ಘಜಲ್

ಶ್ರೀದೇವಿ ಕೆರೆಮನೆ
ನೀವು ನನ್ನ ಮನದ ಕೋಟೆಗೆ ಲಗ್ಗೆ ಹಾಕಿದಿರಿ.
ನಾನು ಎದೆಯ ದಿಡ್ಡಿ ಬಾಗಿಲನು ತೆರೆದಿಟ್ಟು ನಿಮಗಾಗಿ ಕಾದೆ
ನೀವು ನನ್ನ ನಗುವನ್ನು ಸರ್ವಸ್ವ ಎಂದಿರಿ
ನಾನು ಸಹಿಸಲಾಗದ ನೋವಲ್ಲೂ ನಗುವಿನ ಹೂಮಾಲೆ ಹೆಣೆದೆ
ನೀವು ನಿಮ್ಮ ಮನಸು ಙ್ನೊಳಗೆ ಮಾತಾಗುತ್ತದೆ ಎಂದಿರಿ
ನಾನು ಜಗದ ಧ್ವನಿಯನ್ನೆಲ್ಲ ಶೇಖರಿಸಿ ಮಾತಾಗಿಸಿದೆ
ನೀವು ಇಹದ ಘನಿರ್ಭಹಿಸುವ ಸುಖಕ್ಕಾಗಿ ಕಾತರಿಸಿದಿರಿ
ನಾನು ಮೆತ್ತನೆಯ ಮೊಲೆ,ಬಳುಕುವ ನಡು ಹೊತ್ತು ಹೆಣ್ಣಾದೆ
ನೀವು ಉತ್ತ ಭುಮಿಯಲ್ಲೊಂದು ಬೀಜ ಮೊಳಕೆಯಾಗಲು ಕಾದಿರಿ
ನಾನು ಕದಿರೊಳಗೆ ‘ಸಿರಿ’ ಹೊತ್ತ ಹಾಲ್ದೆನೆಯಾದೆ






Tumba artha garbhita preeti Prema Andre idene alva
ಚೆನ್ನಾಗಿದೆ ಕವಿತೆ
ಕದಿರೊಳಗೆ’ಸಿರಿ ‘ ಹೊತ್ತ. ಹಾಲ್ದೆನೆ.
ಚೆಂದದ ಸಾಲು.
ಅರ್ಥಪೂರ್ಣ ಕವಿತೆ ಚೆನ್ನಾಗಿದೆ
ಚೆಂದವಿದೆ
ಚೆಂದ ಸಾಲುಗಳು. ಹೆಣ್ಣಿನ ಆಪ್ತ ಒಲವು ಅಂತಹದ್ದು
ಬಲು ಸೊಗಸಾದ ಸಾಲುಗಳು…