ನನ್ನ ‘ನೀಲಿನಕ್ಷತ್ರ’ ಉರಿದುಹೋಯಿತು..

(ವೇಮುಲ ನೆನಪಿನಲ್ಲಿ)

ನನ್ನ ‘ನೀಲಿನಕ್ಷತ್ರ’ ಉರಿದುಹೋಯಿತು
ನಟ್ಟನಡುವಿನಲ್ಲಿ
ನಿಂತ ನಿಲುವಿನಲ್ಲೆ
ಸುಟ್ಟು ಕೊಂದರು….🔥

ಬಾಳಬೇಕಿತ್ತು
ಬೆಳಗಬೇಕಿತ್ತು
ಜಗತ್ತಿನ ಕತ್ತಲಿಗೆ ಕಂದೀಲು ಹಿಡಿಯಬೇಕಿತ್ತು
ಅಷ್ಟರಲ್ಲೇ ಕೊಂದರು

ಮಿಣಿ ಹಗ್ಗಕ್ಕೆ ಬೆಣ್ಣೆ ಸವರಲಾಗಿತ್ತು
ಪಾಷಾಣದ ಕಡಾಯಿಗಳನ್ನು ಮುಂದಿಡಲಾಗಿತ್ತು
ದಾರಿಗಳಿಗೆ ಜಾಲಿ ಮುಳ್ಳು ಎಳೆಯಲಾಗಿತ್ತು
ಅಪರಾತ್ರಿ ಕತ್ತಿ ಮಸೆತದ ಸದ್ದು ರಣಗುಡುತ್ತಿತ್ತು
ಸಾಗರದ ಆಳದಲ್ಲಿ
ಕರಿಗಾಳಿಯ ಮೆರವಣಿಗೆ ಹೊರಟಿತ್ತು…🌊
ನನ್ನ ‘ನೀಲಿನಕ್ಷತ್ರ’ ನಿಶ್ಯಸ್ತ್ರವಾಗಿ ಅಸ್ತಂಗತಗೊಂಡಿತು….😔😔

-ಎನ್.ರವಿಕುಮಾರ್ ಶಿವಮೊಗ್ಗ

 

 

ಜಡಗೊಂಡ ಅದೆಷ್ಟೋ
ಆತ್ಮಗಳ ಎಚ್ಚರಿಸಿದೆ
ದಲಿತ ದಮನಿತ ಮನಸ್ಸುಗಳ
ದನಿಯಾದೆ
ಅದೆಲ್ಲಿ; ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ

ನಿನ್ನ ಉಸಿರ ಹಸಿರ
ಅಳಿಸಿದರು
ಜಾತಿ ಜನಿವಾರದ ನೇಣು ಕುಳಿಕೆಯಲ್ಲಿ
ನಿನ್ನ ಧನಿಯ ಅವಡುಗಚ್ಚಿಸಿದರು

ಧರ್ಮದ ವಿಷವರ್ತುಲದಲ್ಲಿ
ಅದೆಲ್ಲಿ; ಮಿನುಗಿ ಮರೆಯಾದೆ
ಓ ನನ್ನ ನಕ್ಷತ್ರದ ಧೂಳೆ

ಜೀವನ್ಮರಣದ ಅಮರತೆಯೊಳಗೆ
ಮನಗೆದ್ದು ಮಸಣದ
ಮಿಲನ ಸಂಭ್ರಮದಲ್ಲಿ
ದಾಪುಗಾಲಕ್ಕಿದೆ
ಓ ನಕ್ಷತ್ರದ ಧೂಳೆ
ಏಕೆ ಮಿನುಗಿ ಮರೆಯಾದೆ

ಸಮತೆಯ ಜ್ಯೋತಿ
ಬೆಳಗುವಾತುರದಲ್ಲಿ
ಕೇಸರಿ, ಖಾಕಿ ಚೆಡ್ಡಿಗಳ
ಅಸೂಯೆ ಕುಚೋದ್ಯಕ್ಕೆ ಬಲಿಯಾಗಿ
ಬಾಡಿತು ಬೆಳಗಿದ ಬೆಳಕೇ
ಮೊಳಗಿತು ಅಹಿಂಸೆಯ ಧ್ವನಿ
ಏಕೆ ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ

ಆರಿದ ಒಂದು ಬೆಳಗು
ನೂರು ದೀಪಕ್ಕೆ ದಾರಿಯಾದೆ
ಎಲ್ಲಿ ಹೋದೆ
ಏಕೆ ಮಿನುಗಿ ಮರೆಯಾದೆ
ಓ ನಕ್ಷತ್ರದ ಧೂಳೆ

– ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ

‍ಲೇಖಕರು admin

January 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: