾವು ಟಿಬೆಟಿಯನ್ ದೇವಸ್ಥಾನಕ್ಕೆ (6ನೇ ಸಂಖ್ಯೆಯ ಗುಡಿ) ಹೋದ್ವಿ.
ದೇವಸ್ಥಾನದಲ್ಲಿ ನಾವು ಮಾತನಾಡ್ತಿದ್ವಿ. ಆಗ ಒಬ್ಬ ಅಜ್ಜ ಗಲಾಟೆ ಮಾಡದೆ ಸುಮ್ಮಗೆ ಕೂಡ್ರಿ ಅಂತ ಜೋರು ಮಾಡ್ಲಿಕ್ಕೆ ಬಂದರು. ಆಮೆಲೆ ನಾವು ಸುಮ್ಮನೆ ಕೂತ್ವಿ. ಅಲ್ಲಿ ಬನಿಯನ್ ಹಾಕಿದವ್ರೂ ಇದ್ರು. ಬಟ್ಟೆ ತರಹ ಏನೋ ಹಾಕಿದ್ರು- ಅವರ ಡ್ರೆಸ್ ಬೇರೆ ತರಹ ಇತ್ತು. ಹಳದಿ, ಚೋಕೊಲೇಟ್ ಬಣ್ಣ ಮತ್ತು ಕೆಂಪು ಬಟ್ಟೆ ಹಾಕಿದ್ರು. ಅವರ ಧ್ವಜದಲ್ಲಿ ಎಲ್ಲ ಬಣ್ಣ ಇತ್ತು. ಅಲ್ಲಿ ಇದ್ದ ಟಿಬೇಟಿಯನ್ ಮಕ್ಕಳು ಜಗಳ ಆಡ್ತಾ ಇದ್ರು. ಮತ್ತೆ ಅಲ್ಲಿಂದ ಟೆಂಪೋ ಹೊರಟಿತು. ನಾನು ಖುಷಿಯಿಂದ ಇದ್ದೆ.
ಸ್ವಲ್ಪ ದೂರ 1ನೇ ಸಂಖ್ಯೆಯ ದೇವಸ್ಥಾನಕ್ಕೆ ಬಂದ್ವಿ. ಅಲ್ಲಿ ಮೌಶಿಗಳು ಮಾತ್ರ ಹೋದ್ರು. ನಾವೆಲ್ಲ ಟೆಂಪೋದಲ್ಲಿ ಇದ್ವಿ. ಜೊತೆಗೆ ಟೆಂಪೋ ಮಾಮ ಇದ್ರು. ಅಲ್ಲೇ ಒಂದು ಟಿಬೆಟಿಯನ್ ಅಂಗಡಿ ಇತ್ತು. ಅದರಲ್ಲಿ ಗಡಿಯಾರ ಕೂಡಾ ಇತ್ತು! ಮಾರಾಟಕ್ಕಲ್ಲ ಅದು. ಟೆಂಪೋದಿಂದಲೇ ಆ ಗಡಿಯಾರದಲ್ಲಿ ಗಂಟೆ ನೋಡಿದ್ವಿ. ಗಂಟೆ ಆಗ ನಾಲ್ಕು ಅಂತ ನೆನಪು. ಅಲ್ಲೆಲ್ಲ ಬೇರೆ ಭಾಷೆ ‘ಹ್ದ್ಘ್ಸ್ಗ್ಸ್ಗ್’ ಮಾತಾಡ್ತಿದ್ರು. ಟಿಬೇಟಿಯನ್ ಅವ್ರು ರಾತ್ರಿ ಹೇಗೆ ಮಲಗಬಹುದು? ಅಂಗಿಯೂ ಇಲ್ಲ, ಹೊದಿಕೆಯೂ ಇಲ್ಲ. ಚಳಿ ಆದ್ರೆ ಏನು ಮಾಡ್ತಾರೆ ಅಂತ ನಂಗೆ ಅನ್ನಿಸ್ತಿತ್ತ್ತು. ಅಲ್ಲಿ ಸುಮಾರು 444 ಮರ ಇತ್ತು ಅಂತ ಅನ್ನಿಸ್ತದೆ. ಟಿಬೇಟಿಯನ್ ದೇವಸ್ಥಾನ ನೊಡಿ ನನಗೆ ತುಂಬಾ ಖುಷಿ ಆಯ್ತು.
ಟೆಂಪೋ ಹೊರಟಾಗ ಎಲ್ಲರಿಗೂ ಖುಷಿ ಆಯ್ತು. ಆಗ ಒಂದು ಕ್ರಾಸ್ ಬಂತು. ಎದುರಿಂದ ಒಂದು ಇನ್ನೊಂದು ಮಹಿಂದ್ರ ಟೆಂಪೋ ಬಂತು. 4 ಸೇತುವೆ ದಾಟಿ ಹೋಗ್ತಾ ಇದ್ವಿ. ನಾವು ಒಂದು ದೇವಸ್ಥಾನಕ್ಕೆ ಹೋದ್ವಿ. ಅಂತಹ ದೇವಸ್ಥಾನಗಳನ್ನು ನಾನು ಮೊದಲು ಬೆರೆ ಕಡೆಗಳಲ್ಲೂ ನೊಡಿದ್ದೆ. ಅಲ್ಲಿ ರಸ್ತೆಯೊಳಗೆ ಇನ್ನೊಬ್ರು ಇದ್ರು. ಅವರ ಹತ್ರ ಇದ್ದ ಹುಡುಗನನ್ನು ‘ಇವ್ನನ್ನು ಕಕರ್ೊಂಡು ಹೋಗ್ರಿ, ಇವ್ನೂ ಪಿಕ್ನಿಕ್ ಹೋಗ್ಯಾನೆ ಮೊದ್ಲು’ ಅಂತ ಹೇಳಾಕ ಹತ್ತಿದ್ರು. ನಾವು ಸುಮ್ನೆ ಮುಂದೆ ಹೋದ್ವಿ. ಅಲ್ಲಿ ಹೊ ಮಾರಾಟ ಮಾಡ್ಕೊಂಡು ಕೂತಿದ್ರು.. ‘ನೀವು ಪೂಜೆ ಹೊತ್ತಿಗೆ ಬಂದಿದ್ದೀರಿ, ಹೂ ತೆಕೊಂಡು ಹೋಗಿ’ ಅಂತ ಹೇಳಿದ್ರು. ಬೇಡಾಂತ ನಾವು ಮುಂದೆ ಹೋದ್ವಿ. ನಂತರ ದೇವಸ್ಥಾನದೊಳಗೆ ಹಾಡು ಹೇಳಿದ್ವಿ. ಮತ್ತೆ ಬಂದು ಟೆಂಪೋಗೆ ಹತ್ತಿದ್ವಿ.
ಹಾಗೇ ಧಾರವಾಡಕ್ಕೆ ಹೊಂಟ್ವಿ. ಬರ್ತಾ ಬೇರೆ ರಸ್ತೆಯಲ್ಲಿ ಬಂದ್ವಿ ಅಂತ ಕಾಣಿಸ್ತದೆ. ರಸ್ತೆನೂ ಸರಿ ಇರ್ಲಿಲ್ಲ. ಟೆಂಪೋನೂ ಹಳೇದಾಗಿತ್ತು. ಗಾಡಿ ಢಂ ಢಂ ಶಬ್ದ ಮಾಡ್ತಿತ್ತು. ಕತ್ತಲಾದ ಹಾಗೆ ನಮಿಗೂ ಬ್ಯಾಸರ ಹತ್ತಿತ್ತು. ನಾನು, ಭಾಗ್ರ್ಯ ನೀರು ಕುಡ್ಕೊಂಡ್ವಿ. ಇಬ್ರಿಗೂ ಅಮ್ಮನ ನೆನಪು ಆಗ್ಲಿಕ್ಕೆ ಶುರು ಆಯ್ತು. ಮತ್ತೆ ಟೆಂಪೋ ಒಳಗೆ ಆಡ್ಲಿಕ್ಕೆ ಶುರು ಮಾಡಿದ್ವಿ. ಕತ್ತಲಾದಂಗೆ ಟೆಂಪೋ ಮಾಮನ ಹತ್ರ ಲೈಟ್ ಹಾಕ್ಲಿಕ್ಕೆ ಹೇಳಿದ್ವಿ. ಧಾರವಾಡದ ಹತ್ರ ಬಂದ್ವಿ. ಆಗ ಪ್ರಕಾಶಿನಿ ಮೌಶಿ ಮನೆ ಬಂತು. ಕೂಡ್ಲೆ ಎಲ್ಲರಿಗೂ ಧಾರವಾಡ ಬಂತು ಅಂತ ಖುಶಿ ಆಯ್ತು. ನಂತರ ಸೀದಾ ಶಾಲೆಗೆ ಬಂದ್ವಿ.
+++
ಸಂಜೀವ್ ಮಾಮ, ಪ್ರತಿಭತ್ತೆ, (ನಮ್ಮ ಸ್ಕೂಲಿನ ಪ್ರೀತಿಯ ಮಾಮ, ಅತ್ತೆ ಅಲ್ವ ಅದಕ್ಕೆ ಅವರ ಹೆಸರು ಮೊದ್ಲು ಹೇಳ್ತಿದ್ದೇನೆ!) ಸಹನಾ ಮೌಶಿ, ಗೌರಿ ಮೌಶಿ, ಡೈಸಿ ಮೌಶಿ, ರೋಹಿಣಿ ಮೌಶಿ, ಗ್ರೀಟಾ ಮೌಶಿ, ಪ್ರಕಾಶಿನಿ ಮೌಶಿ ಎಲ್ಲ ನಮ್ಮನ್ನು ಕರ್ಕೊಂಡು ಹೋಗಿದ್ರು.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





SO SWEET!
🙂
cho chweet chinua!!!!
🙂
hugs from
malathi maushi 🙂
enchina marayre undhu?
ಚಿನುವಾ,
ನಾನು ನಿನ್ನ ಕೂಡೆ ಪಿಕ್ನಿಕಗೆ ಹೋಗಿ ಬಂದಾಂಗಾಯ್ತು ನೋಡು, ಈ ಸಲ ಧಾರವಾಡಕ್ಕ ಬಂದಾಗ ಈ ಮಾಮಾ ನಿನ್ನ ಬೆಟ್ಟಿಯಾಗ್ಲಿಕ್ಕ ಬರ್ತಾನ, ಸಿಗ್ತಿಯಿಲ್ಲಪಾ?
-ಶೆಟ್ಟರ ಮಾಮಾ