ಚಂದ್ರಶೇಖರ ಆಲೂರು

ಈಚಿನ ಬಸ್ ಪ್ರಯಾಣದಲ್ಲಿ ಆಲಿಸಿದ್ದು .
ಮಧ್ಯ ವಯಸ್ಕ ಮಹಿಳೆಯೊಬ್ಬರು ತುಂಬಾ ಆತಂಕದಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತಲೇ ಇದ್ದರು
ಕೆಲವೊಮ್ಮೆ ಗದ್ಗದಿತರಾಗುತ್ತಿದ್ದರು. ಬಹುಶಃ ಕುಟುಂಬ ಸದಸ್ಯರು, ಆಪ್ತೆಷ್ಟರು.. ಹೀಗೆ ಹಲವರೊಂದಿಗೆ. ಕೊನೆಯಲ್ಲಿ ಒಬ್ಬರೊಂದಿಗೆ ಮಾತನಾಡುವಾಗ ಅವರ ಕಣ್ಣುಗಳು ಹನಿಗೂಡಿದವು. ಆದರೂ ಧ್ವನಿಯಲ್ಲಿ ದೃಢತೆ ಇತ್ತು.
ಅವರು ಹೇಳಿದರು :
“ನೋಡವ್ವಾ ಜೀವನದಲ್ಲಿ ಎಷ್ಟೊ ವಿಷಯಗಳು ನಮ್ಮ ಜೊತೆಯಲ್ಲೇ ಬಾಳುವೆ ಮಾಡಬೇಕು
ನಮ್ಮೊಂದಿಗೆ ಸಾಯಬೇಕು ಅಷ್ಟೆ ”
ಎಂದು ಫೋನ್ ಡಿಸ್ ಕನ್ನೆಕ್ಟ್ ಮಾಡಿ ಸೆರಗಿಂದ ಕಣ್ಣೊರೆಸಿಕೊಂಡು ನನ್ನತ್ತ ನೋಡಿದರು.
ನಾನು ನಿದ್ದೆಯಲ್ಲಿ ಇರುವವನಂತೆ ನಟಿಸಿದೆ





0 Comments