ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಅಂಗಳದಲ್ಲಿ ನಿಂತು..

 

 

 

ಶಿವಕುಮಾರ್ ಮಾವಲಿ

 

 

 

 

ಎಲ್ಲ ಮರಗಳೂ ಮೊದಲು
ಸಣ್ಣ ಸಣ್ಣ ಸಸಿಗಳಂತೆಯೇ ಅಲ್ಲವೆ ?
ನಾನೂ ಸಣ್ಣವನಿದ್ದೆ ಆಗ …
ಈ ‘ಮರ’ದ ಸಸಿ ನೆಟ್ಟಾಗ

ಬೇಕಾದ್ದು ಕೊಡಿಸುತ್ತ ,ತಿನಿಸುತ್ತ
ಬೆಳೆಸಿದರು ನನ್ನ ಪೋಷಕರು
ಹಾಗೆಯೇ ನೀರೆರೆದು ಹದಮಾಡಿ
ನಾನು ಬೆಳೆಸಿದ್ದು ಈ ಮರವನ್ನು

ಮೊದಲೆಲ್ಲ ಅಪ್ಪ ಅಮ್ಮನ ಮಾತಿಗೆ
‘ಊಹ್ಹೂಂ’ ಎನ್ನುತ್ತಿರಲಿಲ್ಲ ನಾನು…
ಥೇಟ್ ನನ್ನಂತೆಯೇ ಬೆಳೆಯುತ್ತಿತ್ತು
ಆ ಮರವೂ ನಾನು ಬಾಗಿಸಿದ ಕಡೆಗೆ ಬಾಗುತ್ತ

ಅದೊಂದು ದಿನ ಬೆಳಗ್ಗೆ ಅಪ್ಪ ಕೆನ್ನೆಗೆ
ಹೊಡೆದಾಗ ನಾನು ಮೊದಲು ಪ್ರತಿಭಟಿಸಿದ್ದು
ಆ ದಿನವೇ ಆ ಮರದ ಬೆಳವಣಿಗೆಯೂ
ನನ್ನ ನಿಯಂತ್ರಣ ತಪ್ಪಿಸಿ
ಮನಸೋ ಇಚ್ಛೆ ಹರವಿಕೊಳ್ಳಲಾರಂಭಿಸಿದ್ದು..

‘ಬೆಳೆದು ನಿಂತ ಮಕ್ಕಳೆಲ್ಲಿ ನಮ್ಮ ಮಾತು ಕೇಳ್ತಾರೆ ? ‘
ಬಂದವರ ಬಳಿಯೆಲ್ಲ ಅಪ್ಪ ದೂರುತ್ತಿದ್ದರೆ ,
ನಾನು ಅಂಗಳದಲ್ಲಿ ನಿಂತು,
ಆಳೆತ್ತರಕ್ಕೆ ಬೆಳೆದು ನಿಂತ ನನ್ನದೇ ತೆರನಾದ
ಆ ಮರವನ್ನು ನೋಡುತ್ತ ನಸು ನಗುತ್ತೇನೆ ..

ಬೆಳೆಸಿದ ಎಂಬ ಒಂದೇ ಕಾರಣಕ್ಕೆ ಅಪ್ಪನಿಗೆ
ನನ್ನ ಮೇಲೆ ಹಕ್ಕು ಸಾಧಿಸಲಾಗಲಿಲ್ಲ
ನೆಟ್ಟು ನೀರುಣಿಸಿದ ಮಾತ್ರಕ್ಕೆ
ಆ ಮರ ನನ್ನದಾಗಲೂ ಇಲ್ಲ

‍ಲೇಖಕರು avadhi

5 December, 2017

1 Comment

  1. Uday Itagi

    Nice poem.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading