ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವ್ಯ ಸಾಹಿತ್ಯ ಮತ್ತು ಸಿಲ್ಕ್ ಆಂಬೊಡೆ

ಎಚ್ ಎಸ್ ರೇಣುಕಾರಾಧ್ಯ ಅವರ ಮೂಲಕ

ಯುವಕರಾದ ಈ ಹೊಸ ಜನ ಆಡುತ್ತಿರುವ ಮಾತು ನನಗೆ ತುಂಬಾ ಬಳಕೆಯದು.

40-50 ವರ್ಷಕಾಲ ಕೇಳಿ ಕೇಳಿ ನಮ್ಮ ತಲೆಮಾರಿನವರಿಗೆ ಕಿವಿ ಕಿವುಡಾಗಿದೆ.

ಅದೇ ಮೂದಲೆ; ಅದೇ ಸಮಾಧಾನ. 1912 ರಲ್ಲಿ , Imagism ಹುಟ್ಟಿತು ಇಂಗ್ಲಂಡಿನಲ್ಲಿ ; The waste land ,Ulyss’ s ಬಂದುದು ಸುಮಾರು 1922 ರಲ್ಲಿ! Surrealist manifeasto ಘೋಷಣೆಯಾದುದು 1924 ರಲ್ಲಿ. ಪ್ರಗತಿಶೀಲ ಸಾಹಿತ್ಯ ಎರಡು ಮಹಾಯುದ್ಧಗಳ ನಡುವಣ ಕಾಲವಾದ ನಾಲ್ಕನೆಯ ದಶಕದಲ್ಲಿ. ನವ್ಯಕ್ಕೆ ಮಾತೃಕೆಯಾದ Avant garde ಆರನೆಯ ದಶಕದಲ್ಲಿ.

ಈ ಹಲವರ ಜೀವನದ ಪೂರ್ವಕಾಲವೇ ಅದರ ಬಹುಭಾಗ. ಈ ಒಣಕಲು ಕೋಡುಬಳೆಯನ್ನೇ ಕಡಿಯಿರಿ, ಅಗಿಯಿರಿ ಎಂದರೆ ಅನ್ಯಾಯವಲ್ಲವೆ ವಯಸ್ಸಾದವರಿಗೆ? ಹಳಸಲು ಆಂಬೊಡೆ ಮುರಿದರೆ ಅಂಟಿನ ಎಳೆ ಕಾಣಿಸುತ್ತದೆ. ಅದು ಪೂರ್ತಿ ಬೇಯದಿದ್ದಾಗ. ಅದನ್ನು ಕೈಲಾಸಂ silk ಆಂಬೊಡೆ ಎಂದರು. ಅದರ ರುಚಿಗೆ ಸೋತ ಬೆಂಗಳೂರು ದಂಡಿನ ವಿಲಾಯಿತಿ ಸೋಜರು ಸೇರುಗಟ್ಟಲೆ ಅದನ್ನು ಕೊಂಡು ತಿಂದರು. ಇವೆಲ್ಲ ಸಿಲ್ಕ್ ಆಂಬೊಡೆಗಳು !

ಅವರವರಿಗೆ ನಿಲುಕುವುದನ್ನು ಅವರವರು ಸಾಧಿಸಲಿ ಬೆಲೆಗಳನ್ನೆತ್ತಿ ವಿಮರ್ಶೆ, ಟೀಕೆ ಮಾಡುವಲ್ಲಿ ಆತುರ, ಅಸಹನೆ ಕಡಿಮೆಯಾಗಿ ಸಾಕಲ್ಯದೃಷ್ಟಿ ಬೆಳೆದರೆ ಒಳಿತು.ಕಾಲ ಎಂದಿಗೂ ಕಿರಿಯ ವಯಸ್ಸಿನವರದು ; ಅವರಿಗೆ ಗಂಟಲ ಶಕ್ತಿ ಕೂಡ ಹೆಚ್ಚು ; ಅವರ ಚಟುವಟಿಕೆ ಸಾಹಸಗಳು ಸಹಜ.ಹಳೆಯ ಕಾಲದ ಉಳಿಕೆಗರಾದ ನನ್ನಂಥವರು ಇಷ್ಟನ್ನು ಮಾತ್ರ ಬಯಸಬಲ್ಲೆವು .ಅವರು ಗೆದ್ದರೆ ಭಾಪುರೆ ಎಂಬುದರಲ್ಲಿ ನಾನಂತೂ ಯಾರಿಗೂ ಹಿಂದಾಗಲಾರೆ.

ವಿ.ಸೀ

‘ನೆಳಲು – ಬೆಳಕು’ ಕವನ ಸಂಕಲನದ ಎರಡನೇ ಮುದ್ರಣದ ಮುನ್ನುಡಿಯಲ್ಲಿ…

‍ಲೇಖಕರು avadhi

4 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading