ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಾನು ದೇವರಿಗೆ ಎಲ್ಲಾ ಹೇಳ್ತೀನಿ..' – ಸಿರಾಜ್ ಬಿಸರಳ್ಳಿ ಬರೆದ ಕವನ

ನಾನು ದೇವರಿಗೆ ಎಲ್ಲಾ ಹೇಳ್ತೀನಿ !

( ಬಾಂಬ್ ದಾಳಿಗೆ ಸಿಕ್ಕು ಗಂಭೀರವಾಗಿ ಗಾಯಗೊಂಡಿದ್ದ ಸಿರಿಯಾದ 3 ವರ್ಷದ ಪುಟ್ಟ ಬಾಲಕ ಸಾಯುವ ಮುನ್ನ ಹೇಳಿದ ಮಾತುಗಳಿವು)

– ಸಿರಾಜ್ ಬಿಸರಳ್ಳಿ

 

ನಿನ್ನ ಗುಲಾಬಿ ತುಟಿಗಳಲ್ಲಿ ಆ ಶಕ್ತಿ ಇರಲಿ
ನಿನ್ನ ಪುಟ್ಟ ಕೈಗಳಿಗೆ ಬಲ ಬರಲಿ
ನೀನು ಹೇಳಬೇಕಾಗಿರುವುದು ಬಹಳ ಇದೆ
ನಿನ್ನ ಮುದ್ದು ಬಾಯಿಗೆ ದಣಿವಾಗದಿರಲಿ
ಎಲ್ಲಿಂದ ಶುರು ಮಾಡುವೆ
ಇದರ ಇತಿಹಾಸ ಬಹಳ ದೊಡ್ಡದಿದೆ
ಭರ್ಚಿಯಿಂದ ಬಾಂಬಿನವರೆಗೆ
ನೀರಿನಿಂದ ಭೂಮಿಯವರೆಗಿನ ಕತೆ
ನೆಪಗಳು ಬೇಕು ನೆತ್ತರ ಹೀರಲು
ಲಾಲಿಪಪ್ , ಐಸ್ ಕ್ರಿಂ, ಚಾಕೋಲೆಟ್
ಶಬ್ದಗಳ ಹೊರತಾಗಿ ನಿನಗೆ ಗೊತ್ತಿರುವ ಶಬ್ದ ಯಾವುದು
ನಿನ್ನ ಚೆಂಡಾಟದಂತಲ್ಲ ಈ ಆಟ ಇದರ ಅರಿವು ನಿನಗಿಲ್ಲ
ನೆತ್ತರದ ನದಿಗಳ ನೋಡಿದವನಿಗೆ
ಸುರಿಯುತಿರುವ ನಿನ್ನ ರಕ್ತ ಮರುಕ ಹುಟ್ಟಿಸದು
ಎಷ್ಟಗಲ ಮಾಡಿ ತೋರಿಸುವೆ ನಿನ್ನ ಪುಟ್ಟ ಕೈಗಳ
ಸಾಕಾಗದು ಮಗು
ಕ್ರೌರ್ಯ ಅಳತೆ ಮೀರಿದೆ
ನೀನು ಹೇಳಬಹುದಾದರೂ ಏನು?
ಅವನಿಗೆ ಗೊತ್ತಿಲ್ಲದ್ದು ಹೊಸದು ಯಾವುದಿದೆ
ಎಲ್ಲೊ ಹೂದೋಟದಲ್ಲಿ ಆಡಬೇಕಾದವನು
ಈ ಸಮಾಧಿಯೊಳಗೆ ಏಕೆ ಬಂದೆ ?
ನಿನಗರಿವಿಲ್ಲ .. ದೊಡ್ಡವರ ಪಗಡೆ ಆಟದಲ್ಲಿ ಜೀವಗಳಿಗೆ ಬೆಲೆ ಇಲ್ಲ
ನೆತ್ತರು ಕಾಣದೇ ನಿದ್ದೆ ಬಾರದವರಿಗೆ
ಹೆದರಬೇಡ… ಸುಮ್ಮನೆ ಮಲಗು
ಅಪ್ಪನ ಮುಂದೆ ಹೇಳಿದಷ್ಟು ಸುಲಭವಲ್ಲ
ಯಾವ ಭಾಷೆಯಲ್ಲಿ ಹೇಳುವೆ?
ಯಾವ ದೇವರಿಗೆ ಹೇಳುವೆ?
ದೇವರುಗಳ ಆಯ್ಕೆ ಮಾಡುವ ಶಕ್ತಿ ನಿನಗೆ ಬರಲಿ
ಮಂದಿರ ಮಸೀದಿ ಚರ್ಚುಗಳ ಮೀರಿದ ದೇವ ನಿನಗೆ ಸಿಗಲಿ
ನೀನಾರಿಗಾದರೂ ಹೇಳು
ದೇವರಪ್ಪನ್ನಪ್ಪನ್ನಪ್ಪನಿಗಾದರೂ ಹೇಳು
ಆದರೆ ಒಂದು ಕ್ಷಣವಾದರೂ ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡಲು ಹೇಳು
ಒಂದು ಮಾತು ತಪ್ಪದೇ ಹೇಳು
ದೇವ ಇದಕ್ಕೆಲ್ಲಾ ಕಾರಣ
ನೀನೇ !

‍ಲೇಖಕರು G

16 August, 2014

10 Comments

  1. ಲಕ್ಷ್ಮೀಕಾಂತ ಇಟ್ನಾಳ

    ‘ಯಾವ ಭಾಷೆಯಲ್ಲಿ ಹೇಳುವೆ?
    ಯಾವ ದೇವರಿಗೆ ಹೇಳುವೆ?’ ಕವನದ ಸಾಲುಗಳು ಚನ್ನಾಗಿವೆ. ಕವನದ ಆಂತರ್ಯ ಅಗಾಧ. ಅವನೇ ಇದಕ್ಕೆ ಕೊನೆ ಹಾಡಬೇಕು. ಆ ಕಾಲ ಎಂದು ಬರುವುದೋ? ಆಶಾವಾದಿಯಾಗಿರೋಣ.

  2. Prabhakar M. Nimbargi

    ದೇವ ಇದಕ್ಕೆಲ್ಲಾ ಕಾರಣ ನೀನೇ!
    Tumba maarmika kavite. Aa maguvina kamgaLalli hudugi hogiddannella kedaki tegediddeeri. Let’s all get ಮಂದಿರ ಮಸೀದಿ ಚರ್ಚುಗಳ ಮೀರಿದ ದೇವ. Then only there can be peace in this world! Though I too would prefer to be optimistic, optimism is bound to fail as far as the last man resides on the earth.

  3. mmshaik

    siraj…kannalli nirukkisitu nimma kavana..hrudayangama..!!

  4. amardeep.p.s.

    ಸಿರಾಜ್ ಭಾಯ್ …. ತುಂಬಾ ಕಾಡುವ ಸಾಲುಗಳು …..

  5. ಹನುಮಂತ ಹಾಲಿಗೇರಿ

    ಇಷ್ಟವಾಯಿತು. ದೇವರು ಅರ್ಥ ಮಾಡಿಕೊಳ್ಳಲಿ.

  6. ಮಂಜುನಾಥ್. ಪಿ

    ಮನ ಕಲುಕಿತು…

  7. Anonymous

    superb

  8. ಆರ್. ಎಸ್. ನಾಯಕ

    ಕವನ ಅದ್ಭುತವಾಗಿತೆ.
    “ಒಂದು ಮಾತು ತಪ್ಪದೇ ಹೇಳು
    ದೇವ ಇದಕ್ಕೆಲ್ಲಾ ಕಾರಣ
    ನೀನೇ!”
    -ಎಂಬ ಸಾಲುಗಳು ಅರ್ಥಪೂರ್ಣವಾಗಿವೆ. ಧನ್ಯವಾದಗಳು.

  9. Kiran

    Wonderful!
    Great thoughts…
    Olleya Kavithe.

  10. Anonymous

    It is great. very touching.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading