ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಕೃಷ್ಣನೊಂದಿಗೆ..

ಮನಸಿನ ಹೊಸ್ತಿಲಲೆ

%e0%b2%b8%e0%b3%81%e0%b2%a8%e0%b2%bf%e0%b2%a4%e0%b2%be-%e0%b2%95%e0%b3%86-%e0%b2%95%e0%b3%86

ಸುನಿತಾ ಕೆ ಕೆ

ಬೃಂದಾವನ ಮೇಯುತ್ತಾ
ಚಲಿಸುತ್ತಿವೆ ಅಕ್ಷರಗಳು
ಶಬ್ಧಗಳ ಹೊದಿಕೆಯಡಿ
ನಾನು ಕೃಷ್ಣನೊಂದಿಗೆ

ಬೆಳಕು ಕಣ್ಮುಚ್ಚುತ್ತಲೇ
ಕಣ್ಣಲಿ ಪ್ರಣಯ ತರಂಗ
ತುಟಿಯ ಮೋಹ ಮಳೆ
ನೂಪುರ ಮಣಿ ಮೇಳದ
ನಡುವೆ

02
ಸುಪ್ರಭಾತ ದರ್ಶನ ನೀಡದೆ
ಮಾಯಾವಾದೆ
ಮುಳ್ಳಿದ್ದರೂ ನೋಯಿಸಿಲ್ಲ
ಗಿಡಗಳು
ವಿರಹವಿಲ್ಲ ಕೃಷ್ಣಾ
ನೆನಪುಗಳಿವೆ
ದಿಟ
ನೀ ನನ್ನ ಸ್ವಂತವಲ್ಲ
ಅಸ್ತಮಕೆ ಕಾಡುಮಲ್ಲಿಯ ಗಂಧ
ನೆನಪುಗಳು ನೇವರಿಸುತ್ತಿವೆ
ಒಂಟಿತನದಲಿ
ಮನಸಿನ ಮಧುಚಂದ್ರ ವೇದಿಕೆಯ
ಹೊಸ್ತಿಲಲ್ಲೇ ಛದ್ಮವೇಷ
ಸಾದರ ಪಡಿಸಿ ಬಿಟ್ಟೆ

‍ಲೇಖಕರು admin

6 November, 2016

2 Comments

  1. Sangeeta

    ಚೆನ್ನಾಗಿದೆ ಕವಿತೆ
    ಸಂಗೀತ ರವಿರಾಜ್

  2. smitha Amrithraj.

    Chennagide kavite… smitha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading