
ಅಮೀನ್ ಮ ಅತ್ತಾರ
ನನ್ನಪ್ಪ ಕವಿತೆ
ಬರೆಯಲಿಲ್ಲ
ಆತನ ಬದುಕೆ
ಮಹಾಕಾವ್ಯ
ಮೃಮುರಿದು ದುಡಿವಾಗ
ಬಸಿವ ಬೆವರಹನಿ
ಹಣೆ, ಕಣ್ಣಂಚು
ದಾಟಿ ನೆಲ ಕುದುರುವಾಗ
ಕಂಬೆವರ ಹನಿಯಲಿ
ನರಳು ತಾರಳುವ ನೆಲದ ಕವಿತೆ
ಜಿಂದಗಿಯ ಜಂಜಾಟ
ಅನವರತ ನೋವುಗಳ
ಭರಪೂರ ಉಂಡ
ಅಪ್ಪನದು ಯಾರೂ ಓದದ
ಏಕಾಂಗಿ ಕಾವ್ಯ

ಕಲ್ಲೆಸದವರಿಗೆ ಕಲ್ಲು ಸಕ್ಕರೆ
ಜರಿದವರಿಗೆ ಮುಗುಳು ನಗೆ
ಸದಾ ಶಾಂತಿಪರ
ಮೌನಕಾವ್ಯ
ನಿಟ್ಟುಸಿರ ಕವಿತೆಗಳ
ಗಟ್ಟಿ ಬಿಳಲುಗಳ
ದೊಡ್ಡಾಲದಮರ ನನ್ನಪ್ಪ
ನೆಲಕುರುಳಿ ಮಣ್ಣಾದರೂ
ನನ್ನ ಬಾಳ ಹೊಸ ಹಾದಿಗೆ
ಬೆಳಕ ಕಣ್ಣ ಕವಿತೆ
ನನ್ನಪ್ಪ






ಮನಮುಟ್ಟಿದ ಕವಿತೆ
ನನ್ನಪ್ಪ ತುಂಬ ಚೆಂದದ ಕವಿತೆ ಅಮೀನ್ ಸರ್…