-ನರೇಶ್ ಮಯ್ಯ
ಸೆಲೆಸುಟ್ಟರೂ ಬಿಡಲಿಲ್ಲ ಭ್ರಾಂತ ಭೂಯಿಷ್ಟ ಬ್ರಹ್ಮಾಂಡ,
ನೆಲೆಬಿಟ್ಟರೂ ನೆಡಲಿಲ್ಲ ನೀಗಿಕೊಂಡ ನೆನಪ.
ಅಜ್ಙಾತದವಸ್ಥೆಯ ನಟ್ಟ ನಡುವಲ್ಲೇ ನಿಲುಕಬೇಕು
ನೀಲಾಂಜನನ ಕಾಲಾಂತರ ಥಿಯರಿ.
ಬುಡ ಮಟ್ಟಸಮೇಲು ಮಾಡಿ ಬಿದ್ದಿತ್ತುತಾತ ಬಿತ್ತಿದ್ದ ಹುಣಸೆ.
ಕಾದು ಕಾವಲಿಗಿರುತ್ತಿತ್ತು ಅಮ್ಮ
ಹಚ್ಚಿಟ್ಟ ಹಣತೆ ಅಪ್ಪನ ಏಕಾಂತ ರಸಲೋಕದಲ್ಲಿ.
ಒಪ್ಪ ಓರಣದ ಜೊತೆಗೆ ರಸದೌತಣವಿತ್ತೀಯೆ ಓರಗಿತ್ತಿ;
ಒರೆಗೆ ಹಚ್ಚ ಬಲ್ಲ ನಿನ್ನಂತರಂಗದ ಕನಸ ಬದಿಗೆ ಒತ್ತಿ.
ಭಿತ್ತಿ ಭಿತ್ತಿಯಲ್ಲೂ ಬೆಳಗುತ್ತೀಯೆ ನೀ ಭಾರತಿಯ ಹಾಗೆ;
ಭತ್ತ ಭತ್ತದ ಕಾಳಿಗೂ ನಮ್ಮೆಸರ ಬರೆದು ಹೋಗೆ.
ನೈರುತ್ಯ ಮಾರುತದಲ್ಲಿ ಹರಿದು ಬಿಡು ಆ ಬೆಳಕಸೋರಲಿ
ಇಲ್ಲಿಗೂ ಒಂದಿಷ್ಟು ಇಲ್ಲವೇ
ಅಂದಷ್ಟು ಸಿಗಲಿ ಬಿಡು ಬುದ್ಧಪೂಣರ್ಿಮೆಗೆ.
ಬುದ್ಧ ಬಂದದ್ದೇ ತಿಳಿಯಲಿಲ್ಲ!
ಕದವಿರಲಿಲ್ಲ . . . ,
ಕನಸಿರಲಿಲ್ಲ . . . . ,
ವಿಲಕ್ಷಣ-ವಿಲೋಪದ ಕಛೇರಿಯಲ್ಲಿ ಕೇಳಿ ಬರುತ್ತಿದೆ
ಅಗೋ ಅಂಬರ ತಂಬುರ ನಾದ.
ಧೂಮೋಲ್ಲಾಸದ ಭ್ರ್ರಾಂತಿಯಲ್ಲಿ ಬೇಯುತ್ತಿದ್ದೇನೆ
ಧೂಮ ಸ್ಪೋಟಗೊಳ್ಳುವಾ ಕಸಿವಿಸಿಗೆ ಕಂಪಿಸಿದೆ
ಕಂದನೊಡಲೊಳಗಿನ ಕಳ್ಳು-ಬೋಟಿ.
ದೊಡ್ಡಣ್ಣನಾ ‘ಧರ್ಪ’ ಧಾಂಧಲೆಗೆಸಿಡಿಯಲಿದೆ
ಸರ್ಪ ಸಾಮ್ರಾಜ್ಯ.
ತೆಳು ನೀಳ ನಗೆಯಲ್ಲಿ ಸೇರಿ ಹೋಗಬೇಕು ತೇಲಿ ಹೋಗಬೇಕು
ಹಾಗೆ. . . . .
ಸೆಲೆ ಸುಟ್ಟ ಹಾಗೆ – ನೆಲೆ ಬಿಟ್ಟ ಹಾಗೆ.







mayya your poem is very good,and realistic,nimma kone salugalu,”telu neeli nageyalli seri hogabeku.teli hogabeku haage sele sutta haage,nele bitta haage” naavellaru ondu dina namma neleyannu bidalebeku alwa geleya. alliruvudu namma mane,illiruvudu summane,adigaru yavatto heliddare,hagene d.v.g baduku jataka bandi.vidhi adara saheba,kudure neen ava peldante payanigaru, maduvego masanako hogenda kadegogo pada kusiva nelavihudu mankutimma, nimma kavana manadalada bhavanegalannu kalakuvantide.
d.ravi varma hospet.
thanks
nijakku adbhuthavada padha proudime nimagide… aala, artha eradarallu nimma prathibhe kaanutthide.
thank you