ನಮ್ಮ Science Room…

ಕಿರಣ ಭಟ್

ನೂರಹತ್ತು ವರ್ಷಗಳನ್ನ ಪೂರೈಸಿದ ನನ್ನ ಶಾಲೆ 1960-70 ರ ಹೊತ್ತಿಗೇ ಒಂದು ಸ್ವತಂತ್ರ ಪ್ರಯೋಗಾಲಯವನ್ನು ಹೊಂದಿತ್ತು. ನಾವು ಐದನೇತ್ತಿಗೆ ಶಾಲೆ ಸೇರೋ ಹೊತ್ತಿಗೆ ಅದು ಸಾಕಷ್ಟು ಸುಸಜ್ಜಿತವಾಗಿತ್ತು. ಪ್ರಯೋಗಾಲಯವಾದರೂ ನಾವೆಲ್ಲ ಅದನ್ನು ಕರೆಯುತ್ತಿದ್ದುದು Science Room ಎಂದೇ.

ವಾರವಿಡೀ ಪಾಠ ಕೇಳುತ್ತ, ಕೇಳುತ್ತ ಸುಸ್ತಾಗುತ್ತಿದ್ದ ನಮಗೆ ವಾರಕ್ಕೊಮ್ಮೆ Science Room ಗೆ ಹೋಗುವ ಭಾಗ್ಯ ದೊರಕುತ್ತಿತ್ತು. ಅದೊಂದು ದೊಡ್ಡ ರಿಲೀಫ್!

Science Room ನಮಗೆ ಕುತೂಹಲದ ಕೇಂದ್ರ. ಅಲ್ಲೊಂದು ದೊಡ್ಡ ಅಸ್ಥಿಪಂಜರವಿತ್ತು. ಅದು ಅವರದ್ದು, ಇವರದ್ದು ಅಂತ ಯಾರ್ಯಾರದೋ ಹೆಸರು ಹೇಳುತ್ತಿದ್ದೆವು. ಕೃಷ್ಣ ಹಾಸ್ಯಗಾರ ಮಾಸ್ತರರು ಯಕ್ಷಗಾನದಲ್ಲಿ ಪ್ರೇತ ನೃತ್ಯ ಮಾಡುವಾಗ “ಅದನ್ನೇ ಹಾಕ್ಕೋತಾರಂತೆ” ಅಂತ ಪಿಸುಗುಡುತ್ತಿದ್ದೆವು. ಕಿಟಕಿಯಿಂದಲೇ ಚಿಕ್ಕ ಮಕ್ಕಳಿಗೆ ಅದನ್ನ ತೋರಿಸಿ ಬೆದರಿಸುತ್ತಿದ್ದೆವು.

ತುಂಬ ಒಳ್ಳೆಯ Science ಮಾಸ್ಟ್ರುಗಳಿದ್ದ ಕಾಲ ಅದು. ಪುಸ್ತಕದಲ್ಲಿನ ಹೆಚ್ಚಿನ ಪ್ರಯೋಗಗಳನ್ನ ಅವರು ಮಾಡಿಯೇ ತೋರಿಸುತ್ತಿದ್ದರು. ರಂಜಕ ಗಾಳಿಯಲ್ಲಿ ತಾನೇ ಹೊತ್ತು ಉರಿದಾಗ, ನಿರ್ವಾತದಲ್ಲಿ ಅರ್ಧ ರಬ್ಬರ್ ಚೆಂಡುಗಳು ಅಂಟಿಸಿದಂತೆ ಕೂಡಿಕೊಂಡಾಗ, ಕಾಯಿಸಿದ ನೀರಿನ ಉಗಿಯಲ್ಲಿ ಬಂಡಿ ಓಡಿದಾಗ ನಮಗೆಲ್ಲ ಸಂಭ್ರಮ, ಆಶ್ಚರ್ಯ.

ಬರೀ ಪಾಠದಲ್ಲಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನಮಗೆ ವಿಜ್ಞಾನವನ್ನ ತೆರೆದಿಟ್ಟ, ವೈಜ್ಞಾನಿಕ ಮನೋಭಾವ ಬೆಳೆಸಿದ ಶಾಲೆಗೆ ಶರಣು.

‍ಲೇಖಕರು avadhi

February 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: