ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಭಾ ಒಕ್ಕುಂದ ಕವಿತೆ – ಯಾವುದೂ ಮುಗಿದು ಹೋಗುವುದಿಲ್ಲ..

ನಭಾ ಒಕ್ಕುಂದ

ಯಾವುದೂ ಮುಗಿದು ಹೋಗುವುದಿಲ್ಲ
ಅನಾಮತ್ತಾಗಿ, ನಿನ್ನೆಗಳ ಕುರುಹ
ಬೇಷರತ್ತಾಗಿ ಅಳಿಸಲಾಗುವುದೂ ಇಲ್ಲ.

ಹರಕಲಾಗಿರುವ ಮಾಡು
ನಿನ್ನೆಗಳ ಸೌಷ್ಠವದ ಕಥೆ ಹೇಳುತ್ತದೆ
ಬಿರುಕಲಾಗಿರುವ ಗೋಡೆ
ಮೌನದಲ್ಲೇ ಎಲ್ಲ ನುಡಿಸುತ್ತದೆ.

ಇಲ್ಲಿ ಸಗಣಿ ಸಾರಿಸಿದ ಅಂಗಳದ ರಂಗೋಲಿ
ಬಾಲ ಬಡಿಯುತ್ತದೆ ನಾಯಿಮರಿ,
ಇದು ಹಾಗೇ, ಯಾವುದೂ ಮುಗಿಯುವುದಿಲ್ಲ.
ಚರಿತ್ರೆಯ ನೆನಪುಗಳ ಮರೆಸಲಾಗುವುದಿಲ್ಲ.

‍ಲೇಖಕರು avadhi

4 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading