ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮಸ್ಕಾರ, ಕೊರಾನಾಗೆ..

ಜಿ ಪಿ ಬಸವರಾಜು

ಕೊರಾನಾ ದಿನಗಳ
ಕಡು ಏಕಾಂತದಲ್ಲಿ
ಹಗಲು ಇರುಳು

ನನ್ನನ್ನೇ ಸುತ್ತಿಕೊಂಡ
ನನ್ನ ನೆರಳು ಮಾತನಾಡಿತು,
‘ಕುಶಲವೇ, ನನ್ನ ನೆನಪಿದೆಯಾ?’

ನಿಜ ಹೇಳಬೇಕೆಂದರೆ
ನೆನಪಿರಲಿಲ್ಲ, ಎಲ್ಲೂ
ನೋಡಿದಂತಿರಲಿಲ್ಲ

ಪರ್ಕು ಪಬ್ಬು ಮಾಲು
ಥಿಯೇಟರು ಪಾರ್ಟಿ
ಎಲ್ಲಿಯೂ ಕಂಡಂತಿರಲಿಲ್ಲ

ನೋಡಿದೆ: ವಕ್ರ ವಕ್ರ
ಬಡಪಾಯಿ, ಸ್ವಂತಿಕೆ
ಇಲ್ಲ, ಮತ್ತೇನು ಹೇಳುವುದು?

ಕೈ ಕುಲುಕುವಂತಿಲ್ಲ
ಜೊತೆಗಾರನೂ ಅಲ್ಲ-
ಎಂದು ಸರಿದು ನಿಂತೆ

ಸೂರು ಹಾರುವಂತೆ ನಕ್ಕು
ದೊಡ್ಡ ಗಂಟಲಲ್ಲಿ ಹೇಳಿದ
ಹರಿತ ಖಡ್ಗ ಅವನ ನಾಲಿಗೆ:

ಜಗವೆಲ್ಲ ಸುತ್ತುವ ನೀನು
ನನ್ನನ್ನೇ ನೋಡಿಲ್ಲವಲ್ಲ,
ಒಮ್ಮೆಯೂ ಖುಲ್ಲಂಖುಲ್ಲ

ನನ್ನೊಳಗು ಹೊರಗು, ನನ್ನ
ಎತ್ತರ, ವಿಸ್ತಾರ ಎಲ್ಲ
ಗೊತ್ತಿದ್ದೂ ಮರೆತೆಯಲ್ಲ;

ಇರಲಿ ಬಿಡು, ನಮಸ್ಕಾರ
ನಿನಗಲ್ಲ, ನಮ್ಮಿಬ್ಬರನು ಹತ್ತಿರ
ತಂದು ನಿಲ್ಲಿಸಿದ ಕೊರೋನಾಗೆ

 

‍ಲೇಖಕರು avadhi

31 March, 2020

1 Comment

  1. ಪಂಡಿತಾರಾಧ್ಯ ಮೈಸೂರು

    ಆತ್ಮ ಸಾಕ್ಷಾತ್ಕಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading