ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಎಂ ಆರ್ ಕಮಲ..

ನಾನು
ಎಂ.ಆರ್.ಕಮಲ

ನಾನು,
ಗಂಡನೇ ದೇವರೆಂದು
ವನವಾಸ ಮಾಡಿ
ಅಗ್ನಿಗೆ ದುಮುಕುವ
‘ ಸೀತೆಯಲ್ಲ’.

ನಾನು,
ದಡ್ಡ ಧರ್ಮರಾಯನ
ಗೊಡ್ಡು ಸತ್ಯಕೆ ಬೆದರಿ
ಸೀರೆ ಸೆಳೆಸಿಕೊಳ್ಳುವ
‘ದ್ರೌಪದಿ’ಯಲ್ಲ.

ನಾನು,
ಅರ್ಜುನ ಬರವಿಗೆ
ದೀರ್ಘಕಾಲ ತಪಸ್ಸಾಚರಿಸಿದ
‘ಚಿತ್ರಾಂಗದೆ’ ಯಲ್ಲ.

ನಾನು,
ಗಂಡನ ಪ್ರಾಣಕ್ಕಾಗಿ
ಯಮನ ಹಿಂದೆ ನಾಯಿಯಂತಲೆದ
‘ಸಾವಿತ್ರಿ’ಯೂ ಅಲ್ಲ.

ನಾನು,
ನನ್ನೆಲ್ಲ ಸಣ್ಣತನದ
ಸ್ವಾರ್ಥದ
ಮಾನವೀಯ ಭಾವನೆಗಳ
ಒಂದು ಮೊತ್ತ.

‍ಲೇಖಕರು avadhi

8 March, 2018

3 Comments

  1. ರಘುನಾಥ

    ಚಂದದ ಕವನ

  2. Anasuya M R

    ನೆನಪಿನಾಳಕ್ಕಿಳಿಯುವ ಕವನ

  3. Sreenivasa

    ಇದಪ್ಪ ವರಸೆ , ಮೆಚ್ಚಿದೆ , ಹೀಗೆಯೇ ಇರಬೇಕು , ಹಾಗೆಯೇ ಬಾಳಬೇಕು
    ಪುರಾಣದ ಚಿತ್ರಗಳ ಕಟ್ಟಿ , ಸಡ್ಡು ಹೊಡೆದ ದಿಟ್ಟತನಕ್ಕೊಂದು ಸಲಾಮು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading