ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನಳ್ಳಿ ಕಥೆಗಳು..

ಜಡಿಯಪ್ಪ ಗೆದ್ಲಗಟ್ಟಿ 

1. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯ ಮಗು ಮರಕ್ಕೆ ಕಟ್ಟಿದ್ದ ಸೀರೆಯ ಜೋಳಿಗೆಯಲ್ಲಿ ಜೋರಾಗಿ ಅಳುತ್ತಿತ್ತು, ಕೆಲಸ ಮುಗಿಸಿ ಅದೇ ಮರದಡಿಯಲ್ಲಿ ಕೂತಿದ್ದ ಮತ್ತೊಬ್ಬ ಮಹಿಳೆ ಆ ಮಗುವನ್ನು ಸುಮ್ಮನಾಗಿಸಲು ಹಾಲು ಇರದ ತನ್ನೆದೆಯ ತೊಟ್ಟನು ಉಣಿಸಿ ಕೆಲಸ ಮಾಡುತ್ತಿದ್ದ ತಾಯಿಗೆ ಕೂಗಿ ಹೇಳಿದಳು ಮಗು ಮಲಗಿತು!

2. ಮೊದಲ ಹೆರಿಗೆಯ ಬಾಣಂತಿ ಎದೆಯಲ್ಲಿ ಹಾಲಿಲ್ಲ ಎಂಬ ತವಕದಲ್ಲಿದ್ದ ಹುಲಿಗೆಮ್ಮಳ ಮಗುವಿಗೆ ಕಳೆದ ತಿಂಗಳು ತಾಯಿಯಾಗಿದ್ದ ಪಕ್ಕದ್ಮನೆ ಎಲ್ಲವ್ವ ಮಗು ಅತ್ತಾಗಲೆಲ್ಲ ಓಡಿ ಬಂದು ಹಾಲುಣಿಸಿ ಹೋಗುತ್ತಾಳೆ.

3. ಹೆಂಡತಿ ಸತ್ತ ಮಾವ ಎರಡು ಮಕ್ಕಳ ಮುಂದೆ ಎರಡನೇ ಮದುವೆಯಾದನು, ಬಂದವಳಿಗೆ ಹೆದರಿ ನಮ್ಮಜ್ಜಿ ಮೊಮ್ಮಕ್ಕಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಳು. ಬಂದವಳು ಮೂರೇ ದಿನಕ್ಕೆ ತವರು ಸೇರಿದಳು ಮಕ್ಕಳಿಲ್ಲದಿದ್ದರೆ ನಾ ಆ ಮನೆಗೆ ಬರುವುದಿಲ್ಲ ಎನ್ನುತಾ, ಹೆಂಡತಿ ಸತ್ತಿದ್ದಾಳೆ ಎರಡು ಮಕ್ಕಳಿವೆ ಅಂತಾ ಗೊತ್ತಿದ್ದು ಮದುವೆಯಾಗಿದ್ದೇನೆ ನಾ ಪಟ್ಟ ಕಷ್ಟ ಆ ಮಕ್ಕಳು ಪಡಬಾರದು-ನಾನು ನಮ್ಮಪ್ಪನ ಮೊದಲ ಹೆಂಡತಿ ಮಗಳು.

4. ಗಂಡ ಕೈಲಾಗದವ ಅಂತಾ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದ ಕೆಲ ಗಂಡಸರ ವಿರುದ್ದ ಜಗಳಕ್ಕೆ ನಿಂತಿದ್ದ ಹನುಮಕ್ಕ ಸೀರೆ ಮೇಲೆ ತೊಡೆ ತಟ್ಟಿದ ದಿನದಿಂದ ಗಂಡ ನೆಮ್ಮದಿಯಾಗಿ ಓಡಾಡಿಕೊಂಡಿದ್ದಾನೆ.

‍ಲೇಖಕರು avadhi

9 March, 2017

1 Comment

  1. ಸುಧಾ ಚಿದಾನಂದಗೌಡ

    ಸೂಊಊಊಊಊಊಉಪರ್ ಕಥೆಗಳು…..
    ಎಲ್ಲರಳ್ಳಿಯ ಕಥೆಗಳು……
    ಐನಾತಿ ನಾಜೂಕು ಬಾಟ್ಲಿಹಾಲಿನ ನಗರಗಳಿಗೆ ಪಾಠಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading