ನನ್ನ ಬುಕ್: ಬಿ ಸುರೇಶ ಆಯ್ಕೆ

beesu-Suresha-01

ಬಿ ಸುರೇಶ 

ನಾನೀಗ ನಾಲ್ಕು ಪುಸ್ತಕವನ್ನು ಓದುತ್ತಾ ಇದ್ದೇನೆ.

1. My God is a women – Noor Jehan
ಇದೊಂದು ಕಾದಂಬರಿ. ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳ ಬದುಕು ಯಾವ ರೀತಿ ಇರುತ್ತದೆ ಎಂಬ ವಿವರ ಬಿಚ್ಚಿಡುತ್ತಾ, ತಮ್ಮ ಧರ್ಮದ ಒಳಗೆ ಇರುವ ಅಡ್ಡಗೋಡೆಗಳನ್ನು ದಾಟಿಕೊಳ್ಳಲು ಈ ಹೆಂಗಸರು ಹೇಗೆ ಪ್ರಯತ್ನಿಸುತ್ತಾರೆ ಎಂದು ವಿವರಿಸುವ ಕಥನ. ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗುವ ಕತೆಯು ಸ್ವಾತಂತ್ರ್ಯ ನಂತರದ ಅನೇಕ ವಿವರಗಳ ಮೂಲಕ ಮುಸ್ಲಿಮರ ಬದುಕನ್ನು ತೆರೆದಿಡುತ್ತದೆ. ಆ ಮೂಲಕ ಆ ಹೆಂಗಸರು ತಮ್ಮ ನೋವುಗಳನ್ನು ದಾಟಿಕೊಳ್ಳಲು ಇರುವ ಮಾರ್ಗವನ್ನು ತಿಳಿಸುತ್ತದೆ.
2. ಓದಿರಿ – ಬೋಳುವಾರು ಮಹಮ್ಮದ್ ಕುಂಞ
ಪ್ರವಾದಿ ಮಹಮ್ಮದನ ಕುರಿತ ಚಾರಿತ್ರಿಕ ಕಾದಂಬರಿ. ಈ ಬಗ್ಗೆ ಅದಾಗಲೇ ಸಾಕಷ್ಟು ಪ್ರಚಾರವೂ ಆಗಿರುವುದರಿಂದ ಇದರ ಬಗ್ಗೆ ವಿವರಿಸಬೇಕಿಲ್ಲ.
3. ಆನಂದ ಲಹರೀ – ಲಕ್ಷ್ಮೀಶ ತೋಳ್ಪಾಡಿ
ಶಂಕರಾಚಾರ್ಯರ “ಸೌಂದರ್ಯ ಲಹರಿ” ಕುರಿತಂತೆ ಲಕ್ಷ್ಮೀಶ ತೋಳ್ಪಾಡಿಯವರು ಪತ್ರಿಕೆಯೊಂದರಲ್ಲಿ ಬರೆದ ಲೇಖನಗಳ ಸಂಗ್ರಹ. ಲಕ್ಷ್ಮೀಶ ತೋಳ್ಪಾಡಿಯವರು ಮೂಲ ಕವನಗಳನ್ನು ಗ್ರಹಿಸಿ, ವ್ಯಾಖ್ಯಾನಿಸುವ ಕ್ರಮವೇ ವಿಶೇಷವಾದದ್ದು. ಇಂತಹದನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲಾಗದು. ನಿಧಾನವಾಗಿ, ಪ್ರತಿ ಭಾಗವನ್ನು ಓದಿ, ಆನಂದಿಸಬೇಕು. ಪ್ರತಿ ಮರು ಓದಿನಲ್ಲೂ ಬೇರೆಯ ಧ್ವನಿಗಳನ್ನು ಹೊರಡಿಸುವ ಇಂತಹ ಪುಸ್ತಕಗಳನ್ನು ಓದುವುದು ಸದಾ ಸಂತೋಷ ಕೊಡುವ ಕೆಲಸ.
4. ಅಮ್ಮಮ್ಮ ಹೇಳಿದ ಕತೆಗಳು – ರಜನಿ ನರಹಳ್ಳಿ (ಚಿತ್ರದಲ್ಲಿದ್ದಾರೆ) 
ಅಜ್ಜಿಯು ಮೊಮ್ಮಕ್ಕಳಿಗೆ ಹೇಳಿದ ರಂಜಕ ಕಥೆಗಳನ್ನು ಮರುಸೃಷ್ಟಿಸಿ ಬರೆಯಲಾಗಿದೆ. ಸುರಳೀತ ಓದಿಗೆ ಒಗ್ಗುವ ಪುಸ್ತಕ.
ಇದಲ್ಲದೆ ಮನೋಹರ ಗ್ರಂಥಮಾಲಾದ ಹೊಸ ವರ್ಷದ ಪುಸ್ತಕಗಳ ಕಟ್ಟು ಮತ್ತು ಅಕ್ಷರ ಪ್ರಕಾಶನದ ಹೊಸ ಪುಸ್ತಕಗಳ ಕಟ್ಟು ಮತ್ತು ಅಭಿನವ ಪ್ರಕಾಶನದ ಹೊಸ ಪುಸ್ತಕಗಳ ಕಟ್ಟು ಹಾಗೂ ಮಣಿಪಾಲ ಯೂನಿವರ್ಸಿಟಿಯ ಮುದ್ರಣ ವಿಭಾಗವು ಪ್ರಕಟಿಸಿರುವ ನಾಲ್ಕು ಹೊಸ ಪುಸ್ತಕಗಳ ಕಟ್ಟು ಬಂದಿವೆ. ಅವುಗಳನ್ನಿನ್ನೂ ಬಿಚ್ಚಿಲ್ಲ.
ಓದು ಎನ್ನುವುದು ಅದ್ಭುತ ಸುಖಗಳನ್ನು ದಾಟಿಸುವ ಅಭ್ಯಾಸ… ನನಗ್ಯಾರಾದರೂ ಸದಾ ಓದುವ ಕೆಲಸವನ್ನು ಕೊಟ್ಟಿದ್ದರೆ ನಾನು ಇನ್ನೆಲ್ಲವನ್ನೂ ಬಿಟ್ಟು ಇದೇ ಕೆಲಸವನ್ನು ಮಾಡುತ್ತಾ ಇರುತ್ತಿದ್ದೆ.
ಒಳಿತಿಗಾಲಿ.

‍ಲೇಖಕರು Admin

January 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: