ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ ಮಯ್ಯ ಕವಿತೆ – ಡ್ರಾ….

ನರೇಶ ಮಯ್ಯ

ಬದುಕು ಬಣ್ಣದ ಹರವು
ಬಾಳು ಬಾಗೆಯ ಮರವು.

ಸಾಲು ಸಾಲಾದ ಸಂಭ್ರಮವು‌ ಇಲ್ಲಿ,
ಸಾವಿರದ ಮನೆಯ ಸಾಸಿವೆಯ ಸಂತೆಗೆ.

ಯಾವುದಿದೆ ವಿಮೆಪ್ಲ್ಯಾನು
ಮರುನಿಮಿಷ ಗೊತ್ತಿರದ ಮರುಳ‌ ಭ್ರಾಂತಿಯಾ ಈ ಬಾಳಿಗೆ.

ಆ ಸ್ಕೂಲು, ಈ ಕೋರ್ಸು ಎಮ್‌ಫ಼ಿಲ್ಲು‌‌ಥ್ರಿಲ್ಲು, ಮರಣ ಶಾಸನ ಗೆಲುವ ಬರಿ ಗುಲ್ಲು ಗುಲ್ಲು.

ಇದು ನನ್ನ ಮನೆ, ನನ್ನದೇ ಈ ರಾಜ್ಯ, ಇಲ್ಲಿದೋ ಇಟ್ಟಿರುವೆ ಬಂಗಾರ ಜೋಡ, ಸಾಗುವುದೆ ಕೊನೆಪಯಣ ಆ ಜೋಡಕೂಡ.

ಅವ್ವನರುಹಿದ‌ ಕಥೆಯ ನಾಯ-ನಾಯಕಿರೆಲ್ಲಿ ತಮ್ಮ, ಒಳಗೊಳಗೆ ಕೋಳೆತೀತು ಗ್ಯಾಂಗ್ರೀನು ಗುಮ್ಮ.

ಆರು-ಮೂರಡಿಯೇ ಸಾಕು ನೆತ್ತಿಯಿಂತಳದೊರೆಗೆ, ಅದೆ ನಿನ್ನ‌ ಬೆಡ್ರೂಮು ಫ಼ೈನಲ್ ಕಣೋ..

ಮೂವತ್ತು ನಲವತ್ತು‌ ಮಲಗಲುಂಟೆ ?,
ಡೂಪ್ಲೆಕ್ಸು ಟ್ರಿಪ್ಲೆಕ್ಸು, ನೆಗೆ ನೆಗೆದು ಬೀಳಲುಂಟೆ ?
ಇಹುದು ಅಲ್ಲೊಂದೇ ಫ್ಲೋರು ಸೆಲ್ಲಾರು‌ಬಾರು,
ಇನ್ನೆಲ್ಲಿ‌ ನಡೆದೀತು ನಿನ‌ ಕಾರು ಬಾರು.

ಡ್ರಾ ಇಲ್ಲೆ ಬಹುಮಾನ ಇಲ್ಲೆ‌ಕಣ,
ಬದಲಾಯ್ತೊ ಕಾಲ ಬರಿ ಮೆಡಿಕಲ್ಲು ಜಾಲ.

ಸ್ವರ್ಗ ನರಕವದು ಬರಿ ಭ್ರಾಂತು ಬಾರೋ
ಮಾಡಬೇಕಿಲ್ಲೆ ಚುಕ್ತ ನಿನ ಖಾತೆ ಮುಕ್ತ.
ಮುಕ್ತ.. ಮುಕ್ತ… ಮುಕ್ತ…

ಬೇಕೆ ಬ್ಯಾಂಕ್ ಬ್ಯಾಲೆನ್ಸು, ರಾಕೆಟ್ಟು ಲೈಸೆನ್ಸು ?
ಬಹುಮಹಡಿ ಲೇಔಟು ಇದೆ ಎಂಬ ಬಿಮ್ಮು- ಫ಼ಿಟ್ನೆಸ್ಸು ಜಿಮ್ಮು ?

ಕೊಂಡ್ಕೊಂಡ್ರೆ ಒಂದು, ಇದೆ ಇದೆಯು ಫ಼್ರೀ‌ ಇನ್ನೊಂದು ಜೊತೆಗೆ, ಎನ್ಬೇಕು-ಏನ್‌ಏನ್ಬೇಕು ತಕ್ಕೋ ಉಚಿತವಿಲ್ಲೆಲ್ಲವೂ, ಸಾವಂತು ಖಚಿತವಿರೊ ಆಫ಼ರ್ ಇದು.

ಇಡಬೇಕು ವಿಲ್ ಮಾತ್ರ ವಿಶ್ ಬ್ಯಾಂಕಲಿ,
ಖಾಲೀ ಅಲೀಬೇಡ ಫ಼ಿಷ್ ಟ್ಯಾಂಕಲೀ.

ಜ್ವಾಕೆ,‌‌‌ ಹುಟ್ಟೀಯೆ ಮತ್ತೆ ನರಮನುಸನಾಗಿ.

ಜೊತೆಗಂತೂ ಬರಲಾರೆ ನಾನೆಂದು ನಿನ ಅಂಗ ಸಂಗ,
ಬಾಕೀ‌ ಇದೆ ಇಲ್ಲಿ ನನ ಖಾತೆ ಸಾಲ.

ಬೈ ಬೈ ಎಂದಷ್ಟೇ ಕೊನೆ ನಮನ‌ ನಿನಗೆ.

ಸ್ನೇಹಾಂಜಲಿ,
ನಾಳೆ ನೇತ್ಹಾಕೋ ಫ಼್ಲೆಕ್ಸಲ್ಲಿ‌ ನಿನ ಶ್ರದ್ಧಾಂಜಲಿ..‌

ಇಲ್ಲೇ ಡ್ರಾ….ಇಲ್ಲೆ ಬಹುಮಾನ….

‍ಲೇಖಕರು Admin

8 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading