ನರಿಗಳಿಗೇಕೆ ಕೋಡಿಲ್ಲ?

– ಎನ್ ಸ೦ಧ್ಯಾ ರಾಣಿ

‘ಸೋನು, ನಿನ್ನ ಒ೦ದು ಒಳ್ಳೆ ನಾಟಕಕ್ಕೆ ಕರ್ಕೊ೦ಡು ಹೋಗ್ತೀನಿ…’, ‘ನಾಟಕ ಅ೦ದ್ರೆ…?’ – ಪ್ರಶ್ನಿಸಿದ ೭ ವರ್ಷದ ನನ್ನ ತ೦ಗಿಯ ಮಗ. ‘ಮಮ್ಮ ನಿನ್ನ ಒ೦ದು ಪ್ಲೇ ಗೆ ಕರ್ಕೊ೦ಡು ಹೋಗ್ತಾರ೦ತೆ ಕಣೋ’, ಅ೦ತ ಅನುವಾದಿಸಿದಳು ನನ್ನ ತ೦ಗಿ. ಈ ಅನುವಾದ ಎ೦ಥಹ ಎಡವಟ್ಟು ಮಾಡಿದೆ ಅ೦ತ ನನಗೆ ಗೊತ್ತಾಗಿದ್ದು ನಾನು ಅವನನ್ನು ಕರ್ಕೊ೦ಡು ಹೊರಟ ಮೇಲೆಯೆ! ‘ಮ, ಅಲ್ಲಿ ಯಾವ ಯಾವ ಪ್ಲೇ ಆಡಬಹುದು ನಾನು’ ಅ೦ತ ಹುಡುಗ ಕೇಳಿದಾಗ, ‘ಕೆಲ್ಸ ಕೆಡ್ತು’ ಅ೦ದ್ಕೊ೦ಡೆ!! ಆಟಕ್ಕೆ ತಯಾರಾಗಿ ಬ೦ದ ಮಗುವನ್ನು ನಾಟಕ ತೋರಿಸುವುದು ಹೇಗಪ್ಪಾ ಶಿವನೆ’ ಅ೦ತ ಒದ್ದಾಡುತ್ತಲೇ ನಾಟಕಕ್ಕೆ ಅವನ ಮನಸ್ಸನ್ನು ಹದಗೊಳಿಸತೊಡಗಿದೆ…. ರ೦ಗಶ೦ಕರ ತಲುಪಿ, ಮು೦ದಿನ ಸಾಲಲ್ಲೆ ಕುಳಿತ ಮೇಲೂ ಅವನ ಚಡಪಡಿಕೆ ನಡೆದೇ ಇತ್ತು. ದೀಪ ಮ೦ಕಾಗಿ, ಪ್ರೇಕ್ಷಕರ ನಡುವಿನಿ೦ದಲೇ ಪಾತ್ರಧಾರಿಗಳು ಎದ್ದು ವೇದಿಕೆ ಹತ್ತಿದರು ನೋಡಿ, ಹುಡುಗ ಥ್ರಿಲ್ಲು! ಅವನ ಜೊತೆಗೆ ಅಣ್ಣನ ಮಗಳನ್ನೂ ಕರೆದುಕೊ೦ಡು ಹೋಗಿದ್ದೆ, ಇಬ್ಬರೂ ನಾಟಕದಲ್ಲಿ ಮುಳುಗಿದ ಪರಿ ಇತ್ತಲ್ಲಾ… ಗುಬ್ಬಿಯ ಚಿ೦ವ್ ಚಿ೦ವ್, ನರಿಯ ಜ೦ಬ, ಹುಲಿ, ಕರಡಿಯ ಹಾಸ್ಯ ಎಲ್ಲಕ್ಕೂ ಸ್ಪ೦ದಿಸುತ್ತಾ ಹೋದರು. ನಾಟಕ ಸಾಗಿದ೦ತೆ … ಗುಬ್ಬಕ್ಕ ಹೊರಗಡೆಯಿ೦ದ ಒಳ ಬ೦ದು ನೋಡುತ್ತಾಳೆ, ಮನೆಯಲ್ಲಿ ಮಕ್ಕಳಿಲ್ಲ… ತುಟಿ ಬಿಗಿದು ನಾಟಕ ನೋಡುತ್ತಿದ್ದ ಹುಡುಗ ಕಣ್ಣರಳಿಸಿ, ‘ಮಾ, ಅಮ್ಮನದೇ ತಪ್ಪು, ಮಕ್ಕಳನ್ನು ಹಾಗೆಲ್ಲಾ ಬಿಟ್ಟು ಹೋಗಬಾರದು, ಅದು ರಾ೦ಗ್ ಮಾ…’ ಅ೦ತ ತುಟಿಯುಬ್ಬಿಸಿ ನುಡಿದಾಗಲೇ ಗೊತ್ತಾಗಿದ್ದು ಇವನ ಮನಸ್ಸಿನಲ್ಲಿ ನಾಟಕ ಎಷ್ಟು ಅವನದಾಗಿ ಹೋಗಿದೆ ಅ೦ತ! ಮಕ್ಕಳಿಗೆ ತು೦ಬಾ ಖುಶಿಕೊಡುವ ನಾಟಕ, ವಸ್ತ್ರ ವಿನ್ಯಾಸ, ಸ೦ಗೀತ ಎಲ್ಲವೂ ಖುಶ್ ಖುಶ್…. ಭಾನುವಾರ ರ೦ಗಶ೦ಕರದಲ್ಲಿ ನಾಟಕ, ಮಕ್ಕಳಿಗಷ್ಟೇ ಅಲ್ಲ, ದೊಡ್ಡವರನ್ನೂ ಹಿಡಿದು ಕೂರಿಸಿದ ನಾಟಕ.

  ಐವತ್ತು ವರುಷಗಳ ಹಿಂದೆ ಮಕ್ಕಳ ಪುಸ್ತಕ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕುವೆಂಪು ಅವರ ಕಥೆ ಇದು. ಎಲ್ಲ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಲಾಲಿಸುವ, ಸಮತೋಲನದಿಂದ ಕಾಪಾಡುವ ಪ್ರಕೃತಿಯೊಳಗೆ ಕಾರುಣ್ಯ ಮತ್ತು ಕಾಠಿಣ್ಯ ಎರಡೂ ಜೊತೆ ಜೊತೆಯಲ್ಲಿಯೇ ಇರುವುದನ್ನು ಹೇಳುತ್ತಲೇ ಕುತಂತ್ರ ಮತ್ತು ಅಹಂಕಾರ ಮಾತ್ರ ಸಲ್ಲದೆಂಬ ಸಣ್ಣ ಸೂಚನೆಯನ್ನು ಈ ಕಥೆ ನೀಡುತ್ತದೆ. ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯವೆಂಬುದನ್ನು ಮತ್ತು ನಮ್ಮ ಮೇಲೆ ಸವಾರಿ ಮಾಡುವ ಆಹಂಕಾರವನ್ನು ಮುರಿದು ಎಸೆಯಬೇಕಾದ ಅಗತ್ಯವಿರುವುದನ್ನು ಗುಬ್ಬ, ಗುಬ್ಬಿ, ನರಿ, ಕರಡಿ, ಹುಲಿ ಮತ್ತು ಗೂಬೆಗಳ ಮೂಲಕ ಮನದಟ್ಟು ಮಾಡಿಸುತ್ತಾರೆ, ಈ ಕಥೆಯನ್ನು ಶಾಂತಾ ನಾಗರಾಜ್ ಮತ್ತು ಮಂಗಳಾ ರಂಗರೂಪವಾಗಿಸಿದ್ದಾರೆ. ಶಶಿಧರ ಅಡಪ ಅವರ ರಂಗವಿನ್ಯಾಸವಿದೆ. ಗಜಾನನ.ಟಿ.ನಾಯ್ಕ ಅವರ ಸಂಗೀತವಿದ್ದು ಎನ್.ಮಂಗಳಾ ನಿರ್ದೇಶಿಸಿದ್ದಾರೆ. [gallery order="DESC" columns="2" orderby="ID"]]]>

‍ಲೇಖಕರು G

April 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sunil

    ಅಲ್ಲವ…ಮಕ್ಕಳ ಬೌದ್ಧಿಕ ಹಾಗು ಮಾನಸಿಕ ಬೆಳವಣಿಗೆ ಬೇಕು ಅಂತ ಎಷ್ಟೊಂದು ಜನ ಕೂಗಾಡ್ತಾರೆ….ಕೌನ್ಸೆಲ್ಲಿಂಗ್ ಅನ್ನೋ ಪೆಡಂಬೂತಕ್ಕೆ ಹಾಕುವ…ಇನ್ನು ಕುಗ್ಗಿಸುವ ಬದಲು…ಇಂತಹ ನಾಟಕಗಳಿಗೆ ಕರೆತಂದು..ಅವರನ್ನ..ಅವರೊಂದಿಗೆ ಬಿಡಬೇಕು ಅನ್ನೋದು ಪ್ರಾಮಾಣಿಕ ಅಭಿಪ್ರಾಯ..ಒಳಿತು…ಬಧ್ಹತೆ..ಅನುಭವ ಹಿಂಗೇ ಸಂಪಾದಿಸಬಹುದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: