ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಹೆಜ್ಜೆಗಳಿಗೆ ತಡೆಗೋಡೆಗಳೆಷ್ಟೋ, ನನ್ನೆಡೆಗೆ ನೆಟ್ಟ ಕೆಟ್ಟ ನೋಟಗಳೆಷ್ಟೋ..

ಕ್ಷಮಿಸಿಬಿಡಿ ಪ್ಲೀಸ್

ನಾ ದಿವಾಕರ್

ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ;
ನನ್ನ ಆಕ್ರೋಶವನ್ನು ಅದುಮಿಟ್ಟುಕೊಂಡೆ
ಹತಾಶೆಯನ್ನು ಬಂಧಿಸಿದೆ
ಅಸಹಾಯಕತೆಯ ಮಡಿಲಲ್ಲಿ
ಕರಾಳ ಕೃತ್ಯಗಳಿಗೆ
ಪ್ರತ್ಯಕ್ಷದರ್ಶಿಯಾದೆ !
 
ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ;
ನನ್ನ ಹೆಜ್ಜೆಗಳಿಗೆ ತಡೆಗೋಡೆಗಳೆಷ್ಟೋ
ನನ್ನೆಡೆಗೆ ನೆಟ್ಟ ಕೆಟ್ಟ ನೋಟಗಳೆಷ್ಟೋ ;
ನನ್ನ ಪೃಷ್ಠ, ಕುಚ, ಅಧರ
ಸೊಂಟ, ಕೇಶರಾಶಿಯ
ವ್ಯಾಖ್ಯಾನಗಳಿಗೆನಿತು ಮಿತಿ ;
ಕ್ಷಮಿಸಿಬಿಡಿ
ನನ್ನ ಭಾವನೆಗಳ ಬದಿಗಿಟ್ಟು
ಮುನ್ನಡೆದೆ ನಿರ್ಲಿಪ್ತ
ಭಾವದಲಿ
ಮುಕ್ತ ಹಾದಿಯನರಸಿ !

ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ;
ದೌರ್ಜನ್ಯಕ್ಕೊಳಗಾದ
ಅಮಾಯಕ ಆಕ್ರಂದನ
ಕಿವಿಗಪ್ಪಳಿಸಿತು ; ದುಷ್ಟಾಸನರ
ಅಟ್ಟಹಾಸ ಗೋಚರಿಸಿತು
ಅವಳಿಗಾಸರೆಯಾಗಲಿಲ್ಲ
ಮನ ಪ್ರಾಥರ್ಿಸಿತು
ರಕ್ಷಕನಿಗಾಗಿ ಮತ್ತೊಬ್ಬ
ಕೃಷ್ಣನಿಗಾಗಿ ;
ಅಗೋಚರ ಪಂಜರದೊಳಗಿಂದ !
 
 
ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ;
ನನ್ನ ಆತ್ಮೀಯನ ಅತಿಕ್ರಮಣ
ವಿಚಲಿತಗೊಳಿಸಿತ್ತು
ತಲೆದಿಂಬು ಅಶ್ರುಕೊಳವಾಗಿ
ಕಂಗಳೊಳಗಿನ ನದಿ ಉಕ್ಕೇರಿತ್ತು !
 
ನನ್ನನ್ನು ಕ್ಷಮಿಸಿಬಿಡಿ ಪ್ಲೀಸ್ ;
ಇದು ಭೀತಿಯಲ್ಲ
ಭಯದ ಚಿಂತೆ ಎನಗಿಲ್ಲ
ಘಾಸಿಗೊಂಡ ಮನಸು
ಆಘಾತಗಳಪ್ಪಳಿಕೆಗೆ ಸಿಲುಕಿ
ಜರ್ಝರಿತವಾಗಿದೆ ;
ದಟ್ಟೆದೆಯ ನಿಟ್ಟಿಸುವ
ಮನ್ಮಥ ಲೋಕ
ದಿಟ್ಟಿಸುತ್ತಲೇ ಇದೆ ,,,,,,!
 
(ಸಾಧಾರ )
 
 

‍ಲೇಖಕರು G

20 October, 2014

3 Comments

  1. NA DIVAKAR

    This is original english poetry by vidya ramesh (not vidya rao sorry).
    I’m sorry!
    he groped me.
    But I shut my anger
    jailed my frustration
    and let the darkroom
    witness the cry of helplessness..
    I’m sorry!
    I was blocked my way
    and been commented;
    on my breast, cleavage
    lips, hair, hands….
    and what not?
    I’m sorry!
    I faked my emotions
    and walked away..
    just like that…
    I’m sorry!
    I saw him molesting!
    yet.,
    I never turned to her!
    but prayed(?!)
    for the helping hand;
    invisibly chained..
    I’m sorry!
    My boy friend sexted me!
    I panicked; without uttering
    thrashed my head to the pillow
    and sobbed.. again..
    I’m sorry!
    I wasn’t afraid
    but shocked..
    of lustful world
    gazing lecherously……..

  2. manjulanarayanarao

    tumba chennagide

  3. mmshaik

    nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading