ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ತೋಳಿಗೊರಗಿಸಿ ಕೊಂಡೊಯ್ಯಲೇ..

ಮೃತ್ಯುಮುಖಿ ಪ್ರಣಯ

guru sullia dubai

ಮಲಯಾಳಂ ಮೂಲ;ಎಂ.ಎಸ್. ಬನೇಶ್

ಕನ್ನಡಕ್ಕೆ ; ದುಬೈನಿಂದ ಗುರುಸುಳ್ಯ

ಗಂಡ ನಿನ್ನಲ್ಲಿ ವಿರಕ್ತನಾಗುವಾಗ,
ಮಕ್ಕಳೆಲ್ಲಾ ನಿನ್ನ ದೂರತಳ್ಳಿದಾಗ,
ಸಂಪಾದನೆಯೆಲ್ಲ ಬಿಕರಿಯಾದಾಗ,
women in blueಕಾಲುಗಳು ನಿಶ್ಯಕ್ತವಾಗಿ ದೇಹ ಮುದುಡಿದಾಗ,
ಮಣ್ಣ ಹುಳಗಳು ನಿನ್ನೊಡಲ ರುಚಿಯ
ಕನಸಿ ಕಾಯುತ್ತಿರುವಾಗ,
ನಿನ್ನನ್ನಿರಿಸಿರುವ  ಅನಾಥಾಶ್ರಮದ
ಬಾಗಿಲಲ್ಲಾದರೂ ಕಾಯುತ್ತಿರಲೇ ನಾ.
ನನ್ನ ತೋಳಿಗೊರಗಿಸಿ ಕೊಂಡೊಯ್ಯಲೇ..
ನನ್ನ ಚಾಪೆಯಲ್ಲಿ ಮಲಗಿಸಲೇ..
ಬೆರಳೂ ಸೋಕಿಸದೆ ಪರಿಚರಿಸಲೆನ್ನ
ಗತಬದುಕೆಲ್ಲವೂ ಸೋರಿ
ಕಾದು ಕಾದು ಸುಸ್ತಾದ ಆ ವೇಳೆಯಲಿ
ನನ್ನ ಕಣ್ಮುಂದೆ ನೀ ಕೊನೆಯುಸಿರೆಳೆದರೆ
ನಾ ನಿನ್ನ ಚಿತೆಯನ್ನು
ಸಜ್ಜುಗೊಳಿಸುವುದಕ್ಕೂ ಮುಂಚೆ,
ಒಂದಿನಿತು ದಯೆಯಿಲ್ಲದೆ
ಈ ಜನ್ಮವಿಡೀ ನನ್ನ ಸೆರೆಯಾಳಾಗಿಸಿದ
ಪ್ರಣಯದಾಯಿನಿಯೇ
ಪ್ರಳಯದೋಕುಳಿಯೇ
ಈಗಲಾದರೂ ಈ ಕಡಿವಾಣದಿಂದ
ಕಳಚಿಕೊಳ್ಳಲೇ ನಾ

ಬಿಸಿಯಾರುವ ಮುಂಚೆ
ನಿನ್ನನ್ನೆತ್ತಿ ಎದೆಗವುಚಿ
ಸಂತೃಪ್ತನಾಗಿ ತಲೆಯಿತ್ತಿ ನಿಲ್ಲಬೇಕಿದೆ
ತದನಂತರ ಶವರತಿಗಿರುವ
ಶಿಕ್ಷೆಯಾಗಿ ಮೃತಗಂಧವೊಸರುವ
ನನ್ನ ದೇಹದಣುವಣುವಿಗೆ
ಅನೇಕಾನೇಕ ಲಾಠಿಯೇಟುಗಳು..

ನನ್ನವಲ್ಲವಾದರೂ ಹೂಪಕಳೆಗಳಿಂದ,ಮಣ್ಣಮೆದುವಿನಿಂದ,
ಪ್ರೇಮಜಲದಿಂದ ಒಲವ ಸಾಕ್ಷಾತ್ಕರದ
ಅಂತಿಮ ನಮನಗಳನ್ನರ್ಪಿಸಿ
ನಿನ್ನ ಮಲಗಿಸಿಕೊಂಡ ನನ್ನ
ತೊಡೆಗಳ ಮೇಲುರುಳುತ್ತಿರುವ ಬಡಿಗೆಗಳಿಗೆ
ನನ್ನೊಳಗಿನ ಬೀಗ ಒಡೆದು
ನನ್ನಾತ್ಮಕ್ಕಂಟಿರುವ ಇಡಿಬಿಡಿ ಕವಿತೆಗಳ
ಪುಡಿಗೈಯಲು  ಸಾಧ್ಯವೇ..

‍ಲೇಖಕರು admin

12 December, 2015

3 Comments

  1. ಮುಗಿಯದ ಮೌನ- GKN

    ವಾ, ಎದೆಯ ತಟ್ಟುತ್ತಿದ್ದೆ ಪ್ರೇಮಿಯ ಕವಿತೆ

    • guru

      Thank you sir..

    • guru

      Thank you sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading