ನಯನದಲ್ಲಿ ನಡೆದ ನೃತ್ಯ ಸ೦ಭ್ರಮ

ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="2" orderby="ID"] ಫೆಬ್ರವರಿ 20, 2012ರ ಮಹಾಶಿವರಾತ್ರಿಯ ಶುಭಸಂದರ್ಭದಲ್ಲಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ(ರಿ.) ಮತ್ತು ಕನರ್ಾಟಕ ಸಂಶೋಧಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ‘ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು’ ಎಂಬ ವಿಷಯದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಏರ್ಪಡಿಸಲಾಗಿತ್ತು. ಕನರ್ಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸಂಘಟನೆಯಾದ ಈ ನೃತ್ಯ ಸಂಶೋಧನಾ ವಿಚಾರಸಂಕಿರಣದಲ್ಲಿ ನೂಪುರ ಭ್ರಮರಿ ಪ್ರತಿಷ್ಠಾನದ ಅಂಗಸಂಸ್ಥೆಯಾದ ನೃತ್ಯ ಸಂಶೋಧಕರ ಒಕ್ಕೂಟವೂ ವಿದ್ಯುಕ್ತವಾಗಿ ಚಾಲನೆಗೊಂಡಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ಶುಭಾರಂಭ ಮಾಡಿದ ಕನ್ನದ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಶಿವರಾತ್ರಿಯಂದೇ ನೃತ್ಯ ಸಂಶೋಧಕರ ಒಕ್ಕೂಟ ಆರಂಭಗೊಂಡಿರುವುದು ಪ್ರಶಂಸನೀಯ ಪ್ರಯತ್ನವೆಂದು ಶುಭಾಂಸನೆಗೈದರು. ಈ ಸಂದರ್ಭದಲ್ಲಿ ‘ನೂಪುರ ಭ್ರಮರಿ’ ವಿಶೇಷ (ನೃತ್ಯ ಸಂಶೋಧನಾ ಸೂಚಿ) ಸಂಚಿಕೆಯನ್ನು ಡಾ. ಶತಾವಧಾನಿ ಗಣೇಶ್ರು ಅನಾವರನಗೊಳಿಸಿದರು. ಅನಾರೋಗ್ಯದ ಕಾರಣದಿಂದ ಗೈರುಹಾಜರಾಗಿದ್ದ ಖ್ಯಾತ ಶಾಸನ/ಇತಿಹಾಸ ಸಂಶೋಧಕರಾದ ಡಾ. ಎಚ್.ಎಸ್.ಗೋಪಾಲ ರಾವ್ ಅವರ ಆಶಯ ಭಾಷಣವನ್ನು ನೂಪುರ ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ, ಸಂಪಾದಕಿ ಮನೋರಮಾ ಬಿ.ಎನ್ ವಾಚಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಇತಿಹಾಸ ತಜ್ಞ ಡಾ. ಆರ್. ಶೇಷ ಶಾಸ್ತ್ರಿಗಳು ಮಾತನಾಡುತ್ತಾ ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿನ ನೃತ್ಯಕಲೆಯಲ್ಲಿ ಸಂಪ್ರದಾಯ ಶರಣರು, ಪ್ರಗತಿವಾದಿಗಳು ಇರುವಂತೆ ಅವಕಾಶವಾದಿಗಳು, ಅಪ್ರಬುದ್ಧರು, ಕರಗತ ಮಾಡಿಕೊಳ್ಳಲು ಬೇಕಾದ ಶಿಸ್ತು, ಶ್ರದ್ಧೆ, ನಿಷ್ಠೆ, ತಾಳ್ಮೆ ಇಲ್ಲದಿದ್ದರೂ ಎಲ್ಲ ನೃತ್ಯ ಶೈಲಿಯಲ್ಲಿ ನಿಪುಣರೆಂದು ತೋರಿಸಿಕೊಳ್ಳುವ ಅಸಂಖ್ಯಾತ ನಾಟ್ಯಾಚಾರ್ಯರು, ಶಿಕ್ಷಕರು ನಮ್ಮ ನಡುವಿದ್ದಾರೆ. ಇವರ ಕೈಯಲ್ಲಿ ಸಿಕ್ಕಿ ರಚನಾತ್ಮಕ, ಸ್ಫೂತರ್ಿದಾಯಕ, ಪೌರಾತ್ಯ ಮುಂತಾಗಿ ಕಷ್ಟವಾದ ಶಾಸ್ತ್ರೀಯತೆಯ ಚೌಕಟ್ಟಿನಿಂದ ಪಾರಾಗುವ ಸುಲಭ ಯತ್ನಗಳಾಗಿ ಹೊರಬರುತ್ತಿದೆ. ಈ ಪರಿಸ್ಥಿತಿಯಿಂದ ಪಾರಾಗಬೇಕಾದರೆ ನಾಟ್ಯಶಾಸ್ತ್ರದ ಅರಿವು ಬೇಕು. ಆದರೆ ಕೇವಲ ನಾಟ್ಯ ಶಾಸ್ತ್ರ್ರದ ಗುರು, ವಿದ್ಯಾಥರ್ಿಗಳಿಗೆ ಮಾತ್ರವಲ್ಲ; ಇದು ಪ್ರೇಕ್ಷಕರಿಗೂ ದಕ್ಕುವಂತಾದರೆ ಸಹೃದಯ ಮತ್ತಷ್ಟು ಚೆನ್ನಾಗಿ ಆಸ್ವಾದಿಸಬಲ್ಲ; ಮೆಚ್ಚುಗೆ ಸೂಚಿಸಬಲ್ಲ; ವಿಮರ್ಶಕರನ್ನು ವಿಮಶರ್ಿಸಬಲ್ಲ. ಈ ಓದು ಗುರುಮುಖೇನ ಕಲಿತ ವಿದ್ಯೆಗೆ ವ್ಯಾಪಕ, ವ್ಯವಸ್ಥಿತ ಅಧ್ಯಯನಶೀಲ ಮೆರುಗನ್ನು ನೀಡುತ್ತದೆ; ಕಲೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ, ಶಾಸ್ತ್ರಾಧಾರಿತ ಪ್ರಯೋಗ ಮಾಡುವಲ್ಲಿ, ನಾಟ್ಯವನ್ನು ಸಮಕಾಲೀನ ಬದುಕಿಗೆ ಹತ್ತಿರ ತರುವಲ್ಲಿ ನೆರವಾಗುತ್ತದೆ. ನರ್ತನ ಕಲಾವಿದರು ಸೃಜನಶೀಲತೆಯಿಂದ ಭಾವಪ್ರಕಟಣೆ ಮಾಡುವವರಾದರೆ ಅಂತವರು ಎಲ್ಲರಿಂದ ಎಲ್ಲವನ್ನೂ ಕಲಿತು ತಮ್ಮತನ ಉಳಿಸಿಕೊಳ್ಳಬಲ್ಲರು ಎಂದರು. ಸಂಶೋಧನೆಯ ಕುರಿತಂತೆ ಅವರು ಮಾತನಾಡುತ್ತಾ ಸಂಶೋಧನೆಯೆಂಬುದು ಅಧ್ಯಯನದ ಕ್ರಮವಸ್ತು. ಇದುವೆರೆಗಿನ ಅಧ್ಯಯನಗಳು ಹೇಗೆ ಸಾಗಿದೆ ಎಂಬ ಹಿನ್ನೆಲೆಯಲ್ಲಿ, ಆಗಬೇಕಾದ ಕೆಲಸಗಳ ಬಗ್ಗೆ, ಅಧ್ಯಯನ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಿಡಿಸುವಲ್ಲಿ ಮಾಡುವ ಅಧ್ಯಯನಪೂರ್ಣ ವಿಶ್ಲೇಷಣೆಯೇ ಸಂಶೋಧನೆ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧಾಪೂರ್ಣ ಅಧ್ಯಯನ ನಿಷ್ಪಕ್ಷಪಾತ ಧೋರಣೆ, ಪ್ರಾಮಾಣಿಕತೆ ಬಹಳ ಪ್ರಾಮುಖ್ಯ. ಹಿರಿಯರು ಹೇಳಿದ್ದೆಲ್ಲಾ ಸರಿ ಅಥವಾ ನಾನು ಹೇಳಿದ್ದೆಲ್ಲಾ ಸರಿ ಅಥವಾ ತಾನೆ ಹೊಸತು ಹೇಳುತ್ತಿದ್ದೇನೆ ಎಂಬ ಮೂಢವಿಶ್ವಾಸ ಸಂಶೋಧನೆಯನ್ನು ಕಟ್ಟಿಕೊಡಲಾರವು. ಎಷ್ಟು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತೇವೆಯೋ ಅಷ್ಟು ಸಂಶೋಧನಾ ಮಾರ್ಗ ಸುಲಭವಾಗುತ್ತದೆ. ಹಿಂದಿನವರ ಅಧ್ಯಯನ ಕ್ರಮ, ರೀತಿ, ವಿಧಾನಗಳನ್ನು ಅವರ ಪರಿಮಿತಿಯಲ್ಲಿ ವಿಶ್ಲೇಷಿಸಬಹುದೇ ವಿನಾ ಅವರ ಪ್ರಾಮಾಣಿಕತೆಯನ್ನು ನಾವು ಪ್ರಶ್ನಿಸಬಾರದು. ನಮ್ಮಂತೆಯೇ ಅರಿವಿನ ಕುರಿತ ಶ್ರದ್ಧೆ, ತವಕ, ಕಾಳಜಿ, ಪ್ರಾಮಾಣಿಕತೆ ನಮ್ಮ ಹಿಂದಿನವರಿಗೆ, ಮುಂದಿನ ಪೀಳಿಗೆಗೂ ಇತ್ತು ಮತ್ತು ಇದೆ ಎಂಬುದನ್ನು ನಾವು ಮರೆಯಬಾರದು. ಈ ಧೋರಣೆ ಸಂಶೋಧನೆಗೆ ಮಾತ್ರವಲ್ಲ ಬದುಕಿಗೂ ಅರ್ಥವಂತಿಕೆಯನ್ನು ತಂದುಕೊಡುತ್ತವೆ ಎಂದು ನುಡಿದರು. ಎಲ್ಲದಕ್ಕೂ ಒಂದೇ ಸಂಶೋಧನಾ ವಿಧಾನ ಸರಿಯಲ್ಲ. ಸಂಶೋಧನೆಗೆ ಶಿಸ್ತು ಬೇಕು. ಆದರೆ ಶಿಸ್ತೇ ಸಂಶೋಧನೆಯಾಗಬಾರದು. ಭಾಷೆ, ಅಲಂಕಾರ ಕಲಿತ ಮಾತ್ರಕ್ಕೆ ಯಾರೂ ಕವಿಯಾಗಲಾರ. ಅಂತೆಯೇ ಸಂಶೋಧಕರೂ ಕೂಡಾ. ಸಂಶೋಧನೆಗಳು ಸಂಶೋಧನಾ ವಿಧಾನಗಳನ್ನು ಕರಗತ ಮಾಡಿಕೊಂಡು ನಿರೂಪಣೆಗೆ, ನಮ್ಮ ಪ್ರಾಮಾಣಿಕತೆಗೆ, ವಿಧಾನ ತರ್ಕಕ್ಕೆ, ಪುನರ್ ಪರಿಶೀಲನೆಗೆ ಅನುವು ಮಾಡಿಕೊಡುವಂತಿರಬೇಕು. ಸಂಶೋಧಕನಿಗೆ ವಿನಯ ಮುಖ್ಯ. ಪದವಿ ಪಡೆದದ್ದು ಸಂಶೋಧಕನೆಂಬುದಕ್ಕೆ ಮಾನದಂಡವಲ್ಲ ಎಂದು ಶೇಷ ಶಾಸ್ತ್ರಿಯವರು ಮನವರಿಕೆ ಮಾಡಿದರು. ಮನೋರಮಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕನರ್ಾಟಕ ಸಂಶೋಧಕರ ಒಕ್ಕೂಟದ ಕಾರ್ಯದಶರ್ಿ ಡಾ. ರೇವಯ್ಯ ಒಡೆಯರ್ ವಂದಿಸಿದರು. ನಂತರ ನಡೆದ ವಿಶೇಷ ಉಪನ್ಯಾಸಗಳಲ್ಲಿ ನೃತ್ಯ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ ಅವರು ‘ಮಹಾನಟ : ಒಂದು ವಿವೇಚನೆ’ ಎಂಬ ಸಂಶೋಧನಾ ಪ್ರಬಂಧ ಮಂಡಿಸಿದರು. ವೇದಗಳ ಕಾಲದ ರುದ್ರಸ್ವರೂಪದಲ್ಲಿದ್ದ ಶಿವ ನಂತರದ ಕಾಲಗಳಲ್ಲಿ ಅದರಲ್ಲೂ ಚಳುಕ್ಯರ ಕಾಲಕ್ಕೆ ಶಾಂತಸ್ವರೂಪಿಯಾಗಿ, ಶ್ವೇತವಸ್ತ್ರಧಾರಿಯಾಗಿ, ಸುಂದರ ವದನವುಳ್ಳವನಾಗಿ ಬಿಂಬಿಸಲಾಗಿದೆ. ಮಧ್ಯಕಾಲೀನ ಯುಗದಲ್ಲಿ ಕರಣಾಂಗಹಾರಗಳ ಮೂಲಕ ನರ್ತನದ ಹಿನ್ನೆಲೆಯಲ್ಲೂ ಕಾಣುವ ಶಿವನನ್ನು ಈಗ ಕರೆಯುವ ಹಾಗೆ ನಟರಾಜ ಎಂದು ಸಂಬೋಧಿಸುತ್ತಿರಲಿಲ್ಲ. ಹಾಗೆ ನೋಡಿದರೆ ನಟರಾಜ ಶಿಲ್ಪದ ಜನನ ತಮಿಳ್ನಾಡಿನಿಂದ ಪ್ರಾರಂಭವಾಯಿತಾದರೂ ಅದರ ಮೂಲ ಕಾಶ್ಮೀರದ್ದು. ಶಿವನ ಪರಿವಾರದೊಂದಿಗೆ ಸಪ್ತಮಾತೃಕೆಯರು ನತರ್ಿಸುವ ಶಿಲ್ಪ ಸಿಗುವುದು ಕನರ್ಾಟಕದ ಬಾದಾಮಿಯ ಚಳುಕ್ಯರಲ್ಲಿ ಮಾತ್ರ ಎಂದು ಸವಿವರವಾಗಿ ಮಾಹಿತಿಯಿತ್ತರು. ಡಾ. ಶೋಭಾ ಶಶಿಕುಮಾರ್ ತಮ್ಮ ‘ ಭರತನಾಟ್ಯ ಶಾಸ್ತ್ರ ಪ್ರಯೋಗಗಳ ಸಂಗಮ’ ವಿಚಾರ ಮಂಡನೆಯಲ್ಲಿ ಮಾತನಾಡುತ್ತಾ ಇವತ್ತಿಗೆ ನೃತ್ಯದ ಹಿನ್ನೆಲೆಯ ಶಾಸ್ತ್ರದ ಬಗ್ಗೆ ಎಷ್ಟೋ ಮಂದಿಗೆ ಅರಿವಿಲ್ಲ. ನೃತ್ಯ ಕೇವಲ ತಂತ್ರವಲ್ಲ. ಅದು ಹರಿಯುವ ನದಿ. ನೃತ್ಯಕ್ಕೆ ಚಿತ್ರ, ಶಿಲ್ಪ, ಇತಿಹಾಸ ಇತ್ಯಾದಿಯಾಗಿ ಇತರೆ ಅಧ್ಯಯನದ ಶಿಸ್ತು ಬೇಕೇ ಬೇಕು. ಆದರೆ ಇಂದಿನ ಭರತನಾಟ್ಯದಲ್ಲಿ ನೃತ್ತ ಮತ್ತು ಅಭಿನಯಗಳು ಭಿನ್ನ ವಿಚಾರ ಎಂಬ ತಪ್ಪು ಭಾವನೆ ವ್ಯಾಪಕವಾಗಿ ಬೆಳೆದಿದೆ. ನೃತ್ತವು ಭಾವವಿಹೀನವೆಂಬ ಪದಪ್ರಯೋಗದ ಮೂಲಕ ನಮ್ಮನ್ನು ನಾವೇ ರೋಗ್ರಗ್ರಸ್ಥರನ್ನಾಗಿಸಿಕೊಳ್ಳುತ್ತಿದ್ದೇವೆ. ನೃತ್ತವು ಪ್ರೇಕ್ಷಕರಿಗೆ ಸೂಕ್ತವಾದ ಮನಸ್ಥಿತಿ ತಂದುಕೊಡುವ ಒಂದು ಪರಿಚಯದ ದಾರಿ ಮಾತ್ರ. ಆದರೆ ನೃತ್ಯ ಕಲಿಯುವ ಪ್ರಾರಂಭದ ಬಾಲಪಾಠಗಳನ್ನೇ ಪ್ರದರ್ಶನಕ್ಕೂ ಅಳವಡಿಸಿಕೊಳ್ಳುವುದರಿಂದ ರಸ ಉತ್ಪತ್ತಿ ಮರೆಯಾಗುತ್ತಿದೆ. ಇದು ದೃಷ್ಟಿಕೋನದ ಅಭಾವ, ಮತ್ತು ಅಜ್ಞಾನ ಎಂದರು. ‘ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ನೃತ್ಯದ ಅಭಿವ್ಯಕ್ತಿ’ ಎಂಬ ಸಂಶೋಧನಾ ಪ್ರಬಂಧ ಮಂಡಿಸಿ ಮಾತನಾಡಿದ ಸಂಶೋಧಕಿ ಮನೋರಮಾ ಬಿ.ಎನ್ ಅವರು ; ನೃತ್ಯ ಅಥವಾ ಕಲಾ ಜಗತ್ತಿನ ಒಳಸುಳಿ, ಹರಿವು, ಒಳತೋಟಿ, ಅಂತರಂಗವನ್ನು ಚಿಂತನಾರ್ಹವಾಗಿ ವಿವಿಧ ಬಗೆಯಲ್ಲಿ ಕಾಣಿಸುವ ಕಾದಂಬರಿಗಳು ಹೊರಬರಬೇಕಾಗಿದೆ. ಕಾದಂಬರಿಗಳ ವಸ್ತು ಮತ್ತು ನಿರೂಪಣಾ ತಂತ್ರಗಳು ಬಿಗಿಯಾಗಿದ್ದಷ್ಟೂ ಅದನ್ನು ವಿವಿಧ ಮಾಧ್ಯಮಗಳಾದ ರಂಗಭೂಮಿ, ಸಿನಿಮಾಗಳಲ್ಲಿ ಅನ್ವಯಿಸಿ ಉತ್ತಮ ಪ್ರತಿಫಲನ ಮತ್ತು ಸ್ಪರ್ಶವನ್ನು ಕಂಡುಕೊಳ್ಳಬಹುದು. ಈಗಾಗಲೇ ಹೊರಬಂದಿರುವ ಐತಿಹಾಸಿಕ ಕಾದಂಬರಿಗಳು ನಾಟ್ಯರಾಣಿ ಶಾಂತಲೆಯನ್ನೇ ಪ್ರಧಾನವಾಗಿಸಿ ಬಂದಿರುವುದರಿಂದ ವಿವಿಧ ವಸ್ತುಗಳ ಕುರಿತು ಬರೆಯಲ್ಪಡುವ ಕಾದಂಬರಿಗಳು ಸಾಹಿತ್ಯದ ಗದ್ಯಭಾಗಕ್ಕೆ ನೀಡುವ ಐತಿಹಾಸಿಕ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತೃತವಾಗಿಸುತ್ತದೆ. ಇದರ ಹೊರತಾಗಿಯೂ ಭಾರತದ ಎಲ್ಲಾ ಭಾಷೆಗಳ ಸಾಹಿತ್ಯದಲ್ಲಿ ಬಂದಿರುವ ನೃತ್ಯದ ಕುರಿತ ಕಾದಂಬರಿಗಳ ಅಧ್ಯಯನವು ಭಾರತೀಯ ಸಾಹಿತ್ಯವು ನೃತ್ಯವನ್ನು ದುಡಿಸಿಕೊಂಡ ರೀತಿ ಮತ್ತು ಆ ಮೂಲಕವಾಗಿ ನೃತ್ಯ ಮತ್ತು ಸಾಹಿತ್ಯದ ಸಮಾನಮುಖೀ ಬೆಳವಣಿಗೆಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಿದೆ ಎಂದರು.   ಮಧ್ಯಾಹ್ನದ ವಿರಾಮದ ನಂತರ ಯುವ ಸಂಶೋಧಕರಾದ ‘ಇಂದಿನ ಭರತನಾಟ್ಯ ಸಂಗೀತದಲ್ಲಿ ತಂಜಾವೂರು ಸಹೋದರರ ರಚನೆಗಳ ಪ್ರಸ್ತುತತೆ; ಬೆಂಗಳೂರು ಒಂದು ಅಧ್ಯಯನ ‘ – ಶಾಲಿನಿ ವಿಠಲ್ ‘ಭರತನಾಟ್ಯದ ಆಹಾರ್ಯ ಪರಂಪರೆಯ ಬೆಳವಣಿಗೆ ಮತ್ತು ಪಲ್ಲಟ: (1910-2010ರ ಕಾಲ) ‘ – ಸಪ್ನಾ ನಾಯಕ್, ಗೋವಾ. ‘ಭರತನಾಟ್ಯಕ್ಕೆ ಪೂರಕವಾಗುವ ಕನ್ನಡ ಚಲನಚಿತ್ರ ಗೀತೆಗಳು’ – ಎ.ಎನ್. ಸುಧೀರ್ ಕುಮಾರ್, ಬೆಂಗಳೂರು. ‘ಸಂವಹನ ಮಾಧ್ಯಮವಾಗಿ ಜನಪದ ಕುಣಿತಗಳು: ಕರಾವಳಿ ಕನರ್ಾಟಕದ ಜನಪದ ಕುಣಿತಗಳ ಒಂದು ಅಧ್ಯಯನ’ – ಡಾ. ಸತೀಶ್ ಕುಮಾರ್ ಅಂಡಿಂಜೆ, ಶಿವಮೊಗ್ಗ ಇವರಿಂದ ಸಂಶೋಧನಾ ಪ್ರಬಂಧ ಮಂಡನೆ ಜರುಗಿತು. ‘ನೃತ್ಯ ಸಂಶೋಧನೆಯ ಪ್ರಸ್ತುತತೆ, ಜವಾಬ್ದಾರಿಗಳು, ಸಮಸ್ಯೆ, ವಿಧಾನ ಮತ್ತು ಅವಕಾಶಗಳು’ ಎಂಬ ವಿಷಯದ ಸಂವಾದ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸುತ್ತಾ ಭಾರತೀಯ ನೃತ್ಯ ಸಂಶೋಧನೆಯ ಮಾರ್ಗಗಳನ್ನು, ವಿಷಯಗಳನ್ನು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿದರು.   ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಮಶರ್ೆಗಳಿಗೆ ನೂಪುರ ಭ್ರಮರಿ ಪ್ರತಿಷ್ಠಾನದ ‘ವರ್ಷದ ಶ್ರೇಷ್ಠ ನೃತ್ಯ ವಿಮಶರ್ೆ ಪ್ರಶಸ್ತಿ’ ಯನ್ನು ಸಂಜೆಯ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಶ್ರೀಮತಿ ಪ್ರತಿಭಾ ಸಾಮಗ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರತಿಭಾ ಸಾಮಗ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಕಲಾವಿದ, ಚಲನಚಿತ್ರ ನಟ ಶ್ರೀಧರ್ ಮಾತನಾಡುತ್ತಾ, ಹಿಂದಿನ ದೇವದಾಸಿ ಪದ್ಧತಿಯಲ್ಲಿ ಕಲಾವಿದರಿಗಿದ್ದ ಶ್ರದ್ಧೆ, ಪ್ರಾಮಾಣಿಕತೆ ಕಾಲದಿಂದ ಕಾಲಕ್ಕೆ ಕುಂಠಿತಗೊಳ್ಳುತ್ತಾ ಬರುತ್ತಿದೆ. ಮನೆತನಗಳಲ್ಲಿ ಕಲೆಯನ್ನು ಬಹಳ ಕಾಲದಿಂದ ಕಲಿಯುತ್ತಾ ಬಂದವರು ಅದ್ಭುತ ವಿಶ್ವರೂಪ ಬಲ್ಲವರು. ಆದರೆ ನಡುನಡುವೆ ಬಂದು ಹೋಗುವ ಕಲಾವಿದರಿಂದಾಗಿ ಬಹಳಷ್ಟು ನ್ಯೂನತೆ ಕಾಣಿಸುತ್ತಿದೆ. ಇಂತಹ ಕಾಲದಲ್ಲಿ ಸಂಶೋಧನೆ ಎಂಬುದು ವಿಚಾರಮಯವಾಗಿ, ವಿಶ್ಲೇಷಣೆ ಮಾಡುತ್ತಾ ಅವಲೋಕಿಸುವುದು ನೃತ್ಯದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯ. ಇಂದು ಗುರುವಿನ ಪಾಠವನ್ನು ಗಿಳಿಪಾಠದಂತೆ ಒಪ್ಪಿಸುವುದೇ ಕರ್ತವ್ಯ ಎಂಬಂತಾಗಿದೆ. ವಸ್ತುವಿನ ಆಳಕ್ಕೆ ತಕ್ಕ ಅಧ್ಯಯನ ಮಾಡದೇ, ಸ್ಥಾಯಿ ರಸಗಳನ್ನು ಅರ್ಥ ಮಾಡಿಕೊಳ್ಳದೇ ಪ್ರಯೋಗ ಮಾಡುವುದು ಇಂದಿನ ನೃತ್ಯ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿದೆ. ನೃತ್ಯ ಅನ್ನುವುದು ಅವಶೇಷ, ಪಳೆಯುಳಿಕೆ ಎನ್ನುವ ಭಾವನೆ ಬೆಳೆದು ಬಂದಿದೆ ಎಂದರು.   ಶಾಸ್ತ್ರ ಪ್ರಯೋಗ ಬೇರೆ ಬೇರೆ ಅಲ್ಲ. ಎರಡೂ ಅದ್ಭುತ ಸಂಬಂಧದ ಅರ್ಧನಾರೀಶ್ವರ ತತ್ತ್ವದ ಬಾಂಧವ್ಯವುಳ್ಳವು. ಪರಸ್ಪರ ವಿಚ್ಛೇದ ಅರಿವನ್ನು ದೂರಕ್ಕೆಸೆಯುತ್ತದೆ. ಬೇರೆ ಕ್ಷೇತ್ರಗಳಲ್ಲಿ ಕಾಣುವ ಸಂಶೋಧನೆಯ ಅಗಾಧತೆಗೆ ಹೋಲಿಸಿದರೆ ಕಲಾಕ್ಷೇತ್ರದಲ್ಲಿ ಸಂಶೋಧನೆಗಳು ತೀರಾ ವಿರಳ, ಅಪರೂಪ ಎಂಬಂತಾಗಿದೆ. ಸಂಶೋಧನೆಯು ತಿಳಿದುಕೊಳ್ಳಬೇಕೆಂಬ ಪ್ರವೃತ್ತಿ. . ಅದು ಕೇವಲ ಪದವಿಯದ್ದಲ್ಲ. ಕ್ರಮಬದ್ಧವಾದ ಶಿಸ್ತಿನಿಂದ ಮಾಡಿದಾಗಲಷ್ಟೆ ಅದು ನಿಜವಾದ ಪದವಿಗೆ ಏರುತ್ತದೆ. ನೃತ್ಯಪ್ರಯೋಗದ ಪಕ್ವತೆಗೆ ಸಂಶೋಧನೆ ಬೇಕು. ಸಂಪ್ರದಾಯವೆಂಬ ಹೆಸರಿನಲ್ಲಿ ಹಳಸಲನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಕಲೆ ಉಳಿಯುವುದಿಲ್ಲ. ಸ್ವಂತಿಕೆಯಿಂದ ಪ್ರದರ್ಶನ ಮಾಡಿದಾಗಲಷ್ಟೇ ಕಲೆ ಜೀವಂತವಾಗುತ್ತದೆ; ಜೀವನದಿಯಾಗಿ ಹರಿಯುತ್ತದೆ ಈ ನಿಟ್ಟಿನಲ್ಲಿ ನೃತ್ಯ ಸಂಶೋಧಕರ ಕಮ್ಮಟ, ನೃತ್ಯ ಸಂಶೋಧಕರ ಒಕ್ಕೂಟವೆಂಬ ಕಲ್ಪನೆಯೇ ಕನರ್ಾಟಕಕ್ಕೆ ಹೊಸತಾಗಿದ್ದು ಸಾಕಷ್ಟು ಒಳ್ಳೆಯ ಬೆಳವಣಿಗೆಗಳನ್ನು ಕಾಣಲಿ ಎಂದು ಆಶಿಸಿದರು. ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರಗಳನ್ನು ಶೇಷಶಾಸ್ತ್ರಿ ಮತ್ತು ಶ್ರೀಧರ್ ಅವರು ವಿತರಣೆ ಮಾಡಿದರು. ನಂತರ ಸಂಶೋಧನಾಧಾರಿತ ನೃತ್ಯ ಪ್ರಸ್ತುತಿಯು ಡಾ. ಶೋಭಾ ಶಶಿಕುಮಾರ್ ಇವರಿಂದ ಜರುಗಿತು.  ]]>

‍ಲೇಖಕರು G

March 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: