'ನಾನೂ ಕೇವಲ ಇಂಚರವಾಗಬಾರದೇ…..?' – ರೂಪಾ ಹಾಸನ್

ಕೇವಲ ಕಣ್ಗಳಿವೆ

ರೂಪ ಹಾಸನ

ಕೈಗಳಿಲ್ಲ ಬಳಸಲು
ಕಾಲ್ಗಳಿಲ್ಲ ಹೆಜ್ಜೆಯೂರಲು
ರೆಕ್ಕೆಗಳಿಲ್ಲ ಹಾರಲು
ಈ ಇಂಚರಕ್ಕೆ
 
ಬಹುಶಃ ಕಣ್ಗಳಿವೆ
ಕೇವಲ ಕಣ್ಗಳಿವೆ
ಈ ಇಂಚರಕ್ಕೆ

ಹೀಗೆಂದೇ ಕೇವಲ
ನೋಡುತ್ತಾ
ಮಿಡಿಯುತ್ತಾ
ನುಡಿಸುತ್ತಾ
ಆವರಿಸುತ್ತದೆ
ಈ ಇಂಚರ!
ಕೇವಲ ಕಣ್ಗಳಿವೆ
ಈ ಇಂಚರಕ್ಕೆ……!
 
ನಾನೂ ಕೇವಲ
ಇಂಚರವಾಗಬಾರದೇ…..?

‍ಲೇಖಕರು avadhi

February 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. gururaj katriguppe

    neevu matravalla, ellaruu incharavalebeku. small,simple,but very meaningful poem, only you can write it madam.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: