ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸಿ ಸಮ್ಮೇಳನಕ್ಕೊಂದು ಹೊಳಪು ತುಂಬುತ್ತಾರೆ. ಅಂಥಹ ಸಾಹಿತ್ಯಾಸಕ್ತರಲ್ಲಿ ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವಿಧ್ಯಾರ್ಥಿಗಳು ಎಲ್ಲರೂ ಇರ್ತಾರೆ. ಆದರೆ ಸರಕಾರಿ ಅಧಿಕಾರಿಗಳು ಇಂಥಹ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಪ್ರಯಾಣದ ದಿನಗಳನ್ನೂ ಪರಿಗಣಿಸಿ ವಿಶೇಷ ಸಂದರ್ಭದ ರಜಾ ದಿನವೆಂದು ಪರಿಗಣಿಸುವಂತೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳಿಗೆ ಭಾಗವಹಿಸಿದ ನೌಕರರಿಗೆ ಪ್ರಮಾಣ ಪತ್ರಗಳನ್ನು ಸಮ್ಮೇಳನ ನಡೆಯುವ ಸ್ಥಳಗಳಲ್ಲೇ ನೀಡುವುದು ವಾಡಿಕೆಯಾಗಿದ್ದು, ಈ ಬಾರಿಯ ಸಮ್ಮೇಳನದಲ್ಲಿ ಕೊಂಚ ವ್ಯತ್ಯಯದಿಂದಾಗಿ ಕಳೆದೆರಡು ದಿನಗಳಿಂದ ನೌಕರರು ಓ ಓ ಡಿ ಪ್ರಮಾಣಪತ್ರವನ್ನು ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿ ಸಮ್ಮೇಳನದ ಕಾರ್ಯಕ್ರಮಗಳ ಪಕ್ಕದಲ್ಲಿಯೇ ಪ್ರತಿಭಟನೆಯನ್ನು ನಡೆಸುತ್ತಲೇ ಇದ್ದರು.
ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಪ್ರಮಾಣ ಪತ್ರಗಳನ್ನು ಆಯಾ ಜಿಲ್ಲಾಧ್ಯಕ್ಷರ ಬಳಿ ನೀಡುವುದಾಗಿ ತಿಳಿಸಿದರೂ ಬಿಗಿಪಟ್ಟು ಬಿಡದ ನೌಕರರ ಒತ್ತಾಯಕ್ಕೆ ಮಣಿದು ಇಂದು ಬೆಳಗ್ಗೆ ಸಮ್ಮೇಳನಕ್ಕೆ ಆಗಮಿಸಿದ ಹೆಸರು ನೊಂದಾಯಿತ ಮತ್ತು ನೊಂದಾಯಿಸದ ನೌಕರರಿಗೂ ಓ ಓ ಡಿ ಪ್ರಮಾಣ ಪತ್ರವನ್ನು ವಿತರಿಸಿದ ಛಾಯಾ ಚಿತ್ರಗಳು ನಿಮಗಾಗಿ :
ನಮ್ಮ ಓ ಓ ಡಿ ಇಲ್ಲೇ ಕೊಡಿ…
ನಿಮಗೆ ಇವೂ ಇಷ್ಟವಾಗಬಹುದು…







0 Comments