ನನ್ನೆದೆಯ ಬಡಿತವೇರಿದ್ದು ಅರಿವಾಗುವ ಭಯವಿತ್ತು ನನಗೆ..

ಶ್ರೀದೇವಿ ಕೆರೆಮನೆ 

ನಿನ್ನ ಕಣ್ಣ ಆಹ್ವಾನವ ಮರುಮಾತಿಲ್ಲದೇ ಒಪ್ಪಿ ಬಿಡುವ ಭಯವಿತ್ತು ನನಗೆ
ಸುತ್ತ ನೆರೆದ ಮಂದಿಗೆ
ನನ್ನೆದೆಯ ಬಡಿತವೇರಿದ್ದು ಅರಿವಾಗುವ ಭಯವಿತ್ತು ನನಗೆ

ತುಂಬಿದ ಸಭೆಯಲ್ಲಿ ಎಲ್ಲರ ಎದುರಿಗೆ ಯಾವ ಮುಜುಗರವೂ ಇಲ್ಲದೇ
ನೀ ಕೊಟ್ಟ ಗುಲಾಬಿಯನ್ನು ಎದೆಗೊತ್ತಿಕೊಳ್ಳುವ ಭಯವಿತ್ತು ನನಗೆ

ಬೇಡವೆಂದು ಬುದ್ಧಿ ಹೇಳಿದರೂ ಮಾತು ಕೇಳದ ಮನಸ್ಸು
ನಿನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು‌ ಹಠ ಹಿಡಿಯುವ ಭಯವಿತ್ತು ನನಗೆ

ನಿನ್ನ ದಿಟ್ಟಿಗೆ ದಿಟ್ಟಿ ಸೇರಿಸಲು ಕಣ್ಣು ಅಂಜುವುದೇಕೆಂದು ನನ್ನೇ ನಾ ಕೇಳಿದರೆ
ನಿನ್ನ ದಿಟ್ಟಿಯ ಮೋಹಕೆ ನಿನ್ನೊಳಗೇ ನಾನು ಕಳೆದುಹೋಗುವ ಭಯವಿತ್ತು ನನಗೆ

EPSON scanner image

ನಿನ್ನ ತೋಳೊಳಗೆ ತೋಳು ಬಳಸಲಾಗಲಿಲ್ಲ ಹೊರಡುವ ಗಳಿಗೆಯವರೆಗೂ
ನಿನ್ನ ವಿಶಾಲ ತೋಳಿನೊಳಗೆ ನನ್ನನ್ನೇ ನಾ ಬಂಧಿಯಾಗಿಸುವ ಭಯವಿತ್ತು ನನಗೆ

ನಿನ್ನ ಪಕ್ಕದಲ್ಲಿ ಬಹಳ ಸಮಯ ನಿಲ್ಲುವ ಅದೃಷ್ಟ ನನ್ನ ತಕದೀರನಲ್ಲಿರಲಿಲ್ಲ
ನಿನ್ನ ದೇಹದ ಕಾವಿಗೆ ನಾನು ಕರಗಿ ಹರಿದು ಹೋಗುವ ಭಯವಿತ್ತು ನನಗೆ

ನಿನ್ನ ಕಂಡೊಡನೆ ಕುಣಿವ ಮನಸ್ಸನ್ನು ತಹಂಬದಿಗೆ ತರಲು ಹರಸಾಹಸ ಪಟ್ಟೆ
ಕದ್ದು ಕದ್ದು ನಿನ್ನ ನೋಡುವ ನನ್ನ ಕಣ್ಣೋಟದ ಸುಳಿವು ತಿಳಿವ ಭಯವಿತ್ತು ನನಗೆ

ಎಂದೋ ಈ ಸಿರಿಯನ್ನು ನಿನ್ನವಳೆಂದು ಗುಡಿಕಟ್ಟಿ ಮನದಲ್ಲೇ ನಿನ್ನ ಆರಾಧಿಸಿದ್ದು
ಒಂದೂ ಮಾತಾಡದೇ ಬರೀ ದೇಹಭಾಷೆಯಲ್ಲೇ ನಿನಗೆ ತಿಳಿದುಬಿಡುವ ಭಯವಿತ್ತು ನನಗೆ

‍ಲೇಖಕರು avadhi

January 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: