ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾನು’…

-ಸತ್ಯಬೋಧ ಜೋಶಿ

ಹೊಳಹು ನನ್ನದು ಎಂಬ ಹೆಮ್ಮೆಯು ನನದಲ್ಲ.

ಮತ್ತಿದರ ಅನುರಣನ ಎಂಬ ಹೆಮ್ಮೆ.

ಸೃಷ್ಟಿ ಸ್ರೋತದ ಒಸರು ಭೋರ್ಗರೆದು

ಹರಿದಾಗೆ, ತಿರುಳುಗಟ್ಟಿದ ತಣಿಸೋ ಕೃತಿಯು ಹೆಮ್ಮೆ

ನೆಳಲು ಬೆಳಕಿನ ಆಟ ಚಳಿಯ ಅಪ್ಪುಗೆ ಬೇಟ

ಕಸುವ ಕಾಣದ ಬೀಜ ಕಾಡುಪಾಲೆ

ನಂಟನೂಕಿದ ನೆಲವೆ ಅಂಟಿ ಅಪ್ಪುಗೆ ಇಹುದು

ಬಂಧಮುಕ್ತಿಯ ಗಂಟು ಒಂದೇ ತಾನೆ

ತನ್ನ ತಾನೇ ಗುಣಿಸಿ ಟಿಸಿಲೊಡೆದು ಭಾಗಿಸಿ

ಕುಸುರಿ ಅಪ್ಪುಗೆ ಬಿಚ್ಚೋ ತತಿಯೇ ಮೊಳಕೆ

ಮುಗಿಲ ಮುಟ್ಟಿದ ಎಲೆಯ ನಕ್ಷೆ ಸೆಲೆಯಲೆ ಇಹುದು

ಭಾವಬೀಜದ ಮರವೇ ಕಾವ್ಯ ತಾನೆ

ಬೆರಗು ಮೈಮಣ್ಣಲ್ಲಿ ಮಳೆಹನಿ ಚೆಂಬೆಳಕಲ್ಲಿ

ತನ್ನ ತಾನೇ ಬೆಳೆದ ಹಸಿಸಸಿಯ ಬೆರಗು

ನಾನು ಎನ್ನುವ ಬೆರಗೆ ನಮ್ಮ ದಾಟಿಸೋ ಸಂಕ

ಬೆರಗೆ ಹರುಹನು ತೋರೋ ಪಾತಳಿ ತಾನೆ.

ಮುಗಿಲ ಮುಟ್ಟುವ ಹರಹು ಮಣ್ಣ ತೆವಳುವ ಹರಹು

ಮರುನಂಟ ಬಿಳಲುಗಳ ಅವರವರ ಹರಹು

ಹೀರೋ ಶಬ್ದದ ಬೇರ ಕಣ್ಣು ಹೂವೊಳು ಇಹುದು

ಬಯಕೆ ಹಣ್ಣಿನ ಭೃಂಗ ಕಲ್ಪನೆ ತಾನೇ

ಕಂಪು ಬೀರುವ ಹೂವು ಬರಿಬಿಂಕದಾ ಹೂವು

ಹಣ್ಣಾಗೋ ಹೂವು ಕಾಡು ಹೂವು

ಅರಳಿನಿಂತಿದ್ದೆಲ್ಲ ತಿರುಳುಗಟ್ಟೀತೇನು

ಮಿಕ್ಕುಳಿವ ಸಾರವೇ ಸಿಹಿಯು ತಾನೇ

ಬೇವು ಹುಣಸೆ ಹಲಸು ಎಲ್ಲಾ ಸೇರಿರೆ ಸೊಬಗು

ಮಣ್ಣ ನನಸಿಗೆ ಹೀಗೆ ನೂರು ಕಣ್ಣು

ನಿನ್ನ ಒಳಗಣ ಇಹುದೆ ಜಗದಲಿ ಕಾಣುವಿ

ಜಗವು ಹರಸುವ ಪರಿಯೆ ಬದುಕು ತಾನೇ

ತಾನೇ ತಾನೇ ಎಂದು ನನ್ನ ಮೀರಿದ ಕವಿತೆ

ನಿಮ್ಮ ಮುಟ್ಟದ ಹೊರತು ನನ್ನದಲ್ಲ

ಮಾಗಿ ಮರಳುವ ಮಧ್ಯೆ ಸಿದ್ಧಿ ಸಾಕ್ಷಾತ್ಕಾರ

ನನ್ನ ಸಾವಿಗು ಹೀಗೆ ನೂರು ಜನ್ಮ

‍ಲೇಖಕರು avadhi

5 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. ಜೋಗಿ

    ಮುಗಿಲ ಮುಟ್ಟಿದ ಎಲೆಯ ನಕ್ಷೆ ಸೆಲೆಯಲೆ ಇಹುದು.
    ನಾನು ಎನ್ನುವ ಬೆರಗೆ ನಮ್ಮ ದಾಟಿಸೋ ಸಂಕ
    ಮಾಗಿ ಮರಳುವ ಮಧ್ಯೆ ಸಿದ್ಧಿ ಸಾಕ್ಷಾತ್ಕಾರ

    ಹೀಗೆ ಅನೇಕ ಮಿಂಚುಗಳೂ ಹೊಳಹುಗಳೂ ಈ ಪದ್ಯದಲ್ಲಿ ನನಗೆ ಕಾಣಿಸಿದವು. ಅವು ನಿಮ್ಮನ್ನು ನಿರಂತರ ಕೈ ಹಿಡಿಯಲಿ.

  2. vikas negiloni

    Just beautiful sir,
    kavithege bekada yella kusurigalannu hondida paripoorna bandha. tumba istavaythu sir. Keep writing.
    -Vikas Negiloni

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading