
ವೈ ಎನ್ ಕೆ ಅವರ ‘ಕೊನೆ ಸಿಡಿ’ ಪುಸ್ತಕದ ಬಿಡುಗಡೆ ಇತ್ತು. ಪ್ರಕಾಶ್- ಪ್ರಭಾ ಕಂಬತ್ತಳ್ಳಿ ಜೋಡಿ ‘ಅಂಕಿತ’ದಿಂದ ಪುಸ್ತಕ ಬಿಡುಗಡೆ ಮಾಡ್ತಾರೆ ಅಂದ್ರೆ ತಿಂಡಿ, ಕಾಫಿ ಗ್ಯಾರಂಟಿ. ಹಾಗಾಗಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬ್ರೇಕ್ ಫಾಸ್ಟ್ ಓಣಿಯಲ್ಲಿ ಸ್ವೀಟ್ ಅನ್ನು ಇನ್ನೇನು ಬಾಯಿಗಿಟ್ಕೋಬೇಕು ಆಗ ಜೋರು ಜೋರು ಮಾತು ಕೇಳಿಸ್ತು. ಇದೇನಪ್ಪಾ ಸಿಹಿ ಮಧ್ಯೆ ಖಾರದ ದನಿ ಅಂತ ತಿರುಗಿ ನೋಡಿದೆ. ನಾಗೇಶ್ ಹೆಗಡೆ, ಟಿ ಎನ್ ಸೀತಾರಾಂ, ವೀರಭದ್ರಪ್ಪ ಬಿಸ್ಲಳ್ಳಿ ಅವರ ಮುಖ ಕೆಂಪಗಾಗಿತ್ತು, ಸಿಟ್ಟು ಕುದೀತಾ ಇತ್ತು, ದನೀನೂ ಬಿರುಸಾಗಿತ್ತು. ನಾಗೇಶ್ ಹೆಗಡೆ ಕೋಪ ಕಂಡವರು ತುಂಬಾ ಕಡಿಮೆ. ಕವಳದ ಬಾಯಿ ಜೊತೆಗೆ ಮುಖವೂ ಕೆಂಪಗಾಗಿ ಹೋಗುತ್ತೆ. ತಿಂಡಿ ತಟ್ಟೆಗೆ ಅಲ್ಲೇ ವಿದಾಯ ಹೇಳಿ ‘ಏನ್ಸಮಾಚಾರ’ ಅಂದೆ. ಮೂವರ ಸಿಟ್ಟು ಇನ್ನೂ ಆರಿರಲಿಲ್ಲ. ‘ಅಲ್ಲೋಡ್ರಿ ಬದನೇಕಾಯಿ ಬೇಕಂತೆ, ಬಿ ಟಿ ಬದ್ನೆಕಾಯ್’ ಅಂದ್ರು.
ಮೀಡಿಯಾ ಮಿರ್ಚಿ ಲೇಖನಕ್ಕಾಗಿ- ಮೀಡಿಯಾ ಮೈಂಡ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments