ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ ಎದ್ಯಾಗ ನೀ ಹಚ್ಚಿರೋ ದೀಪ…

ಒಂದಷ್ಟು ಶಾಯರಿಗಳು

ಪ್ರವರ ಕೊಟ್ಟೂರ್

೧.ಹುಣ್ಣಿಮಿ ರಾತ್ರ್ಯಾಗ ಚಂದ್ರ

ನಿನ್ ಅಂದ ನೋಡಿ

ಬೆಳಗೋದ ಮರ್ತೋಗ್ಯಾನ,

ಬೆಳದಿಂಗಳ ಬೆಳಕ ಬಯಸಿದವ ನಾ

ಈ ಕತ್ತಲ ಎದೀನ ಬೆಳಗ್ಲೀ ಅಂತಾ

ನನ್ ಹಂತ್ಯಾಕ್ ನಿನ್ನ ಬಿಟ್ ಹೋಗ್ಯಾನ….

೨.ಲೇ ಹುಡುಗಿ

ನೀನಿಲ್ದ ರಾತ್ರಿ ಪೂರಾ

ನನ್ ಮೈಯಾಗ ವಿರಹ ಕಾಡೈತಿ,

ಸಾವು ಬಂದ್ರೂ ಪರವಾಗಿಲ್ಲ

ವಿರಹ ಬರಬಾರ್ದು

ಸಾವಿಗಿಂತಾ ಜಾಸ್ತಿ ವಿರಹ ಜೀವ ಹಿಂಡ್ತೈತಿ

೩.ಚಳಿಯಾಗ್ ನಿಂತು

ನಿನ ದಾರಿ ಕಾದವ

ನನ್ ಮ್ಯಾಲ ಕರುಣಿ ಇಲ್ಲೇನು,

ತುಟಿ ಮ್ಯಾಲ ಚುಂಬಿಸಿ

ಬೆಚ್ಚಗ್ ಮಾಡು

ಸುಳ್ ಹೇಳ್ ಬ್ಯಾಡ

ನಿಂಗೂ ಆಸಿ ಇಲ್ಲೇನು….

೪.ಬರಿ ಕನಸಾ ತುಂಬಿರೋ

ಈ ಎದ್ಯಾಗ

ನಿನಗ ಜಾಗ ಇಲ್ಲಾ ಅಂತಾ ಹ್ಯಾಂಗ್ ಹೇಳ್ಲಿ,

ಬೇಕಾದ್ರ ಕನಸ್ ಇಲ್ದ ಇರ್ತೀನಿ

ನೀನಿಲ್ದೇ ಇರೋ ಈ ಎದ್ಯಾಗ ಬೆಂಕಿ ಬೀಳ್ಲಿ

೫.ಲೇ ಹುಡುಗಿ

ನನ್ ಎದ್ಯಾಗ ನೀ ಹಚ್ಚಿರೋ

ದೀಪ ಗಾಳ್ಯಾಗಿಟ್ರು ಆಂರಂಗಿಲ್ಲ,

ನನ ಕನಸಿನ್ ತುಂಬಾ ನೀನ ತುಂಬೀದಿ

ನೂರು ತೂತ ಬಿದ್ರು ಸೋರಂಗಿಲ್ಲ

೬.ಲೇ ಹುಡುಗಿ

ನಿನ್ ತುಟ್ಯಾಗ

ಜೇನಿನ್ ಗಣೀನೆ ಇದ್ದಂಗೈತಿ

ಎಷ್ಟೇ ಹೀರಿದ್ರು

ಬಾಯಾರಿಕೆ ಹೋಗಂಗಿಲ್ಲ

ಬಹುಷಃ

ನನ್ ತುಟಿ ಬರಗೆಟ್ಟಂಗೈತಿ

‍ಲೇಖಕರು G

25 December, 2012

8 Comments

  1. D.Ravivarma

    nice…..

  2. bharathi

    4th soooper paravara avare … ulidavoo ella chennagive

  3. Mohan V Kollegal

    ಚೆನ್ನಾಗಿವೆ… 🙂

  4. ಸಹ್ಯಾದ್ರಿ ನಾಗರಾಜ್

    ಐದನೆ ಪದ್ಯ ಇಷ್ಟ ಆಯ್ತುಕಣೋ ಪ್ರವರ..ಬರೀ-ಬರೀ ಇನ್ನೂ ಹೆಚ್ಚೆಚ್ಚು ಮತ್ತು ಚಂದ..

  5. shanthi k.a.

    nice…

  6. umesh desai

    all are good

  7. Chinmay Mathapati

    ಸೂಸು ಬೆಳದಿಂಗಳಲಿ ವಿರಹ ಮರೆತು ಮುತ್ತು ಮಧುವನು ಹೀರಿದ್ದು ತುಂಬಾ ಹಿಡಿಸಿತು ಪ್ರವರ್…………….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading