ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ನಿನ್ನ ಕನಸುಗಳಿಗೆ ಅನಾಮಿಕನಾಗಿ ಭೇಟಿ ಕೊಟ್ಟಾಗೆಲ್ಲಾ…

ಒಲವ ಗುಟುಕು

ಗಣೇಶ್ ನೆಂಪೆ

೧. ನಾನು ನಿನ್ನ ಕನಸುಗಳಿಗೆ
ಅನಾಮಿಕನಾಗಿ ಭೇಟಿ ಕೊಟ್ಟಾಗೆಲ್ಲಾ
ನೀನು ನಿದ್ದೆಯಲ್ಲೇ ಮುದ್ದಾಗಿ
ನಗುವುದನ್ನು ನೋಡುವುದಕ್ಕೆ
ಎರಡು ಕಣ್ಣೂ ಸಾಲದು.
 
೨. ಸುಖಾಸುಮ್ಮನೆ ಚಂದಿರ ನಿನ್ನನ್ನು
ಕನಸಿನಲ್ಲಿ ತುಂಬಿಕೊಂಡು ನಗುತ್ತಾನೆ.
ಪಾಪ ಅವನಿಗೆ ಅರಳು-ಮರುಳಿರಬೇಕು.
ನನಗಿರುವ ಕನಸೊಂದೆ. ಸದ್ದಿಲ್ಲದೇ ಬಂದು
ನಿನ್ನ ಕಣ್ಣ ಬೆರಗಾಗಬೇಕು.
 
೩. ವ್ಯಸನಿಯಂತೆ ನಿನ್ನ ಕನಸುಗಳನ್ನು
ಹೀರುವ ನನ್ನ ಕಣ್ಣುಗಳಲ್ಲಿ
ತುಂಬಿರುವುದು ಬರೀ ನಶೆಯಲ್ಲ.
ಕೊಂಚ ಪ್ರೀತಿಯಿಂದ ನೋಡು,
ಕಾಣಬಹುದು ನಮ್ಮಿಬ್ಬರ
ಭವಿತವ್ಯದ ಬೆಳಕ ತುಣುಕುಗಳು.

೪. ನಿನ್ನ ಆಗಮನದಿಂದ ಕನಸುಗಳು
ವಿಪರೀತ ಖಾಸಗಿಯಾಗುತ್ತವೆ.
ಎಷ್ಟೆಂದರೆ ಅಲ್ಲಿ ನಮ್ಮಿಬರ
ಹೊರತಾಗಿ ಬೇರೆಯಾವ ಕನಸು
ಸಹ ಇರುವುದಿಲ್ಲ.
 
೫. ನಾವಿಬ್ಬರೂ ಕನಸುಗಳನ್ನು
ಹಂಚಿಕೊಂಡು ನಗುವಾಗ
ಹೊರ ಜಗತ್ತಿನಲ್ಲಿ ಏನೋ ತಲ್ಲಣಗಳು.
ಒಂದಷ್ಟು ಮಂದಿ ದೊಂದಿಗಳನ್ನು ಹಿಡಿದು
ಬೆಳಕ್ಕಿಲ್ಲದ ಕಣ್ಣುಗಳಲ್ಲಿ ಏನನ್ನೋ ಹುಡುಕುತ್ತಿದ್ದಾರೆ.
 
೬. ನಿನ್ನ ಕನಸುಗಳನ್ನು ಕಳೆದುಕೊಂಡ ನಾನು
ದಾರಿಕಾಣದೆ ಕಂಗಾಲಾಗಿದ್ದೇನೆ.
ನಿಜ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು.
ಕನಸುಗಳೇ ಇಲ್ಲದ ದಾರಿಯಲ್ಲಿ
ನಾನು ನಡೆಯಲಾರೆ.
 
 

‍ಲೇಖಕರು G

11 October, 2013

4 Comments

  1. D.Ravivarma

    ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು.
    ಕನಸುಗಳೇ ಇಲ್ಲದ ದಾರಿಯಲ್ಲಿ
    ನಾನು ನಡೆಯಲಾರೆ….idu appata satya…

  2. ಮಂಜು ಹೆಗಡೆ

    ನೆಂಪೆಯವರೇ, ಕನಸುಗಳಲ್ಲಿ ಒಲವ ಗುಟುಕನ್ನ ಹೀರಿ ಹೀರಿ ನೀವು ಸಂಭ್ರಮಿಸುವ ರೀತಿ ತುಂಬಾ ಚೆನ್ನಾಗಿದೆ. ಕನಸುಗಳನ್ನ ತುಂಬಾ ಪ್ರೈವೇಟ್ ಆಗಿ ನೀವು ಮಾತನಾಡಿಸುತ್ತಿರುವುದು ಚಂದಿರನನ್ನೂ ಆತಂಕಕ್ಕೆ ಈಡು ಮಾಡಿದೆ!
    ನೀವು ತೋರಿಸುತ್ತಿರುವ ಒಲವಿನ ಪ್ರತಿ ಗುಟುಕಲ್ಲೂ ಒಂದು ಕಾಳಜಿ ಇದೆ, ಅದಕ್ಕೊಂದು ಹೊಸ ಚಲನೆಯ ಲಯ ಇದೆ. ಎಲ್ಲಿಯೂ ನಿಮಗೆ ಅಮಲು ಏರಿದೆ ಅಂತ ಅನ್ನಿಸದಂತಹ ಒಲವಿನಲ್ಲಿನ ಶುದ್ಧ ಕಳಕಳಿ ಎದ್ದು ಕಾಣುತ್ತಿದೆ. ನಿಮ್ಮ ಕನಸುಗಳ ಪಯಣಕ್ಕೆ ಶುಭವಿರಲಿ…!!

    • ಗಣೇಶ್ ನೆಂಪೆ

      Thanks Manju..

  3. mmshaik

    koneya saalugaLu mana tattuttave..sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading