ನಮ್ಮ ತಲೆಗಳ ಹಿಂದೆ ದೀಪ ಹಚ್ಚಿಸಿಕೊಳ್ಳುವ ಮುನ್ನ …
ಹೊಸ ಪೇಟೆ
ನಮ್ಮ ನಮ್ಮ ಮನೆಗಳ ಮುಂದೆ
ದೀಪ ಹಚ್ಚುವ ಮುನ್ನ
ನಮ್ಮ ನಮ್ಮ ಮನಸಿನ ಗೂಡಿನಲ್ಲಿ
ದೀಪ ಹಚ್ಚಿಕೊಳ್ಳೋಣ .
ನಮ್ಮ ಮನಸ ತುಂಬಿರುವ ಕತ್ತಲನು ,
ನಮ್ಮ ಮನಕ್ಕಂಟಿರುವ ರೋಗವನು ,
ಹೊಡೆದೋಡಿಸೋಣ

ನಾವು
ಅದೆಷ್ಟು ಮನೆಗಳ ದೀಪ ಆರಿಸಿದ್ದೆವೆಂದು
ಅದೆಷ್ಟು ಮನಸುಗಳ ಸುಟ್ಟು ಹಾಕಿದ್ದೇವೆಂದು
ಕ್ಷಣ ಕಾಲ ಆತ್ಮವಿಮರ್ಶೆ ಮಾಡಿಕೊಳ್ಳೋಣ ..
ಈ ಕತ್ತಲು -ಬೆಳಕಿನ ಬದುಕಿನ ಕೊನೆಯಲ್ಲಿ
ನಮ್ಮ ನಮ್ಮ ತಲೆಗಳ ಹಿಂದೆ
ದೀಪ ಹಚ್ಚಿಸಿಕೊಳ್ಳುವ ಮುನ್ನ
ಕತ್ತಲು ಬೆಳಕಿನ ಈ ಬದುಕಿನಲ್ಲಿ
ಕ್ಷಣ ಕಾಲ ನಗ್ನರಾಗಿ
ಈ ಬದುಕನ್ನು
ಅರಿಯೋಣ ಅರ್ಥಿಸಿಕೊಳ್ಳೋಣ
ಅಪ್ಪಿಕೊಳ್ಳೋಣ






ಡಿ.ರವಿವರ್ಮ ಅವರ ಕವಿತೆ ವಾಚಕವಾಗಿದ್ದರೂ, ವಾಸ್ತವಕ್ಕೆ ತುಂಬಾ ಹತ್ತಿರ ಮತ್ತು ಆತ್ಮ ವಿಮರ್ಶಮಾಡಿಕೊಳ್ಳುವಂತಿದೆ. ಹೀಗೆ ಕವಿತೆಗಳು ಕೆಲವೊಮ್ಮೆ ವಾಚಕವೇನಿಸಿದರು ೀ ಕವಿತೆಯೆಂತೆಯೂ ನಮ್ಮಂತ ಓದುಗರನ್ನು ಕಾಡುತ್ತವೆ.
hmmmm … arthaisikollona ….