ನನ್ನ ಮೊಬೈಲ್‌ನ 200 ರೂಪಾಯಿಯ full talk time 198 ಕ್ಕೆ ಇಳಿದಿದೆ..

ravi arehalli

ರವಿ ಅರೇಹಳ್ಳಿ

0.5% ಸ್ವಚ್ಛ ಭಾರತದ ಹೆಸರಿನ ಹೆಚ್ಚುವರಿ ಸೆಸ್ ಜಾರಿಗೆ ಬಂದಿದೆ!

ನನ್ನ ಮೊಬೈಲ್‌ನ 200 ರೂಪಾಯಿಯ full talk time 198 ಕ್ಕೆ ಇಳಿದಿದೆ.

ಈಗಾಗಲೇ ಇರುವ 14% ಸೇವಾ ತೆರಿಗೆ (ವಾರ್ಷಿಕ 2.09 ಲಕ್ಷ ಕೋಟಿ) ಯೇ ಹೆಣ ಭಾರವಾಗಿ ಕುಳಿತಿರುವಾಗ ಇನ್ನೊಂದು ಪೀಡೆ ಜೊತೆಯಾಗುತ್ತಿದೆ. ನಮಗೆ ಗೊತ್ತಾಗದಂತೆ ಮೊಬೈಲ್ ಸೇರಿದಂತೆ ಬಹುತೇಕ ಸೇವೆಗಳ ಬೆಲೆಗಳು ದುಬಾರಿಯಾಗಿ ಹೋಗುತ್ತವೆ.

swatch bharath2ಈ ಸೆಸ್ ತಗೋಂಡು ಏನ್ಮಾಡ್ತೀರಿ ಅಣ್ಣಾ ಅಂತಾ ಕೇಳಿದ್ರೆ, ಉತ್ತರ ಎಲ್ಲೆಲ್ಲೋ ಸುತ್ತಾಡಿ ಅದರ ಚುಂಗು ಗಂಗಾನದಿಯ ದಡದಲ್ಲಿ ನಿಂತು ಹೋಗುತ್ತದೆ. ಅಲ್ಲಣ್ಣಾ ಗಂಗಾನದಿಯ ದಡದಗುಂಟ ನೀವೇ ಸಾಕಿರುವ ಲಕ್ಷಾಂತರ ಫ್ಯಾಕ್ಟರಿಗಳು, ಘಾಟುಗಳು, ಹೆಣಗಳು ಅವನ್ನೆಲ್ಲಾ ಏನು ಮಾಡ್ತೀರಿ.. ಸರಿ! ಎಷ್ಟು ವರ್ಷದಲ್ಲಿ ಅದನ್ನು ಕ್ಲೀನ್ ಮಾಡ್ತೀರಿ,. ನಾವು ಎಷ್ಟು ವರ್ಷ ಹೆಚ್ಚುವರಿ ತೆರಿಗೆ ಕಟ್ಟಬೇಕು.. ಎಲ್ಲೂ ಉತ್ತರವಿಲ್ಲ.

ನಿಮ್ಮದೇ ಹಿತ್ತಲಿನ ಯಮುನಾ ಕೊಳಕು ಚರಂಡಿಯ ಕಥೆ ಏನು, ಒಟ್ಟು ಬಾಚಿದ್ದರಲ್ಲಿ ನಮ್ಮದೇ ಕಾವೇರಿ, ಕೃಷ್ಣಾಗಳ ಸ್ವಚ್ಛತೆಗೇನು ಕೊಡುತ್ತಿದ್ದೀರಿ.

ಉತ್ತರವಿಲ್ಲ!

ಪ್ರಸ್ತುತ ಹಣಕಾಸು ವರ್ಷದ ಉಳಿದ ತಿಂಗಳುಗಳಲ್ಲಿ ಈ ತೆರಿಗೆಯಿಂದ ಸಂಗ್ರಹವಾಗಬಹುದಾದ 3,800 ಕೋಟಿ (ವಾರ್ಷಿಕ ಅಂದಾಜು ಹತ್ತು ಸಾವಿರ ಕೋಟಿ) ಗಳನ್ನು ಕಾರ್ಪೋರೇಟ್ ಕಂಪನಿಗಳ ತೆರಿಗೆ ಕಳ್ಳತನ ತಪ್ಪಿಸಿ ಗಳಿಸಲು ಸಾಧ್ಯವಿರಲಿಲ್ಲವೆ? ತೆರಿಗೆ ಸಂಗ್ರಹಿಸಲಾಗದ ಅಧಿಕಾರಶಾಹಿ, ಆಡಳಿತಶಾಹಿಯ ಹೊಣೆಗೇಡಿತನದ ಫಲವನ್ನು ಜನ ಸಾಮಾನ್ಯನ ಮೇಲೆ ಹಾಕುವ ಕೆಟ್ಟ ಆಲೋಚನೆಯನ್ನು ನಿಮ್ಮ ತಲೆಗೆ ತುರುಕಿದವವರು ಯಾರೋ..

ಏನೇನು ಉತ್ತರವಿಲ್ಲದ, ಧೀರ್ಘವಾಗಿ ಚರ್ಚೆಗೊಳ್ಳದ ಇಂತಹ ತುಘಲಕ್ ತೆರಿಗೆಯನ್ನು ಜನಸಾಮಾನ್ಯರ ಮೇಲೆ ಹೇರುವುದಕ್ಕೆ ಇದೇನು ಈಸ್ಟ್ ಇಂಡಿಯ ಕಂಪನಿಯ ಆಡಳಿತವೆ..

ನಮ್ಮ ಜನ ಬಿಗ್‌ಬಾಸ್, ಹಂದಿ, ದನ ಇವುಗಳ ಬಗ್ಗೆ ತಲೆಕೆಡಿಸಿಕೊಂಡಷ್ಟು ತೆರಿಗೆ ಹೆಚ್ಚಳದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಣ ಹೊತ್ತು ಹೊತ್ತೂ ಹೆಗಲು, ಬುದ್ಧಿ ರೂಢಿಗೊಂಡಿವೆ.

ಹಳೆ ಸತ್ಯ: ತೆರಿಗೆ ಹೆಚ್ಚಾದಂತೆ ತಪ್ಪಿಸುವ ಕಳ್ಳರೂ, ಆ ಮೂಲಕ ಅಪರಾಧಿಗಳೂ ಹೆಚ್ಚಾಗುತ್ತಾರೆ!

‍ಲೇಖಕರು admin

November 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: