ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುದ್ಧನಿಗೆ ಆಸೆಗಳಿವೆ!

ಎಚ್ ಎಂ ಮಹೇಂದ್ರ ಕುಮಾರ್

ಶುದ್ಧೋದನನ ಪುತ್ರ
ಸಿದ್ದಾರ್ಥನಿಗೆ
ವೃದ್ಧಾಪ್ಯ, ದುಃಖ,
ರೋಗ-ರುಜಿನಗಳು, ಸಾವಿಲ್ಲದ
ಹುಟ್ಟಿನ, ಅಮರತ್ವ

ಪಡೆಯುವ
ಮಹದಾಸೆ!

ಅರಮನೆ, ಅರಸೊತ್ತಿಗೆ,
ಅಷ್ಟೈಶ್ವರ್ಯ, ಸುಖ,
hands paintingಪುತ್ರ ರಾಹುಲ, ಉಸಿರಾದ ಪತ್ನಿ,
ಮಗಧ ಸಾಮ್ರಾಜ್ಯವನ್ನು ಬಿಟ್ಟು
ಕತ್ತಲಲ್ಲಿ ಕಾಡು ಸೇರಿದ
ಸಿದ್ಧಾರ್ಥನಿಗೆ
ಬುದ್ಧನಾಗುವ ದೊಡ್ಡಆಸೆ!

ತನ್ನಾಸೆಗಾಗಿ, ಛಳಿಗಾಳಿ,
ಮಳೆಬಿಸಲು
ಲೆಕ್ಕಿಸದೇ ವೃಕ್ಷದಡಿ
ಕಣ್ಣುಮುಚ್ಚಿ ಕೂತ
ಸಿದ್ಧಾರ್ಥ, `ಬುದ್ಧ’ನಾಗಿ,
ಬೋಧಿಸಿದ್ದು, `ಆಸೆಯೇ ದುಃಖಕ್ಕೆ
ಮೂಲ ಕಾರಣ’! ಎಂದು.

ನಮ್ಮ, ಸಿದ್ಧಾರ್ಥನಿಗೆ,
ಹೆಂಡತಿ, ಮಕ್ಕಳು, ಸಂಸಾರ, ಜವಾಬ್ದಾರಿ
ಹೊಣೆಗಾರಿಕೆ, ಮನೆ, ಅಯ್ಯೋ,
ಏನನ್ನೂ, ಎಲ್ಲರನ್ನೂ ಥಟ್ಟನೇ ಬಿಟ್ಟು
ಎದ್ದು ಹೋಗದೇ, ಇದ್ದಲ್ಲೇ
`ಬುದ್ಧ’ನಾಗುವ ಮಹದಾಸೆ.

ಸಿದ್ಧಾರ್ಥ ಬುದ್ಧನಾಗದೇ ಇದ್ದಲ್ಲಿ
ಸಾಮ್ರಾಟನೋ, ಚಕ್ರವರ್ತಿಯೋ
ಆಗಿ, ಯುದ್ಧ ಸಾರುತ್ತಿದ್ದ, ಅಲ್ಲವೇ?
ನಮ್ಮ ಸಿದ್ದಾರ್ಥನೂ,
`ಬುದ್ಧ’ನಾಗುವುದನ್ನು ಕೈಬಿಟ್ಟಿಲ್ಲ,
ಏನಾಗುವನೋ?

ಅವನಿಗೂ ಅಗಣಿತ ಆಸೆಗಳಿವೆ,
ಆಕಾಂಕ್ಷೆಗಳೂ ಇವೆ
ಮೈತುಂಬಿದ ಯೌವ್ವನವಿದೆ,
ಮದವೂ ಇದೆ, ಅಹಂಕಾರವೂ ಇದೆ,
ವೈರಾಗ್ಯವೂ ಇದೆ, ಆದರೂ
ಏನಾದಾನೋ? ಎಂಬ
ಭಯ ಅನೇಕರಲ್ಲಿದೆ.

`ಬುದ್ಧ’ನ ಜಪದಲ್ಲಿ
ಮುಗುಳ್ನಗು ತುಳುಕುತ್ತಿದೆ.

‍ಲೇಖಕರು Admin

19 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading