ಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ

ಈ ಸುಖದ ರಾತ್ರಿ

V Gowda

 

ವೆಂಕಟ್ರಮಣ ಗೌಡ

ladderರಿರಾತ್ರಿ; ಸುಮ್ಮನಿಲ್ಲ ಯಾವುದೂ
ಅವಿರತ ಅವರಿವರ ಸದ್ದುಗದ್ದಲವೂ
ಸುಳ್ಳೇಕೆ ಹೇಳಲಿ
ನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು

ಸಣ್ಣಗೆ ಕಂಪಿಸಿದಂತಿದೆ ಆಕಾಶ
ನಕ್ಷತ್ರಗಳ ತಳಮಳ ತಾಕಿ
ತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದು
ಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ

ಈ ರಾತ್ರಿ ಇಂದೇ ಮುಗಿಯುವ ಹಾಗೆ ಕಾಣುತ್ತಿಲ್ಲ

ಅಲ್ಲಲ್ಲಿ ಅದೆಂಥದೋ ಅಬ್ಬರ
ಬೊಬ್ಬೆಯಿಡುತ್ತಿವೆ ನಾಯಿಗಳು
ಕೇಳಿಸುತ್ತಿದೆ ಯಾರೋ ಚೀರಿದಂತೆ
ಬೊಗಳುವ ನಾಯಿ ಕಚ್ಚದೆಂಬುದು ಬರೀ ಭ್ರಮೆಯೇ?

ಎಣಿಸಬೇಕೆನ್ನಿಸುತ್ತಿದೆ ನಕ್ಷತ್ರಗಳನ್ನೆಲ್ಲ
ನಿದ್ದೆಗೇಡನ್ನು ಸಾರ್ಥಕವಾಗಿಸಲು ಅದೊಂದೇ ದಾರಿ
ಆದರೆ ಎಣಿಸಿ ಎಣಿಸಿ ಯಾವ ಬುಟ್ಟಿಗೆ ಹಾಕುವುದು
ಈ ಫಳಫಳ ನಕ್ಷತ್ರಗಳ

ಬೆಳಗಾಗುವುದರ ಸುಳಿವೇ ಇಲ್ಲ
ನೋವನ್ನೇ ಒಡೆದಿಡುತ್ತಿರುವ ಈ ಸುಖದ ರಾತ್ರಿ
ಬಹುಶಃ ಕೊನೆಯಾಗುವುದೇ ಇಲ್ಲ.

‍ಲೇಖಕರು admin

November 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸುಧಾ ಚಿದಾನಂದಗೌಡ

    ನೋವನ್ನೇ ಒಡೆದಿಡುತ್ತಿರುವ ಈ ಸುಖದ ರಾತ್ರಿ
    ಬಹುಶಃ ಕೊನೆಯಾಗುವುದೇ ಇಲ್ಲ.

    very nice

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: