’ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು ….’ – ಎಂ ಎಂ ಶೇಕ್

ಬಾನು ಬಾಗಿದೆ

ಭೂಮಿಯೆಡೆಗೆ

ಎಂ ಎಂ ಶೇಕ್

ಯಾದಗಿರಿ


ಬೆನ್ನಾಗಿ ನಿಂತಿಯಲ್ಲಾ
ಹೋಗಲು :ಸರಿ ಬಿಡು ,
ನೆನಪಲಿ ಕಳೆದ
ನನ್ನ ನಿದ್ದೆಗಳ ,
ಪ್ರತಿ ಋತು ತೆಗೆದುಕೊಂಡು ಹೋದ
ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು .. ..
 
ಈ ಒಂಟಿ ಕ್ಷಣಗಳ
ಜೊತೆಗೊಯ್ಯಿ. ಕಣ್ಣ ಕದನ
ತುಟಿ ಮೇಲಿನ ಪರಿಚಯ ಹೆಕ್ಕಿ ಕೊಡುವೆ ..
ಓಣಿಯಲಿ ಅಲೆದಾಡಿದ
ಮುನಿಸುಗಳ ಆಯ್ದು ಕೊಡುವೆ..
 
ನಿನ್ನ ನೆನಪುಗಳ ಒಟ್ಟಿ ಕೊಡುವೆ
ಬೆಂಕಿ ಇಡು ,
ಆಳಿದ ಆ ಸಂಜೆಗಳಿಗೆ
ಕೊಳ ತೊಡಿಸು
ಸಾಧ್ಯವಾದರೆ ..
ನಿನ್ನ ಭುಜಗಳ ಮೇಲೆ
ಸುರಿಸಿದ ಆ ಕಣ್ಣೀರ ತುಂಬಿ ಕೊಡು
ನನ್ನ ಅನಾಥ ಬೊಗಸೆಗೆ ..
ಗದ್ಗದಿತ ಕಣ್ಣ ಹನಿ
ಜಾರದಂತೆ ಇಂಗಿಸಿಕೊಂಡ
ಆ ತಂಪು ವಾಪಸ್ಸು ಕೊಟ್ಟು ಹೋಗು ..
 
ನೆರಳು ಕೊಟ್ಟು
ಬಿಸಿಲಲಿ ರಮಿಸಿದ
ಗಳಿಗೆಗಳ ಗುಡಿಸಿಕೋ..
ಮೋಡ ಕಟ್ಟುವ, ಹನಿಯೊಡೆಯುವ
ತಂಗಾಳಿಗಳ ಹಿಡಿದುಕೊ
ಹೋಗು .. ..
ತೋರು ಬೆರಳಿಂದ
ಹಚ್ಚಿದ ಕಾಡಿಗೆ ಅಳಿಸಿ ಹೋಗು .. ..
 

‍ಲೇಖಕರು G

December 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Anand Rugvedi

    ಕವಿತೆಯ ದಿಟ್ಟತೆ ಮತ್ತು ಗಾಢ ಪ್ರೀತಿ ಮನ ಸೆಳೆಯುತ್ತದೆ.

    ಪ್ರತಿಕ್ರಿಯೆ
  2. Ramesh Aroli

    ಪ್ರತಿ ಋತು ತೆಗೆದುಕೊಂಡು ಹೋದ
    ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು….
    ಎಂತಹ ಅದ್ಭುತ ಸಾಲುಗಳು ಮೇಡಂ, ನಿಮ್ಮ ಸಂಕಲನ ಸಿಗುತ್ತ ತಿಳಿಸಿ. ಕೃಷ್ಣ, ಆರಿಫ್ ನಿಮ್ಮ ಬಗ್ಗೆ ಹೇಳ್ತಿರ್ತಾರೆ.

    ಪ್ರತಿಕ್ರಿಯೆ
    • mmshaik

      ramesh avare,krisna avara httira kottrtini tegedukoLLi…anisike nidida ellariguu dhanyavaada.

      ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಪದ್ಯ ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  4. Hanumanth Ananth Patil

    ಮೆಡಮ್ ವಂದನೆಗಳು
    ಬಹಳ ಅರ್ಥಗರ್ಬಿತ ಕವನ ನೀಡಿದ್ದೀರಿ, ಲೆಖ್ಖ ಕೆಳುವ ನಿಮ್ಮ ನಿಟ್ಟುಸಿರು ಓದುಗನನ್ನು ಯೋಚನೆಗೆ ಹಚ್ಚುತ್ತದೆ ಮತ್ತೆ ಮತ್ತೆ ಓದ ಬೇಕೆನಿಸುವ ಕವನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: