ನರೇಶ್ ಮಯ್ಯ
ಎದೆಯ ಬಾಂದಳದ
ಅಂಗಳದ ಒಳಗಲ್ಲಿ
ಧುತ್ತೆಂದು ಎರಗಿತ್ತು
ಮಾಯಾ ನಿನಾದವೊಂದು
ಏಕಿಂತು ಏನಿಂತೆಂದರಿವ ಮೊದಲೇ
ಮರೆಯಾಗಿಹೋಗಿತ್ತು
ಇನ್ನೂ ಅರಸುತ್ತಿದ್ದೇನೆ ನಿನ್ನ ಬರವ
ಬಹೆಯೋ ಬಾರದಿಹೆಯೋ . . .
ಎನ್ನೊಡಲ ಕಡಲೊಳಗೆ
ಹಾಯಿದೋಣಿಯೊಂದು
ಕಾದಿಹುದು ಸದಾ ನಿನಗಾಗಿ
ಬೇಕೆಂದಾಗ ಬಾ ಸುಖಿಸು, ರತಿಸು
ನಿನ್ನದೇ ಈ ಎಲ್ಲ
ಜಗದ ಮೊಗದ ನಗುವಿನೊಳಗೆ
ಹರಳುಗಟ್ಟಿದ್ದ ಮೌನ
ಅಂದು ಕರಗಬೇಕು
ಕಣ್ಣ ಬಣ್ಣ ಎಂದೂ ಕಾಣದ
ಚಿತ್ತಾರವೊಂದನ್ನ ಬಿಡಿಸಿ
ಹಾಯಿ ಹಾಯೆಂದು ಲಾಲಿ ಹಾಡಬೇಕು
ಅಹುದು
ಎಂದೋ ಬಚ್ಚಿಟ್ಟ
ಪುಟ್ಟ ಕನಸುಗಳ ಕಿಸೆಯಿಂದೆತ್ತಿ
ಬಿಚ್ಚಿ
ಅವುಗಳೊಡನೆ ಹಾರಿ ಆಚೆ ಹೋಗಬೇಕು
ದೂರ . .
ನೀಲಿ ನಭದಾಚೆ, ನಿಭರ್ಿಡೆಯಿಂದ
ನೀರವ ನಿದ್ದೆ ಹಾಡಬೇಕು
]]>
ನರೇಶ್ ಮಯ್ಯ ಕವಿತೆ: ಮಥನ ಮೀಮಾಂಸೆ
ನಿಮಗೆ ಇವೂ ಇಷ್ಟವಾಗಬಹುದು…





kvite chennagide.
nireekshe..!!! thumbaaa chennagide…