– ಶಾಂತಿ ಅಪ್ಪಣ್ಣ
ನಿನ್ನ ಮರೆಯಲೆಂದು
ಮದಿರೆ ಕುಡಿದೆ
ನೀನು ಮತ್ತೂ ನೆನಪಾದೆ
ನಿನ್ನ ನೋಡಬಾರದೆಂದು
ಕಣ್ಮುಚ್ಚಿ ಕೊಂಡೆ
ಆಗಲೂ ನೀನೇ ಕಂಡೆ
ನಿನ್ನೂರ ತೊರೆದು ಬಂದೆ
ನೋಡಿದರೆ ನಿನ್ನ ನೆನಪನ್ನೂ
ಹೊತ್ತು ತಂದಿದ್ದೆ.
ಹುಗಿದಿಟ್ಟೆ ನಿನ್ನ ನೆನಪನು
ಮನದಾಳದಲಿ,ಆದರದು
ಮೊಳಕೆಯೊಡೆವುದ ಕಂಡು ಬೆರಗಾದೆ
ನಿನ್ನ ನೆನಪನು ಮುಚ್ಚಿ
ಬೆಚ್ಚಗಿಟ್ಟೆ…ಆ ಕಾವಿಗದು..
ಮೊಟ್ಟೆಯೊಡೆದು ಮರಿಯಾಗಿದೆ..
ಸಾಕಾಗಿ, ನಿನ್ನ ನೆನಪುಗಳ
ಕೊಲ್ಲಹೋದೆ..ಏನಾಶ್ಚರ್ಯ..
ನಾನೇ ಸಾಯ ತೊಡಗಿದ್ದೆ!.
]]>





nice one..
nice…
good
good poem,