ಒಂಟಿ ಹೂ
– ಟಿ ಎಸ್ ಗೊರವರ
ಬಿಂಕವ ತೋರಿ ಫಳ ಫಳಿಸೋ ನಕ್ಷತ್ರಕ್ಕೇ ಇಲ್ಲಿ ಕಿಮ್ಮತ್ತು
ಕುಂಡದಲಿ ಅರಳಿದ ಹೂಗಳಿಗೇ ಇಲ್ಲಿ ಬೆಲೆ
ಮಿಣುಕುವ ಚಿಮಣಿಗೆ, ಘಮ ಘಮಿಸುವ ಹೂವಿಗೆ
ನಿಮ್ಮ ಹಂಗು ಬೇಕಿಲ್ಲ ಬಿಡಿ

ನಯ, ನಾಜೂಕು ಮಾತುಗಳೇ ಸಂಗೀತ ನಿಮಗೆ
ಅಲಾದಿ ನಗುವ ತುಟಿಗಳೇ ಬಲು ಇಷ್ಟ ನಿಮಗೆ
ಲಾಲಿ ಹಾಡಿಗೆ ನಿಮ್ಮ ಬಹುಮಾನ, ಮೆಚ್ಚುಗೆ ಬೇಡ ಬಿಡಿ
ಎದೆಯ ಭಾವಗಳ ಬಸಿದು ಪದವ ಹಾಡಿದೆ
ಜನಪದವೇ ನುಡಿಯಾಗಿಸಿ ಕತೆಯ ಹೇಳಿದೆ
ನೀವು ಕೇಳಿಯೂ ಕೇಳದಂತಿದ್ದಿರಿ
ನಿಮ್ಮ ಮಜುಕುರ ಗೊತ್ತು ;
ದೇವರಾಣೆ, ನೀವು ಕೇಳಲೇಬೇಕೆಂದು ವಸೂಲಿ ಹಚ್ಚಲಾರೆ
ನಾನೊಂದು ಒಂಟಿ ಹೂ
ಘಮ ಘಮಾಡಿಸುತ ನಿಂತಿರುವೆ
ಮಕರಂದ ಹೀರುವ ದುಂಬಿ ಬಂದೇ ಬರುವುದು






🙂
ಚಂದದ ಕವಿತೆ. ತುಂಬ ಇಷ್ಟವಾಯ್ತು ಸರ್.
ಕಾವ್ಯದಲ್ಲಿ ಜಾಗೃಕತೆಯ ಛಾಯೆ
ಕಡೆಗಣಿಸದ ಕೊರಗು
ಅದ್ಭುತ .
chennaagide kavite..
ಆಲಾದಿ ನಗುವ ತುಟಿ.ಅಲಾದಿ ರೋಣ ತಾಲೂಕಿನ ಶಬ್ದ.ಕವಿತೆ ತುಂಬಾ ಇಷ್ಟವಾಯಿತು.ಅಲಾದಿ ಅಂದರೆ ಯಾವಾಗಲೂ ಅನ್ನುವ ಅರ್ಥ ಅಲ್ಲವೇ?
ದುಂಬಿ ಖಂಡಿತ ಬಂದೇ ಬರುತ್ತೆ.ಕಾಯಬೇಕು.
ನಿವೇದನೆ ಹೀಗೂ ಮಾಡಬಹುದು..!
ಎಲ್ಲರಿಗೂ ಥ್ಯಾಂಕ್ಸ್. ಹೌದು lakshmishankarjoshiಯವರೆ,. ಅಲಾದಿ ಅಂದ್ರೆ ಯಾವಾಗಲೂ ಅಂತ ಅರ್ಥ. 😉
Dumbiyoo barutte. Nimage chennagi kavana bareyaloo barutte.
verry nice sir
verrry nice sir