ಮಂಡ್ಯದಿಂದ ಮುಂಬೈಗೆ ಓಡಿಹೋದ ಹುಡುಗ ಅಲ್ಲಿಂದ ಮರಳಿದ್ದು ಹುಡುಗಿಯಾಗಿ. ಪಿಯುಸಿ ವರೆಗಿನ ಓದು ಮುಂದೆ ಸಾಗದೆ ಮತ್ತೊಮ್ಮೆ ಹೋಗಿದ್ದು ಮುಂಬೈಗೆ.
ಆದರೆ ಅಲ್ಲಿ ಮಂಗಳಮುಖಿಯರು ಬದುಕಲು ಅವಲಂಬಿಸುತ್ತಿದ್ದ ಭಿಕ್ಷೆ ಅಥವಾ ಮೈಮಾರಾಟದ ವೃತ್ತಿ ಇಷ್ಟವಿಲ್ಲದೆ ತನ್ನೊಳಗಿದ್ದ ನೃತ್ಯ, ಅಭಿನಯ ಕಲೆಯನ್ನೇ ನಂಬಿಕೊಂಡು ಉಡುಪಿಗೆ ಬಂದವಳು ಈ ಫೋಟೋದಲ್ಲಿರೋ ರೂಪದರ್ಶಿ ಕಾಜಲ್.
ಊರೂರಿಗೆ ಹೋಗುತ್ತಿದ್ದ ಸೈಕಲ್ ಸರ್ಕಸ್ ತಂಡದ ನೃತ್ಯಗಾರ್ತಿಯಾಗಿ ಜೀವನ ನಡೆಸುತ್ತಿದ್ದವಳು ಈಗ ಆಶ್ರಯ ಎಂಬ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತಾನು ಮಂಗಳಮುಖಿ ಎನ್ನಲು ಎಳ್ಳಷ್ಟೂ ಅಳುಕಿಲ್ಲದೆ, ಗಂಡು ಹೆಣ್ಣಿನಂತೆ ತಾನೂ, ತನ್ನೊಳಗಿನ ಕಲಾವಿದೆಯನ್ನು ಪಳಗಿಸಿ ಬದುಕುವ ಹಂಬಲ ಅವಳದು.
“ನಾನು ಅವನಲ್ಲ ಅವಳು” ಸಿನಿಮಾ ಪ್ರದರ್ಶನದ ದಿನ ಕಾಜಲ್ ಪರಿಚಯವಾಯ್ತು. ಈಗಾಗಲೇ ಪಿ.ಯು.ಸಿ ಓದಿರೋ ಅವಳಿಗೀಗ ಡಿಗ್ರಿ ಓದೋ ಕನಸು. ಜೊತೆಗೆ ತನ್ನದೊಂದು ಆತ್ಮಕಥೆ ಬರೆಯೋ ಮನಸ್ಸು. ವಾಟ್ಸ್ಯಾಪ್ “ಓದುಗರು” ಬಳಗ ಅವಳಿಗೀಗ ಬಿ.ಎ ಕಲಿಸಲು ಮುಂದಾಗಿದೆ. ಅವಳೊಂದಿಗೆ ಮತ್ತೆ 5 ಮಂದಿ ಮಂಗಳಮುಖಿಯರು ಎಸ್ಸೆಸ್ಸೆಲ್ಸಿ ಕಲಿಯಲು ಮುಂದೆ ಬಂದಿದ್ದಾರೆ.
ಭಾವನೆಗಳು ಬದಲಾಗುವುದು ಗೊತ್ತಾದಕೂಡಲೇ ಸ್ವತಃ ಮನೆ ಬಿಟ್ಟೋ, ಮನೆಯವರೇ ಹೊರದೂಡಿಯೋ ಅರ್ಧಕ್ಕೆ ನಿಂತ ವಿದ್ಯೆಯನ್ನು ಈಗ ಮತ್ತೊಮ್ಮೆ ಮುಂದುವರೆಸಲು ಸಿದ್ಧರಾಗಿದ್ದಾರೆ.
ಕಾಜಲ್ ಸೇರಿದಂತೆ ನಗ್ಮಾ ಮತ್ತು ಸಂಜೀವ ವಂಡ್ಸೆ ಅವರ ಆತ್ಮಕಥೆ ಇನ್ನು ಒಂದೆರಡು ತಿಂಗಳಲ್ಲಿ ಬಿಳಿಕಲ್ಲು ಪ್ರಕಾಶನದಿಂದ ಪ್ರಕಟವಾಗಲಿದೆ. ಓದುಗರು ಬಳಗದ ಸದಸ್ಯ, ಬಿ.ಎಸ್ಸಿ ವಿದ್ಯಾರ್ಥಿ ಗಣಪತಿ ದಿವಾಣ ಆ ಮೂವರ ಮಾತುಗಳನ್ನು ಕೇಳುತ್ತಾ, ಬರೆಯುತ್ತಾ ಅವರ ಆತ್ಮಕಥೆಯ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾನೆ.
ಆ ಕಾರ್ಯನಿಮಿತ್ತ ಕಾಜಲ್ ಮನೆಗೆ ನಾವಿಬ್ಬರು ಹೋಗಿದ್ದಾಗ ನಮ್ಮನ್ನು ಸೆಳೆದಿದ್ದು ಒಂದು ಆಲ್ಬಮ್. ಅದರ ತುಂಬಾ ಕಾಜಲ್ ಫೋಟೋಗಳೇ. ವಿವಿಧ ಬಟ್ಟೆ, ಭಂಗಿಯಲ್ಲಿರೋ ಆ ಫೋಟೋಗಳು ಆಕೆಗಿರೋ ಮಾಡೆಲಿಂಗ್, ಅಭಿನಯದ ಹುಚ್ಚನ್ನು ಸಾರಿಹೇಳುತ್ತಿತ್ತು.
ಮುಖ್ಯವಾಹಿನಿಗೆ ಬರಲು ಕಾಜಲ್ ರಂತಹ ಮಂಗಳಮುಖಿಯರನೇಕರು ಮುಂದೆ ಬಂದಿದ್ದಾರೆ. ಅವರನ್ನು ಕಂಡಕೂಡಲೇ ಹೆದರದೆ, ಅಸಹ್ಯಪಡದೆ, ಕಿರುಕುಳ ಕೊಡದೆ ಅವರ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ನಮ್ಮಂತೆಯೇ ಅವರು ಎಂದು ಒಪ್ಪಿಕೊಳ್ಳುವುದಷ್ಟೇ ನಮ್ಮಲ್ಲಿ ಆಗಬೇಕಾದ ಬದಲಾವಣೆ.
ಭಾವನೆಗಳು ಬದಲಾಗುವುದು ಗೊತ್ತಾದಕೂಡಲೇ ಸ್ವತಃ ಮನೆ ಬಿಟ್ಟೋ, ಮನೆಯವರೇ ಹೊರದೂಡಿಯೋ ಅರ್ಧಕ್ಕೆ ನಿಂತ ವಿದ್ಯೆಯನ್ನು ಈಗ ಮತ್ತೊಮ್ಮೆ ಮುಂದುವರೆಸಲು ಸಿದ್ಧರಾಗಿದ್ದಾರೆ.
ಕಾಜಲ್ ಸೇರಿದಂತೆ ನಗ್ಮಾ ಮತ್ತು ಸಂಜೀವ ವಂಡ್ಸೆ ಅವರ ಆತ್ಮಕಥೆ ಇನ್ನು ಒಂದೆರಡು ತಿಂಗಳಲ್ಲಿ ಬಿಳಿಕಲ್ಲು ಪ್ರಕಾಶನದಿಂದ ಪ್ರಕಟವಾಗಲಿದೆ. ಓದುಗರು ಬಳಗದ ಸದಸ್ಯ, ಬಿ.ಎಸ್ಸಿ ವಿದ್ಯಾರ್ಥಿ ಗಣಪತಿ ದಿವಾಣ ಆ ಮೂವರ ಮಾತುಗಳನ್ನು ಕೇಳುತ್ತಾ, ಬರೆಯುತ್ತಾ ಅವರ ಆತ್ಮಕಥೆಯ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾನೆ.
ಆ ಕಾರ್ಯನಿಮಿತ್ತ ಕಾಜಲ್ ಮನೆಗೆ ನಾವಿಬ್ಬರು ಹೋಗಿದ್ದಾಗ ನಮ್ಮನ್ನು ಸೆಳೆದಿದ್ದು ಒಂದು ಆಲ್ಬಮ್. ಅದರ ತುಂಬಾ ಕಾಜಲ್ ಫೋಟೋಗಳೇ. ವಿವಿಧ ಬಟ್ಟೆ, ಭಂಗಿಯಲ್ಲಿರೋ ಆ ಫೋಟೋಗಳು ಆಕೆಗಿರೋ ಮಾಡೆಲಿಂಗ್, ಅಭಿನಯದ ಹುಚ್ಚನ್ನು ಸಾರಿಹೇಳುತ್ತಿತ್ತು.ಮುಖ್ಯವಾಹಿನಿಗೆ ಬರಲು ಕಾಜಲ್ ರಂತಹ ಮಂಗಳಮುಖಿಯರನೇಕರು ಮುಂದೆ ಬಂದಿದ್ದಾರೆ. ಅವರನ್ನು ಕಂಡಕೂಡಲೇ ಹೆದರದೆ, ಅಸಹ್ಯಪಡದೆ, ಕಿರುಕುಳ ಕೊಡದೆ ಅವರ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ನಮ್ಮಂತೆಯೇ ಅವರು ಎಂದು ಒಪ್ಪಿಕೊಳ್ಳುವುದಷ್ಟೇ ನಮ್ಮಲ್ಲಿ ಆಗಬೇಕಾದ ಬದಲಾವಣೆ.
——

ಮಂಜುನಾಥ್ ಕಾಮತ್

0 Comments