ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ ಮಯ್ಯ ಕವಿತೆ: ಜ್ಞಾನ ಸ್ನಾನ

ಜ್ಞಾನ ಸ್ನಾನ ನರೇಶ ಮಯ್ಯ ಇಂತಾಗಿತ್ತು ನೋಡಾ ಜೀವ ಜಾತ್ರೆಯ ಫಲ. ಉಕ್ಕುಕ್ಕಿ ಹರಿವ ಒಳಗಣ ಕ್ಷೊಬೆಗೆ ಬರುವುದೇ ಬರ ? ಒಣ ಭಣಗುಡುವ ಭಕ್ತಿ ಭಾವಕೆ ಎಲ್ಲೆಯೇ ಇಲ್ಲ ಇಲ್ಲಿ.

ಸಾಗುತ್ತಲೇ ಇದೆ ಯಾನ ಒಳಗೆ ಸ್ಮಶಾನ ಮೌನ. ತಿರುಳಾದರೂ ತಿಳಿಯಬಾರದೆ ಈ ಬಾಳ ಭಾನಗಡಿಯ ಒಳತಳದ ಹಂಗಿನದು. ಕೊಟ್ಟೆ ಯಾಕಯ್ಯಾ, ಇಟ್ಟೆಯಾಕಯ್ಯಾ ಬೇಯುವ ಭಾಂಡೆಯಲ್ಲಿ ಕುದಿಯುತ ಕುಣಿವ ಈ ಕಾಯಕವ ? ಸುಟ್ಟು ಕರಕಲಾದಾಲೋ ಮುಕ್ತಿ ? ತಿಳಿದಿಲ್ಲ. ನಿರಂತರ ಏಗಬೇಕು, ಬಿದ್ದು ಬಾಗಬೇಕು, ನಿನ್ನಾಶ್ರಯಕೆ ಕಾದು ಕೆಂಪಾಗಿ ಕರಗಿಬಿಡಬೇಕು. ಆಳೆತ್ತರದ ಆಕಾರ ಅಹಂಕಾರ ಹರಿಯಬೇಕು ಕರ್ಮಠನ ನೆತ್ತಿಯಿಂತಳದವರೆಗೆ. ಆಗ ಬೆತ್ತಲೆ ನೀಗುತ್ತೆ ಕೆಂಪೂ ಕೂಡ ಕರಗಿ ಕಂಪ ಪಸರಿಸಿ ಇಡೀ ಜಗಕೆಲ್ಲ ತಂಪು ನೀಡುವ ಆ ಘಳಿಗೆಗೆ ನನಗೂ, ನಿನಗೂ ಆಹ್ವಾನ ಶುದ್ಧ ನಿಶಿದ್ಧ.]]>

‍ಲೇಖಕರು G

25 January, 2012

2 Comments

  1. Pramod ambekar

    Very Nice words,
    I remember one Song of Chandrakant Kusnaur
    only TWO lines
    Solu Geluvu
    Solu Geluvina Bhayavu
    Huttu Savina Chinte
    Halatu Hosatu Yemba
    Naguvina Chinte

  2. GN Satheesh. kanakapura.

    Smashana viraagya yaake maiyaa, be positive and possessive.
    kavite tumbaa channagide. vachana saahityada dhaatiyallide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading