ವಾಗೀಶ
ಸುಡುವ ತಣ್ಣನೆಯ ಮರಳುಗಾಡು
ಮರುಕ ಹುಟ್ಟಿಸುವಂತೆ ನನ್ನನ್ನೇ ದಿಟ್ಟಿಸಿ
ನೋಡಿಯೂ ನೋಡದಂತೆ ನಿಂತ ಆಳೆತ್ತರದ ಕರ್ಜೂರದ ಮರಗಳು.
ಒಂಟಿ ಪಯಣ ಎಂದೇನು ಬೇರೆ ಹೇಳಬೇಕಿಲ್ಲ
ನನ್ನ ಕಾಲ್ ಬೆರಳುಗಳು ನೆಪವಷ್ಟೇ
ನಾನಿಟ್ಟ ಹೆಜ್ಜೆಗಳದು ಬರಿ ನಿನ್ನ ನೆನಪಿಗೆ
ಕಣ್ಗಳು ಸುರಿಸುವ ಕನಸಿನ ಕನಸಿನ ಕತ್ತಲ ಕೋಟೆಯ
ಅಭ್ಯಂಜನವಷ್ಟೇ, ಇರಬಹುದಾ.. ಎಂದೆನ್ನಿಸುವ ಶಂಕೆಯ ಪರಮಾವಧಿ ನನದು..

ಮುಮ್ಮಲ ಮರುಗುವ ಕೋಗಿಲೆ ದನಿಗೆ
ವಸಂತದ ಹೊಸ ಚಿಗುರು ಹುಸಿ ಕಣ್ಣೀರಿಟ್ಟಿತು..
ನನ್ನ ನೋಡಿ ಅಸೂಯೆ ಪಟ್ಟ ಮರಳು ದಿನ್ನೆಯೊಂದು
ಮರಿಚಿಕೆಯನ್ನೇ ನಿಜವೆಂದು ನನ್ನೆದುರು ತಂದು ನಿಲ್ಲಿಸಿ ನಂಬಿಸಿ
ನಕ್ಕು ನನ್ನೆದುರೇ ಮಾಯವಾಯಿತು..
ಮುಂದಿನದೆಲ್ಲ ಬಿರುಗಾಳಿ ಹೊಸ ದಿಕ್ಕಿಗೆ ಡಿಕ್ಕಿ ಹೊಡೆಯುವ ಹಳೆ ಚಾಳಿ
ಈ ಹೃದಯವೆಂಬುದು ನಾಚಿಕೆ ಬಿಟ್ಟು ನಟಿಸುವ ವಾಚಾಳಿ..
ಈ ತಂಪು ಸಂಜೆಗೆ ಸಾವೆಂಬುದಿಲ್ಲ, ಅದೆಷ್ಟೇ ಮಳೆ ಸುರಿದರೂ
ಬಿಸಿಲ್ಗುದುರೆ ನೆನಪುಗಳ ಬೆನ್ನು ಬಿಡುವುದಿಲ್ಲ.
ಮತ್ತೆ ನಾನೊಬ್ಬನೇ ಇಲ್ಲಿ.. ಅದೇನೂ ಹೊಸದಲ್ಲ
ನಗುವ ಮುನ್ನ ಅತ್ತಿತ್ತ ನೋಡಿ ಸುತ್ತಲೂ ತಡಕಾಡಿ
ನಕ್ಕಂತೆ ನಟಿಸಿ.. ಮಳೆಗೆ ಅಳುವುದ ಕಲಿಸಿ
ಮಿಸುಕಾಡದೆ ನಡೆಯುತ್ತೇನೆ , ಎದುರಿಗೆ ಮತ್ತದೇ ಮರಳು ದಿನ






ಒಳ್ಳೆ ಪದ್ಯ ವಾಗೀಚ ಅವರೆ.ು.. ಖ್ತುಷಿ ಆಯ…
very..very nice…
ಮುಮ್ಮಲ ಮರುಗುವ ಕೋಗಿಲೆ ದನಿಗೆ
ವಸಂತದ ಹೊಸ ಚಿಗುರು ಹುಸಿ ಕಣ್ಣೀರಿಟ್ಟಿತು.. ಈ ಎರಡು ಸಾಲುಗಳು ಇಡೀ ಕವನ ಸೊಗಸನ್ನು ಹಾಳುಮಾಡಿವೆ ಅನಿಸುತ್ತದೆ… ಅವೆರಡನ್ನು ಬಿಟ್ಟು ಓದಿದರೆ…ಕವನ ಖುಷಿಕೊಡುತ್ತದೆ…ಮರಳುಗಾಡು,ಒಂಟಿತನ,ತಾಪ…ನಮ್ಮ ಅನುಭವವಳೇ ಆಗುವಷ್ಟು ಪರಿಣಾಮಕಾರಿ…
ಈ ಸಾಲು…
ಅದೆಷ್ಟೇ ಮಳೆ ಸುರಿದರೂ
ಬಿಸಿಲ್ಗುದುರೆ ನೆನಪುಗಳ ಬೆನ್ನು ಬಿಡುವುದಿಲ್ಲ.ಸಿಕ್ಕಾಪಟ್ಟೆ ಇಷ್ಟ ಅಯ್ತು… ಉತ್ತಮಕವನ….
Thank You sir.
ಅದ್ಭುತ ಕಣಪ್ಪ