ನನ್ನ ಅಮ್ಮ..

ವಿಜಯಭಾಸ್ಕರ

ನಾವಿರುವ ಓಣಿ ಕುಂಬಾರಗಲ್ಲಿ, ಅಜ್ಜ ಮಾಸ್ತರರಾಗಿದ್ದ ಕಾರಣ ನಮ್ಮ ಓದಿನ ಜಾಗರಣೆ ಪ್ರತಿನಿತ್ಯ ಸರಾಗವಾಗಿ ನಡೆಯುತ್ತಿತ್ತು. ನಮ್ಮ ಮನೆಗೆ ಆಗ ಬಣ್ಣದ ಟಿವಿ ಬಂದಾಗ ಓಣಿಯಲ್ಲಿ ಜಾತ್ರೆ. ಅಮ್ಮನ ಕೆಲಸ ಬಂದವರಿಗೆ ಜಾಗ ಮಾಡಿ ಕೊಡುವುದು. ಧಾರವಾಹಿ ನೋಡುವಾಗ ಅಲ್ಲೆಲ್ಲೊ ಮೂಲೆಯಲ್ಲಿ ಕೂತು ನೋಡುವ ಅಮ್ಮ, ಅಜ್ಜನಿಗೆ ತುಂಬಾ ಗೌರವ ನೀಡುವ ಸೊಸೆಯಾಗಿದ್ದಳು,

ಅಜ್ಜ ಇದ್ದಷ್ಟು ದಿನ ನಾವು ಅಮ್ಮನ ಮೇಲೆ ಎಂದೂ ಬೇಡಿ ಕಾಡಿದ್ದಿಲ್ಲ, ನಾವು ಕೇಳುವ ಮೊದಲೆ ಅಜ್ಜ ಎಲ್ಲಾ ತಂದುಕೊಡುತ್ತಿದ್ದ ಆದರೆ ಕಾಲ ಅಂದುಕೊಂಡಷ್ಟು ಸುಲಭದಲ್ಲ, ಅಜ್ಜ ತೀರಿಹೋದ ತದನಂತರ ಮನೆಯ ವ್ಯಾವಹಾರಿಕ ಜವಾಬ್ದಾರಿ ಅಪ್ಪ ನಿಭಾಯಿಸುತ್ತಿದ್ದರು. ಆದರೆ ನಮ್ಗಳನ್ನ ಅಮ್ಮ ಅದೆಷ್ಟು ಶಿಸ್ತುನಿಂದ ನೋಡಿಕೊಳ್ತಾ ಇದ್ದಳೆಂದರೆ ಅಗ್ದಿ ಜೋಪಾನ.

ನಾವು ನಾಲ್ಕು ಜನ ಮಕ್ಕಳು. ಎಲ್ಲರೂ ಗಂಡುಮಕ್ಕಳೆ, ಅಪ್ಪನ ಕೆಲಸ ಇದ್ದದ್ದು ಪತ್ರಿಕೆಯಲ್ಲಿ. ಹೀಗಾಗಿ ಅವರ ಸಮಯ ಹೇಳದ್ದು, ನಾವು ಮಲಗಿದಾಗ ಅವರು ಮನೆಗೆ ಬರುವರು, ನಾವು ಶಾಲೆಗೆ ಹೋಗುವಾಗ ಅವರು ಮಲಗಿರುವರು. ಹೀಗಾಗಿ ಅಮ್ಮ ಒಂದು ಪಾಲು ಹೆಚ್ಚಷ್ಟು ನಮ್ಮ ಬದುಕಿನಲ್ಲಿ ಅವಳ ಪಾತ್ರ.

ನಾನಂತು ಕಿರಿ ಕಿರಿಯ ಮನುಷ್ಯ. ಎಂದೂ ಸಾವಧಾನದ ಮಾತುಗಳಲ್ಲದ ಹುಡುಗ, ಹಾಗಾಗಿ ಅಮ್ಮ ನನ್ನ ಮೇಲೆ ಸ್ಪೆಷಲ್ ಕೇರ್ ತೆಗೆದುಕೊಳ್ತಾ ಇದ್ದಳು. ನನ್ನ ಮಾರ್ಕ್ಸ್ ಕಾರ್ಡ್ ಎಲ್ಲದರ ಮೇಲೂ ಅಮ್ಮನ ಸಹಿ ಇರುತ್ತಿತ್ತು ಎಲ್ಲಿ ಅಪ್ಪನ ಕೈಗೆ ಸಿಕ್ಕು ಹೊಡೆತ ತಿಂತಾನೆ ಅಂತ ಅಮ್ಮನೇ ಎಲ್ಲಾ ಮಾರ್ಕ್ಸ್ ಕಾರ್ಡ್ ಗಳಿಗೆ ಸಹಿ ಮಾಡಿ ಸಮಜಾಯಿಸಿ ಶಾಲೆಗೆ ಬಂದು ಬಿಡುವಳು.

ನನ್ನ ಡಿಗ್ರಿ ಹಂತ ಮುಗಿದ ನಂತರ ಎಂ.ಎ ಪತ್ರಿಕೋದ್ಯಮ ಓದುವಾಗ ನಾನೂ ಒಂದು ಕವನ ಸಂಕಲನ ಬರೀಬೇಕು ಅಂದಾಗ, ಅಮ್ಮ ಬರೀ ಮಗಾ ಅಂಥ ನನ್ನ ಅಷ್ಟೂ ಕವಿತೆಗಳನ್ನು ಸಮಾಧಾನದಿಂದ ಕೇಳಿ ಪ್ರೋತ್ಸಾಹದ ಮಾತುಗಳನ್ನಾಡಿ ಮುನ್ನುಗ್ಗು ಎಂದಳು, ಆದರೆ ಅಪ್ಪನಿಗೆ ಎಂದೂ ಕವಿತೆ ಬರೆದಿದ್ದನ್ನು ಹೇಳಿಯೂ ಇಲ್ಲ ಅದರ ಬಗ್ಗೆ ಚರ್ಚಿಸಿಯೂ ಇಲ್ಲ, ಆದರೆ ಅವರು ಎಷ್ಟೇ ಆಗಲಿ ಅಪ್ಪ. ಅಪ್ಪ ಅಪ್ಪನೇ, ಎಲ್ಲಾ ಕವಿತೆಗಳನ್ನು ನೋಡಿ ತಿದ್ದಿ ತೀಡಿ ಒಂದು ಹಂತಕ್ಕೆ ತಂದಿಟ್ಟರು.

ಆದರೆ ನಾನು ಅತೃಪ್ತ ಆತ್ಮದಂತೆ ಬಹುಬೇಗನೆ ಪುಸ್ತಕ ಆಗಬೇಕೆಂದು ಅಪ್ಪನಿಗೆ ಹೇಳದೆ ಅಮ್ಮನ ಹಣಕಾಸಿನ ಸಹಾಯದಿಂದ ಪ್ರಿಂಟಿಂಗ್‌ಗೆ ಹಾಕಿಸಿದೆ. ನನ್ನ ಜೀವನದಲ್ಲಿ ಅಪ್ಪನಿಗೆ ಹೇಳದೆ ಮಾಡಿದ ಕೆಲಸ ಇದೊಂದೆ. ಅಮ್ಮ ಅಂದು ತನ್ನ ಕೂಡಿಟ್ಟ ಕಾಸನ್ನು ಕೊಟ್ಟು ಪುಸ್ತಕ ಹೊರಬರಲು ಕಾರಣಳಾದಳು. ಅಪ್ಪ ಸಾಹಿತ್ಯಿಕ ವರದಾನವಾದರೆ, ಅಮ್ಮ ಎಂದಿಗೂ ಮಮತೆಯ ವರದಾನ.

‍ಲೇಖಕರು Avadhi

May 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: