ಸುಚಿತ್ರ ಕೆ
ನಾನು ಮಗುವಾಗಿದ್ದಿದ್ದರೆ
ಈ ಎಲ್ಲ ಬೇಗುದಿ ನಿಟ್ಟುಸಿರು ಇರ್ತಾ ಇರಲಿಲ್ಲ
ನಾನು ಮಗುವಾಗಿದ್ದಿದ್ದರೆ
ಮನಸ್ಸಿನ ತೊಳಲಾಟದಲ್ಲಿ
ಒದ್ದಾಟದಲ್ಲಿ ಬೆಂದು ನಲುಗುತಿರಲಿಲ್ಲ ..

ನಾನು ಮಗುವಾಗಿದ್ದಿದ್ದರೆ
ಕಳ್ಳತನದ ನೋಟದ ಅರಿವಿರುತಿರಲಿಲ್ಲ;
ಸುಳ್ಳಿನ ಮಣಿಗಳ ಪೋಣಿಸುತಿರಲಿಲ್ಲ
ನಾನು ಮಗುವಾಗಿದ್ದಿದ್ದರೆ
ಭೇದ-ಭಾವದ ಹಂಗಿಗೆ ತಿಳಿಯುತಿರಲಿಲ್ಲ
ಜಾತಿ-ಧರ್ಮದ ಎಳೆಗೆ ಎಂದೂ ಸಿಲುಕುತ್ತಿರಲಿಲ್ಲ
ಹೌದು….
ನಾನು ಮಗುವಾಗಲಿಲ್ಲ..
ಮಗುವಿನ ನಗು ಕಲಿಯಲಿಲ್ಲ….
ಮಗುವಲ್ಲಿ ಮಗುವಾಗಿ ಬೆರೆಯುವ ಮನಸ್ಸು ತಿಳಿಯಲಿಲ್ಲ..
ಓ ಮನವೇ
ಇನ್ನಾದರೂ ಬದಲಾಯಿಸು
ರಚ್ಚೆ ಹಿಡಿದು ಕಾಡುವ ಮನಸ್ಸನ್ನು
ಮುಕ್ತವಾಗಿ ನಗುವಂತೆ….
ಕಲಿತುಕೊ
ಮಗುವಿನ ಎಳೆ ಸೆಳೆತದ ಮುಗ್ಧ ನಗುವನ್ನು….






nice
chennaagide..
ಮಗುವಿನಿಂಧ ಮನಸಿಗೊಂದು ಪಾಠ ಚೆನ್ನಾಗಿದೆ.. ಮಗು-ನಗು, ನಗುತ್ತಲೇ ಇರು.
Thumba chennagide…..
super agide Kavana Suchithra….
ಯಾವಾಗಲೂ ನಗುತ್ತಲಿರುವ ನೀನು ಮಗುವೇ ಆಗಿರು!