ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನ ಮನೆಯ ಹಸಿಕಸದ ಜವಾಬ್ದಾರಿ ನನ್ನದೇಅಲ್ಲವೇ?’ ಸುಮಂಗಲಾ ಕೇಳ್ತಾರೆ

ಸುಮಂಗಲಾ

ಬೆಂಗಳೂರು ಮಹಾನಗರದ ಕಸದ ಡಂಪಿಂಗ್ ಯಾರ್ಡ್ ಮಂಡೂರು ಪ್ರತಿನಿತ್ಯ ಸುದ್ದಿಯಲ್ಲಿದೆ. ಸಿಲಿಕಾನ್ ಸಿಟಿ ಇತ್ಯಾದಿ ವಿಶೇಷಣಗಳಿರುವ, ನೂರಾರುರೀತಿಯ ಐಟಿ ಸಂಬಂಧಿತ ಕೆಲಸಗಳ ಹೊರಗುತ್ತಿಗೆ ನಗರವೊಂದುತನ್ನದೇಕಸವನ್ನು ವೈಜ್ಞಾನಿಕರೀತಿಯಲ್ಲಿ ನಿರ್ವಹಣೆ ಮಾಡಲಾಗದೇ, ಮಂಡೂರು ಮತ್ತುಇನ್ನಿತರಕಡೆ ಸುರಿದು, ಸಮಸ್ಯೆ ಬಗೆಹರಿಯಿತುಎಂದು ಕೈತೊಳೆದುಕೊಳ್ಳುತ್ತಿದೆ.
ಮಂಡೂರುಅಥವಾ ಸುತ್ತಮುತ್ತಲಿನ ಯಾವುದೇ ಹಳ್ಳಿ ಯಾಕೆ ಬೃಹತ್ ಬೆಂಗಳೂರಿನ ಕಸದ ಡಂಪಿಂಗ್ ಯಾರ್ಡ್ ಆಗಬೇಕು? ಅಲ್ಲಿಯ ಜನರು ಏನು ಪಾಪ ಮಾಡಿದ್ದಾರೆಂದು ನಮ್ಮತ್ಯಾಜ್ಯ ಸುರಿತದಿಂದಆಗುತ್ತಿರುವ ಹತ್ತು ಹಲವು ರೀತಿಯಆರೋಗ್ಯದ ಸಮಸ್ಯೆಗಳಿಗೆ ಬಲಿಪಶುವಾಗಬೇಕು? ಯಾಕೆ ಬೆಂಗಳೂರಿನ ಸುತ್ತಲ ಹಳ್ಳಿಗಳ ನೆಲ, ಜಲ, ಗಾಳಿ ನಮ್ಮತ್ಯಾಜ್ಯದಿಂದ ಕಲುಷಿತಗೊಳ್ಳಬೇಕು? ಕಸದ ವಿಂಗಡನೆ, ವಿಲೇವಾರಿ ಮತ್ತು ನಿರ್ವಹಣೆಯನ್ನು ವೈಜ್ಞಾನಿಕರೀತಿಯಲ್ಲಿ ಬಿಬಿಎಂಪಿ ಮತ್ತು ಸಕರ್ಾರ ನಿಭಾಯಿಸುತ್ತಿಲ್ಲ ಮತ್ತುಕಸದ ನಿಭಾವಣೆ ಬಗೆಹರಿಸಲಾಗದ ಸಮಸ್ಯೆಯೇನಲ್ಲಎಂಬುದನ್ನು ನಾನು ಒಪ್ಪುವೆ. ಆದರೆ ಸಮಸ್ಯೆಯನ್ನು ಬರೀ ವ್ಯವಸ್ಥೆಯ ಮೇಲೆ ಹಾಕಿಬಿಟ್ಟರೆ ನಮ್ಮಎಂದರೆ ಪ್ರತೀ ದಿನ ಕಸವನ್ನುಉತ್ಪತ್ತಿ ಮಾಡುವ ನಮ್ಮೆಲ್ಲರಜವಾಬ್ದಾರಿ ಮುಗಿದು ಹೋಯಿತೇ? ಪ್ರತೀದಿನ ಹಸಿ ಮತ್ತು ಒಣ ಕಸವನ್ನುಉತ್ಪತ್ತಿ ಮಾಡಿ, ಅದನ್ನುಕಸದ ವ್ಯಾನಿನವನಿಗೋ, ಗಾಡಿಯವಳಿಗೋ ಕೊಟ್ಟು ಕೈತೊಳೆದುಕೊಂಡು, ಟಿವಿಯಲ್ಲಿಯೋ, ಪತ್ರಿಕೆಯಲ್ಲಿಯೋ ಬರುತ್ತಿರುವ ಮಂಡೂರಿನವರ ಪ್ರತಿಭಟನೆಯನ್ನು ನೋಡುತ್ತಲೋ, ಓದುತ್ತಲೋ ಕುಳಿತುಕೊಳ್ಳುವ ನಾವೆಲ್ಲರೂ ಇದೀಗ ನಮ್ಮಆತ್ಮವನ್ನುತಟ್ಟಿ ಕೇಳಿಕೊಳ್ಳಬೇಕಾದ ಪ್ರಶ್ನೆ.

ವರ್ಷದ ಹಿಂದೆಯೂಇದೇ ಸಮಸ್ಯೆಉದ್ಭವವಾದಾಗ, ಬಿಬಿಎಂಪಿ ಎಲ್ಲೆಡೆ ಹಸಿ ಮತ್ತು ಒಣ ಕಸ ವಿಂಗಡಿಸಿ, ವ್ಯಾನಿನವರಿಗೆ ನೀಡುವಕುರಿತು ಪ್ರಕಟಣೆಗಳನ್ನು, ಜಾಹೀರಾತುಗಳನ್ನು ಪ್ರಕಟಿಸಿತು. ಆದರೆ ಕಸ ಸಂಗ್ರಹಿಸುವ ವ್ಯಾನಿನ ಹುಡುಗರಿಗೆ ಮತ್ತುಗಾಡಿಯವರಿಗೆ ಈ ಬಗ್ಗೆ ಸೂಕ್ತ ತರಬೇತಿಯಾಗಲೀ, ಹಾಗೆ ಕಸ ವಿಂಗಡಿಸಿ ಸಂಗ್ರಹಿಸಲು ವಿವಿಧ ಬುಟ್ಟಿಗಳನ್ನಾಗಲೀ ನೀಡಲಿಲ್ಲ. ಹೀಗಾಗಿ ಕೆಲವರು ವಿಂಗಡಿಸಿ ಕೊಟ್ಟರೂಅದನ್ನುಒಟ್ಟಾರೆಯಾಗಿ ವ್ಯಾನಿನಲ್ಲಿ ಸುರಿದುತೆಗೆದುಕೊಂಡು ಹೋಗುವುದನ್ನುಕಂಡಾಗ, ಅರೆ, ನಾವೊಬ್ಬರು ವಿಂಗಡಿಸಿ ಕೊಟ್ಟರೂ ಏನೂ ಪ್ರಯೋಜನವಿಲ್ಲ ಎಂಬ ಅಸಹನೆ ನಾಗರಿಕರಲ್ಲಿ ಬೆಳೆಯುವುದು ಸಹಜ. ಇದಕ್ಕೆತುಂಬ ಸರಳವಾದ ಉಪಾಯಎಂದರೆಕನಿಷ್ಟ ಹಸಿ ಮತ್ತು ಒಣ ಎಂದು ವಿಂಗಡಿಸಿ, ಸಾಧ್ಯವಿದ್ದಷ್ಟೂ ಹಾಲಿನ್ ಕವರ್ಗಳು ಇನ್ನಿತರ ಕವರ್ಗಳನ್ನು ತೊಳೆದು ಪ್ರತ್ಯೇಕವಾಗಿರಿಸುವುದು ಮತ್ತು ಹಸಿ ಕಸವನ್ನು ನಾವೇ ಇಟ್ಟುಕೊಂಡು, ಗೊಬ್ಬರ ಮಾಡುವುದು. ಹೀಗೆ ಹಸಿ ಕಸವನ್ನು ಮನೆಯಲ್ಲಿಯೇಗೊಬ್ಬರವಾಗಿಸಬಲ್ಲ ಹಲವಾರು ಮಿತವ್ಯಯದ ಸಾಧನಗಳು ಇಂದು ಲಭ್ಯವಿವೆ. ಜೊತೆಗೆ ಹೆಚ್ಚು ಖರ್ಚಿಲ್ಲದೇ ನಿಭಾಯಿಸುವಂತಹ, ಮನೆಯಲ್ಲಿಚಿಕ್ಕ ಜಾಗದಲ್ಲಿಟ್ಟುಕೊಳ್ಳಬಹುದಾದ ವಿವಿಧಗಾತ್ರದ ಮಡಿಕೆಗಳನ್ನೂ ಬಳಸಿಕೊಳ್ಳಬಹುದು.

ಬಹಳ ಸರಳ ವಿಧಾನವೊಂದಿದೆ, ಮುಚ್ಚಳಗಳಿರುವ ಎರಡು ಮಡಿಕೆಗಳನ್ನು ತೆಗೆದುಕೊಳ್ಳಿ. ಮೊದಲ ಮಡಿಕೆಯಲ್ಲಿ ಹಸಿಕಸವನ್ನು ಪ್ರತೀ ದಿನ ಹಾಕಿ, ಕೋಲಿನಿಂದಕೈಯಾಡಿಸುತ್ತಇರಬೇಕು. ಮುಚ್ಚಿಟ್ಟ ಮಡಿಕೆಯಲ್ಲಿ ಕಸ ತಾನೇ ಕೊಳೆತು, ಗೊಬ್ಬರವಾಗುತ್ತ ಬರುತ್ತದೆ. ಒಂದು ಮಡಿಕೆತುಂಬಿದ ನಂತರಎರಡನೆಯ ಮಡಿಕೆಗೆ ಹಾಕಲಾರಂಭಿಸಿ. ಈ ಮೊದಲನೆಯ ಮಡಿಕೆಯಲ್ಲಿ ಕೊಳೆಯುತ್ತಿರುವ ಕಸವನ್ನು ನಾಲ್ಕೈದು ದಿನಕ್ಕೊಮ್ಮೆ ಕೋಲಿನಿಂದಕೈಯಾಡಿಸುತ್ತಇರಿ ಮತ್ತು ಕೊಳೆಯಲು ಅಗತ್ಯವೆನ್ನಿಸಿದರೆ ಚೂರು ನೀರು ಚಿಮುಕಿಸಿ. ಎರಡನೆಯ ಮಡಿಕೆತುಂಬುವ ವೇಳೆಗೆ ಮೊದಲನೆಯ ಮಡಿಕೆಯದು ಪೂರ್ಣಗೊಬ್ಬರವಾಗಿರುತ್ತದೆ. ಅದನ್ನುಒಂದೆರಡು ದಿನ ಗಾಳಿಗೆ ತೆರೆದಿಟ್ಟು, ಗಿಡಗಳಿಗೆ ಹಾಕಿ. ಖಾಲಿಯಾದ ಮಡಿಕೆಯಲ್ಲಿ ಮತ್ತೆ ಹಸಿ ಕಸ ಹಾಕಲಾರಂಭಿಸಿ. ತರಕಾರಿ, ಹಣ್ಣುಗಳು, ಸೊಪ್ಪುಇತ್ಯಾದಿಯನ್ನು ಹೆಚ್ಚುವಾಗಲೇ, ಸಿಪ್ಪೆಗಳನ್ನು ಪ್ರತ್ಯೇಕಿಸಿ, ಅವು ದೊಡ್ಡವಿದ್ದರೆಚಿಕ್ಕ ಚೂರುಗಳನ್ನಾಗಿಸಿ, ಒಂದು ಬೌಲ್ನಲ್ಲಿ ಪ್ರತ್ಯೇಕವಾಗಿಎತ್ತಿಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇನ್ನುಊಟದ ನಂತರ ಉಳಿಯುವ ಚೂರುಪಾರು ಉಳಿಕೆಗಳನ್ನು ಕೂಡಅದೇ ಬೌಲ್ನಲ್ಲಿ ಹಾಕಿಡಬೇಕು. ದಿನದಲ್ಲಿ ಒಂದು ಸಲ ಅದನ್ನು ಮಡಿಕೆಗೆ ಹಾಕಿ, ಕೈಯಾಡಿಸಲು ಹೆಚ್ಚೆಂದರೆ 5-7 ನಿಮಿಷ ಸಮಯ ಸಾಕು. ನೋಡಿ, ನಮ್ಮ ಈ ಚಿಕ್ಕ ಪ್ರಯತ್ನ ದಾರಿ ಪಕ್ಕದಲ್ಲಿ ಕಸದ ದುರ್ನಾತವನ್ನು, ತ್ಯಾಜ್ಯ ಸುರಿತದಿಂದ ಮಂಡೂರಿನಂತಹ ಡಂಪ್ಯಾರ್ಡ್  ನಲ್ಲಿ ಆಗುವ ಎಲ್ಲ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗಾದ್ರೂ ತಪ್ಪಿಸುತ್ತದೆ ಅಲ್ಲವೇ??

ನಾನು ಕಳೆದ ಎರಡೂ ಮುಕ್ಕಾಲು ವರ್ಷದಿಂದ ಡೈಲಿಡಂಪ್ನ ಕಂಬ ಎಂಬ ಮೂರು ಮಡಿಕೆಗಳನ್ನು ಬಳಸಿಕೊಂಡು, ಹಸಿ ಕಸವನ್ನು ಗೊಬ್ಬರವಾಗಿಸಿ, ನನ್ನದೇ ಗಿಡಗಳಿಗೆ ಹಾಕುತ್ತಿರುವೆ. ನನ್ನಇಕ್ಕಟ್ಟಾದ ಬಾಡಿಗೆಮನೆಯಲ್ಲಿ, ಟೆರೇಸ್ಗೆ ಹೋಗುವ ಜಾಗದಲ್ಲಿ ಗಿಡಗಳನ್ನಿಟ್ಟುಕೊಂಡಿದ್ದಕ್ಕೆ ಒಂದು ಮುಖ್ಯಕಾರಣವೆಂದರೆ ಈ ಗೊಬ್ಬರವನ್ನು ಮತ್ತುತರಕಾರಿ, ಅಕ್ಕಿ ತೊಳೆದ ನೀರನ್ನು ಮರುಬಳಕೆ ಮಾಡಬಹುದುಎಂದು. ಅದಕ್ಕಿಂತ ಮೊದಲೂತರಕಾರಿ, ಹಣ್ಣಿನ ಸಿಪ್ಪೆಗಳನ್ನು, ಟೀ ಮತ್ತುಕಾಫಿ ಗಸಿಯನ್ನು ಗಿಡಗಳ ಕುಂಡಗಳಿಗೆ ನೇರವಾಗಿಯೇ ಹಾಕುತ್ತ, ಆಗೀಗ ಬುಡಕೈಯಾಡಿಸುತ್ತ ಇರುತ್ತಿದ್ದೆ.
ಅಯ್ಯೋ, ಇದೆಲ್ಲ ಸ್ವಂತ ಮನೆಯಲ್ಲಿ ಮಾಡಬಹುದು, ಬಾಡಿಗೆ ಮನೆಯಲ್ಲಿ ಸಾಧ್ಯವಿಲ್ಲ ಎಂದು ಮತ್ತೆ ನೆವ ಹೇಳಬೇಡಿ. ಹಸಿಕಸವನ್ನು ಮನೆಯಲ್ಲಿಯೇಗೊಬ್ಬರವಾಗಿಸುವ ಈ ವ್ಯವಸ್ಥೆಯನ್ನು ಬಾಡಿಗೆಮನೆಯಲ್ಲಿಯೂಆರಾಮಾಗಿ ನಿಭಾಯಿಸಬಹುದು, ಏಕೆಂದರೆಇದಕ್ಕೆ ನಿಮ್ಮ ಪ್ಯಾಸೇಜಿನಅಥವಾ ಮೆಟ್ಟಿಲಿನ ಅಥವಾ ಬಾಲ್ಕನಿಯಅಥವಾ ವಾಹನ ನಿಲ್ಲಿಸುವ ಮೂಲೆಯ 1.5*1.5 ಅಡಿ ಜಾಗವೇ ಸಾಕು. ಇನ್ನು ಹೂಗಿಡಗಳನ್ನು ಇಟ್ಟುಕೊಳ್ಳಲು ಜಾಗವೇಇಲ್ಲಎಂದಾದರೆ ಪರವಾಗಿಲ್ಲ, ನೀವು ಮೊದಲುಗೊಬ್ಬರ ಮಾಡಿ, ನಂತರ ಈ ಗೊಬ್ಬರನ್ನು ಕೊಳ್ಳುವವರೂ ಇದ್ದಾರೆ. ಕೊಳ್ಳುವವರನ್ನು ಹುಡಕಲೂ ಸಮಯವಿಲ್ಲ ಎಂದಾದರೆ ನಿಮ್ಮಅಕ್ಕಪಕ್ಕದಲ್ಲಿರುವ ಉದ್ಯಾನಗಳನ್ನು ನಿರ್ವಹಣೆ ಮಾಡುತ್ತಿರುವವರಿಗೆ ನೀಡಬಹುದು.

ಮಂಡೂರಿನ ಮತ್ತು ಬೇರೆಡಂಪ್ ಯಾರ್ಡ್ ಗಳ ನೆಲ-ಜಲ-ಗಾಳಿಯನ್ನು ಕಲುಷಿತಗೊಳಿಸುವುದೇ ಅಥವಾಕಸವನ್ನು ವಿಂಗಡಿಸಿ, ನಮ್ಮ ಹಸಿಕಸದ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುವುದೇ? ನಮ್ಮ ಈ ಆಯ್ಕೆಯ ಮೇಲೆ ಮಂಡೂರಿನ(ಮತ್ತುಇಂಥದೇಡಂಪ್ ಯಾರ್ಡಗಳಾಗಿರುವ ಎಲ್ಲ ಸ್ಥಳಗಳ) ಜೀವಜಾಲದ ಬದುಕಿನಗುಣಮಟ್ಟ ನಿಂತಿದೆಎಂಬುದನ್ನು ನೆನಪಿಡೋಣ. ಮುಖ್ಯವಾಗಿ ಈ ನಿಟ್ಟಿನಲ್ಲಿ ನಮಗೆ ಬೇಕಾಗಿದ್ದು ಒಣ ಮಾತು ಚರ್ಚೆಗಳಲ್ಲ, ಬದಲಿಗೆ ಕಸ-ನನ್ನ ಹಿತ್ತಲಿಗೆ ಬೇಡ ಎಂಬ ನಮ್ಮ  ಮನೋಭಾವದಲ್ಲಿ ಬದಲಾವಣೆಯಾಗಬೇಕಿದೆ. ನನ್ನ ಮನೆಯ ಹಸಿ ಕಸ ರಸ್ತೆಯನ್ನೋಅಥವಾ ಮಂಡೂರನ್ನೋ ಸೇರುವುದು ಬೇಡವೇ ಬೇಡ ಎಂಬ ದೃಢನಿರ್ಧಾರ ಮತ್ತು ನನ್ನ ಮನೆಯ ಹಸಿ ಕಸದ ಅಡ್ಡಪರಿಣಾಮಗಳಿಗೆ ಯಾವುದೋ ಹಳ್ಳಿಯ ಜನತೆಯನ್ನು ಬಲಿಪಶುವಾಗಿಸುವುದು ಬೇಡ ಎಂಬ ಕಾಳಜಿ ನಮ್ಮೊಳಗೆ ಹುಟ್ಟಬೇಕಿದೆ.
 

‍ಲೇಖಕರು G

15 June, 2014

3 Comments

  1. Anonymous

    eenthah sandarbhadalli ollay lekhan .dhannevadagalu madam

  2. vijayendra kulkarni

    uttama bareha

  3. 11453

    ಸಾಮಾಜಿಕ ಕಳಕಳಿಯಿರುವ ಉತ್ತಮ ಬರೆಹ.
    ನಮ್ಮನೆಯ ಕಸವನ್ನೂ ಈ ರೀತಿಯಲ್ಲಿ ನಿರ್ವಹಿಸಲು ಆರಂಭಿಸಿದ್ದೇವೆ. ಮಾಂಸಾಹಾರೀ ಅಡುಗೆಯ ಹಸಿಕಸವನ್ನು ಈ ರೀತಿಯಲ್ಲಿ ತುಂಬಿಸಿಟ್ಟಾಗ ಬರುವ ದುರ್ವಾಸನೆಯನ್ನು ಮತ್ತು ಸೊಳ್ಳೆ, ನೊಣ, ಜಿರಲೆ, ಇತ್ಯಾದಿಗಳು ಬಾರದಂತೆ ನಿಯಂತ್ರಿಸುವದಕ್ಕೆ ಮಾಡಿದ ಪ್ರಯತ್ನ ಅಷ್ಟೇನೂ ಫಲಪ್ರದವಾಗಿಲ್ಲ. ಈ ಕುರಿತು ಸಲಹೆಗಳನ್ನು ನೀಡಿದರೆ ಒಳ್ಳೆಯದು.
    ಪಾತ್ರೆ ತುಂಬಿದ ಮೇಲೆ ಅದನ್ನು ವಿಲೇವಾರಿ ಮಾಡುವ ಕ್ರಮವನ್ನು ಹುಡುಕಬೇಕು. ನಾವು ಯಾವ ರೀತಿಯ ಗಿಡವನ್ನೂ ಬೆಳೆಸಿಲ್ಲ. ಪಕ್ಕದ ಉದ್ಯಾನಗಳಲ್ಲಿ ವಿಚಾರಿಸಬೇಕು.
    ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿದ್ದು ಅವರಿಬ್ಬರೇ ಇರುವ ಮನೆಗಳಲ್ಲಿ ಈ ರೀತಿಯ ವ್ಯವಸ್ಥೆ ಕಷ್ಟಕರ. ತಾಳ್ಮೆ, ವ್ಯವಧಾನ, ಕಾಳಜಿ, ಇತ್ಯಾದಿಗಳು ಅವರಲ್ಲಿ ಕಡಿಮೆ.
    ಎಲ್ಲಾ ತರಹದ ತೆರಿಗೆ, ಸೆಸ್, ಇತ್ಯಾದಿಗಳನ್ನು ತೆತ್ತೂ, ನಿಮ್ಮನೆ ಕಸವನ್ನು ನೀವೇ ನಿರ್ವಹಿಸಿ, ನಿಮ್ಮನೆ ರಕ್ಷಣೆಯನ್ನು ನೀವೇ ನೋಡಿಕೊಳ್ಳಿ, ಮನೆಯ ಸುತ್ತಲೂ ಗ್ರಿಲ್ ಅಳವಡಿಸಿರಿ, ನಿಮ್ಮ ಕತ್ತಲ್ಲಿರುವ ತಾಳಿಯನ್ನಷ್ಟೇ ಅಲ್ಲ, ನಿಮ್ಮ ಮಾನವನ್ನೂ ಪೆಪ್ಪರ್ ಸ್ಪ್ರೇ, ಜೂಡೊ,ಕರಾಟೆಗಳನ್ನು ಕಲಿತು ನೀವೇ ರಕ್ಷಿಸಿಕೊಳ್ಳಿ, ಈ ಬೇಸಗೆಯಲ್ಲಿ ನೀರು ಕೊಡಲ್ಲ; ಟ್ಯಾಂಕರಿನಲ್ಲಿ ಹಾಕಿಸಿಕೊಳ್ಳಿ, ವಿದ್ಯುತ್ ಸರಬರಾಜು ಇರಲ್ಲ, ಇನ್ವರ್ಟರ್ ಹಾಕಿಸಿಕೊಳ್ಳಿ, ರಸ್ತೆ ಸರಿಯಿಲ್ಲ; ಬಸ್ ವ್ಯವಸ್ಥೆಯಿಲ್ಲ; ನೀವೇ ಸರಿಪಡಿಸಿಕೊಳ್ಳಿ, ಹೀಗೆ ಎಲ್ಲವನ್ನೂ ನಾವು ಪ್ರಜೆಗಳೇ ಮಾಡಿಕೊಂಡು, ಚುನಾಯಿತ ಜನಪ್ರತಿನಿಧಿಗಳನ್ನು ಓಲೈಸಿ, ಸಾಕುವದಕ್ಕೇ ಪ್ರಜಾಪ್ರಭುತ್ವವೆನ್ನುತ್ತಾರೆ, ನಮ್ಮ ಭವ್ಯ ಭಾರತದಲ್ಲಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading