ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ..


ಗೆಳೆಯ ಮಣಿಕಾಂತ್ ಮತ್ತು ನನ್ನದು ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯ ಕರ್ನಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್ ಸ್ವೀಟ್ಸ್ನಲ್ಲಿ ಮೈಸೂರ್ ಪಾಕ್ ಕೊಡಸ್ತೀನಿ ಅಂತ ಕರ್ಕೊಂಡು ಹೋಗಿ ಅವಾಗವಾಗ ಮೈಸೂರ್ ಪಾಕ್ ತಿನ್ನಿಸ್ತಿರ್ತಾರೆ. ಹಾಗಾಗೆ ನಾನು ದಪ್ಪ ಅಂತ ಏನಾದರೂ ಆಗಿದ್ದರೆ ಅದರ ಹಿಂದೆ ಮಣಿಯ ಕೈವಾಡವೂ ಇದೆ ಅನ್ನುವ ಗುಮಾನಿ ನನಗೆ. ಒಮ್ಮೊಮ್ಮೆ ಅಂತೂ ನಿಮ್ಮನ್ನು ನೋಡಬೇಕು ಎಲ್ಲಿ ಸಿಕ್ತೀರಾ ಅಂತ ಮೆಸೇಜ್ ಬಿಟ್ಟು ತುದಿಗಾಲಲ್ಲಿ ನಿಂತಿರ್ತಾರೆ. ಪ್ರತಿ ಸಲ ಸಿಕ್ಕಾಗಲೂ ಅದೇ ಪ್ರಿತಿ ಅದೇ ರೀತಿ.
ಇಂಥ ‘ಮಣಿಯ ಹಾಡು ಹುಟ್ಟಿದ ಸಮಯ’ ಅನ್ನೋ ಪುಸ್ತಕ ಹತ್ತನೇ ತಾರೀಕು ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿದೆ. ವಿಜಯ ಕರ್ನಾಟಕದಲ್ಲಿ  ಅತ್ಯಂತ ಪಾಪ್ಯುಲರ್ ಆದ ಕಾಲಂ ಅದು. ಗುನುಗುನಿಸುವ ಹಾಡು ಹುಟ್ಟಿದ್ದರ ಹಿಂದೆ ಒಂದು ಪ್ರೀತಿ ಇದ್ದ ಹಾಗೆ ದುಃಖವೂ ಇರುತ್ತದೆ. ಪ್ರತಿ ಹಾಡಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಅಂತ ಹಾಡುಗಳ ಇತಿಹಾಸವೇ ಈ ಪುಸ್ತಕ. ಅವತ್ತು ನಟ ರಮೇಶ್ ಅರವಿಂದ್ ಬರ್ತಿದಾರೆ. ವಿಶ್ವೇಶ್ವರಭಟ್, ಅನಂತ ಚಿನಿವಾರ್ ಮುಂತಾದವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಒಂದಿಷ್ಟು ಹಾಡುಗಳಿವೆ. ನೀವು ಅವತ್ತು ಬಿಡುವು ಮಾಡಿಕೊಂಡು ಬರಲೇಬೇಕು ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ ಮಣಿ. ಬಹುಶಃ ಅವರಿಗಿಂತ ಮೊದಲೇ ಅವತ್ತು ನಾನಲ್ಲಿರುತ್ತೇನೆ.
ನೀವೂ ಬನ್ನಿ… ನಿಮ್ಮನ್ನು ನೋಡುವ ಭಾಗ್ಯ ಹೀಗಾದರೂ ಸಿಗಲಿ.
ಮಿಸ್ ಮಾಡಲ್ಲ ತಾನೆ
ರವಿ ಅಜ್ಜೀಪುರ

‍ಲೇಖಕರು avadhi

4 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading