ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ್ ಮಯ್ಯ ಕವಿತೆ-’ಮಂದ್ರ ಲಾಲಿ’..

-ನರೇಶ್ ಮಯ್ಯ

ಮೃಷ್ಟಾನ್ನ ಮೊಗೆಮೊಗೆದು ಕೊಟ್ಟಾಗಲೂ ಏಳಲಿಲ್ಲ

ಅಗೆದಗೆದು ತೆಗೆದಾಗ ನಿನ್ನಾತ್ಮದಂತಧ್ಯರ್ಾನ;

ಮೋಹವೆಂಬ ನಿನ್ನ ಮಸಣದಲ್ಲಿ.

 

ಮಗು, ಮಲಗಬೇಡ

ಏಗು ನಿರಂತರ-ಸಾಗು ಕಾಲಾಂತರ,

ಬಾಗುವುದೇ ಭಾಗ್ಯವೆಂದು ಬಗೆದುಕೋ;

ಮಗು, ‘ಮಗುವಾಗು, ಶಾರದೆಯ ಮಗುವಾಗು’

ಶ್ರಾದ್ಧದ ಶ್ರದ್ಧೆ ಬೇಡೆನಗೆ

ಶುದ್ಧ-ನಿಶಿದ್ಧ ನೆವಗಳ ಲೇಪ ಬೇಡವೇ ಬೇಡ.

 

ಕಾದು ಕುಳಿತಿದ್ದೇನೆ

ನಿನ್ನಮರ ಪರಾಕ್ರಮದ ಪಂದ್ಯ ನೋಡಲಿಕ್ಕೆ,

ವಿಂಧ್ಯದೆತ್ತರಕ್ಕೆ ನಿನ್ನೆಸರ ನೋಡುವ ನಿತ್ಯ ನಂಬುಗೆಯಿಂದ.

ನೆರಳನುರುಳಿಸಿ ನಿನ್ನದೇ ಧ್ಯಾನಸ್ಥ ಆಸ್ಥಾನದಲ್ಲಿ

ಅಮೋಘವಾಗಿ ನೆಲೆನಿಲ್ಲು.

 

ಎಲೆಲೆ. . ಎನ್ನೊಡಲ ಕುಡಿಯೆ,

ಸುಖಿಸುವುದೇ ಈ ಜೀವ ನಿನ್ನಾತ್ಮ ಕಡಿಯೇ.

 

ಸ್ತುತಿಸು ತಾಯಿಯ.

ತಾಯಿ ಭಾರತಿಯ ಭವಿತವ್ಯ ಬಾಗಿನವ ನೀ ನೀಡುವಾ ಘಳಿಗೆ

ನನ್ನಾತ್ಮಕೂ ಇಟ್ಟು ಬಿಡು ಇಷ್ಟು ಮೃಷ್ಟಾನ್ನ.

 

ಎಚ್ಚರಿಕೆ !

ನಿನೇರುವೆತ್ತರದ ತುದಿಯಲ್ಲಿ,

ತಂಬುರನಾದದ ನೈವೇದ್ಯದಲ್ಲಿ

ಧ್ಯಾನಸ್ಥ ಮಧ್ಯಸ್ಥ ನಿನ್ನಾವರಿಸಬಹುದು.

 

 

‍ಲೇಖಕರು avadhi

16 November, 2011

1 Comment

  1. Akshatha Udupa

    Super,,,,Very nice!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading