ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಬುದ್ಧ

ಎಚ್ ವಿ ಶ್ರೀನಿಧಿ

ಈಗೀಗ
ನನಗೆ ಎಲ್ಲೆಡೆ ಕಾಣುವುದು
ಅರೆ ನಿಮೀಲಿತ ನೇತ್ರದ,
ಪದ್ಮಾಸನದಲ್ಲಿ ಕೂತ,
ಗುಂಗುರು ಕೂದಲ ಬುದ್ಧ.

ಅಂತಸ್ತಿಗೆ ತಕ್ಕ ಆಕಾರ,
ಬಣ್ಣಕೊಪ್ಪುವ ಪರಿಸರ;
ಬುದ್ಧನಿಗೆ ಕೊಳ್ಳುಬಾಕ ಸಂಸ್ಕೃತಿಯ
ಆಕರ್ಷಕ ಸರಕು.

ಆಧುನಿಕರ ಹೊಸ ಸೂತ್ರ
ಆಸೆಯೆ ದುಃಖಕ್ಕೆ ಮೂಲ
ಮನೆ ಕಟ್ಟುವುದು ಖಚಿತ, ಸಿಕ್ಕಿದರೆ ಮಾತ್ರ
ಕಡಿಮೆ ಬಡ್ಡಿ ದರದ ಗೃಹಸಾಲ.

ರೆಸಾರ್ಟ್ , ರಿಯಲ್ಎಸ್ಟೇಟ್,
ಶ್ರೀಮಂತರ ಬಂಗಲೆಗಳು,
ಶೊಕೇಸು, ಕೀಚೈನು.. ಹೀಗೆ
ಎಲ್ಲೆಡೆ ಸಲ್ಲುವ ಸಮತಾದೂತ.
ಸಂತೆಯಲು ನಿಶ್ಚಿಂತ ಧ್ಯಾನಸ್ಥನೀತ.

ವಿರಾಗಿಯೀಗ ಹಂಗಿನರಮನೆಯ ಗಿಣಿ,
ಮಾತೆತ್ತದಂತೆ ಆಗಿದೆ ಕಟ್ಟಪ್ಪಣೆ.
ಇನ್ನೇನಿದ್ದರೂ ಪ್ಲಾಸ್ಟಿಕ್ ಹೂವಿನ
ಸುಗಂಧ ಬುದ್ಧಚರಣಕ್ಕೆ ಸಮರ್ಪಣೆ.

‍ಲೇಖಕರು Avadhi

21 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading