ನನ್ನ ಚೇತನದ ನಾಯಕನೂ ನಾನೇ..

ಸಣ್ಣ ವಯಸ್ಸಿನಲ್ಲೇ ಎಲುಬಿನ ಕ್ಷಯ ರೋಗಕ್ಕೆ (Tuberculum arthritis) ತುತ್ತಾಗಿ, ತನ್ನೊಂದು ಕಾಲನ್ನು ಕಳೆದುಕೊಂಡು ಮತ್ತೊಂದು ಕಾಲಿಗೂ ರೋಗದ ವ್ಯಾಪ್ತಿ ಹೆಚ್ಚಿದಾಗ ವೈದ್ಯರು ಅದನ್ನೂ ಕಡಿಯಬೇಕಾದ ಪರಿಸ್ಥಿತಿಯಲ್ಲಿದ್ದರು. ಆಗ ಆಸ್ಪತ್ರೆಯಲ್ಲಿದ್ದ (1875 ಇಸವಿಯಲ್ಲಿ ಬರೆದದ್ದು) ವಿಲಿಯಮ್ ಅರ್ನ್ಸ್ಟ್ ಹೆನ್ಲೇ (William Earnat Henley). – ಒಬ್ಬ ಬ್ರಿಟಿಷ್ ಕವಿ ಹಾಗೂ ವಿಮರ್ಶಕ, ತನ್ನ ಮನೋಬಲ ಹೆಚ್ಚಿಸಿಕೊಳ್ಳಲು ಬರೆದಂತಹ ಪದ್ಯವೇ “Invictus”

ಅದರ ಭಾವಾನುವಾದ ಹೀಗಿದೆ!

ನಿರ್ಜಿತ

ಕನ್ನಡಕ್ಕೆ: ಚೈತ್ರ ಶಿವಯೋಗಿಮಠ

ಧ್ರುವದಿಂ ಧ್ರುವದಿ ವಿಸ್ತರಿಪ, ನನ್ನನಾವರಿಸಿದ
ಕಟ್ಟ ಕರಾಳ  ಕಡುಕಪ್ಪು ರಾತ್ರಿಯೊಳಿಂದ..
ನನಗೆ ನಿರ್ಜಿತ ಚೇತನ ಕರುಣಿಸಿದಲೋಸುಗ
ಅದಾವುದೋ ಕಾಣದಾ ದೈವಕ್ಕೆ ವಂದನೆಗಳು!!

ಪರಿಸ್ಥಿತಿಗಳ ಬಿಗಿಯಾದ ರಕ್ಕಸ ಮುಷ್ಠಿಯಲ್ಲಿ ಸಿಲುಕಿ
ಒಮ್ಮೆಯೂ ಮುಖ ಕಿವುಚಿ ಹಿಮ್ಮೆಟ್ಟಿಲ್ಲ, ಗಟ್ಟಿಯಾಗಿ ಅತ್ತಿಲ್ಲ!
ಸಂಕಷ್ಟಗಳ ಬಲವಾದ ಪೆಟ್ಟುಗಳನ್ನು ತಿಂದರೂ
ರಕ್ತಸಿಕ್ತವದು ನನ್ನ ತಲೆ, ಹೊರತು ಎಂದಿಗೂ ಬಾಗಿಲ್ಲ!!

ಈ ದುಃಖ, ದುಗುಡ, ದುಮ್ಮಾನ ಕಣ್ಣೀರುಗಳನ್ನ
ಮೀರಿಯೊಂದು ಭಯಾನಕ ಕರಾಳ ಛಾಯೆಯಿದೆ
ವರುಷಗಳ ಬೆದರಿಕೆ ಭಯೋತ್ಪಾದನೆಗಳು
ಎಂದಿಗೂ ಅಂಜದ ನನ್ನನ್ನ ಕಾಣುವವು!

ಅದಾವುದಾದರೂ ಸಗ್ಗದ ಬಾಗಿಲೇ ಇರಲಿ!
ಅದೆಂತಹ ಭೀಕರ ನರಕಯಾತನೆಯೇ ಬರಲಿ
ನನ್ನ ವಿಧಿಯ ವಿಧಾತ ನಾನೇsss
ನನ್ನ ಚೇತನದ ನಾಯಕನೂ ನಾನೇssss!!!!


Invictus

by William Earnst Henley

Out of the night that covers me,
Black as the pit from pole to pole,
I thank whatever gods may be
For my unconquerable soul.

In the fell clutch of circumstance
I have not winced nor cried aloud.
Under the bludgeonings of chance
My head is bloody, but unbowed.

Beyond this place of wrath and tears
Looms but the Horror of the shade,
And yet the menace of the years
Finds and shall find me unafraid.

It matters not how strait the gate,
How charged with punishments the scroll,
I am the master of my fate,
I am the captain of my soul.

‍ಲೇಖಕರು avadhi

February 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಶ್ರೀನಿವಾಸ್ ಬಿ.ಎಸ್

    ಉತ್ತಮ ಭಾವಾನುವಾದ.ಅಭಿನಂದನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: