ಮೌನ
– ಹೇಮಾ ಕಳ್ಳಂಬೆಳ್ಳ

ನೀನು ಮಾತನಾಡಿ
ನಾನೂ ಮಾತಾಡಿ
ಇಬ್ಬರಿಗೂ ಜಗಳವಾಯ್ತು
ನೀನು ಮೌನವಾಗಿ
ನಾನು ಮಾತಾಗಿ
ನನ್ನ ಮನಸು ಹಗುರಾಯ್ತು
ನಾನು ಮೌನವಾಗಿ
ನೀನು ಮಾತಾಡಿ
ನನ್ನ ಮನಸು ಭಾರವಾಯ್ತು
ಕೊನೆಗೆ
ನೀನು ಮೌನವಾಗಿ
ನಾನೂ ಮೌನವಾಗಿ
ನಿನ್ನ ಮೌನದ ತೀರಕೆ
ನನ್ನ ಮೌನದ ಅಲೆಗಳು
ಅಪ್ಪಳಿಸಿ
ಒಲವ ಸುನಾಮಿ
ಈ ಮೌನ
ಎಷ್ಟೋಂದು ಒಳ್ಳೆಯದು!?






Simple, yet so nice.
Nice..
ತುಂಬಾ ಚೆನ್ನಾಗಿದೆ …
Beautiful!
Tubaaaa channagide mona kavite. baravanige munduvaresi olledagali.
good one..
‘ನಿನ್ನ ಮೌನದ ತೀರಕೆ ನನ್ನ ಮೌನದ ಅಲೆಗಳು ಅಪ್ಪಳಿಸಿ
ಒಲವ ಸುನಾಮಿ
ಈ ಮೌನ ಎಷ್ಟೊಂದು ಒಳ್ಳೆಯದು!?’
ಅರ್ಥಪೂರಿತ ಕವಿತೆ.