ನನ್ನದೇ ನೆರಳು ನೀನು !

ಅಶ್ಫಾಕ್ ಪೀರಜಾದೆ

ಹೌದು !
ಅವನು ನನ್ನ ತದ್ರೂಪ
ಅವಳಿ ಇದ್ದಂತೆ, ನನ್ನದೇ ಪ್ರತಿಬಿಂಬ
ನನ್ನೊಂದಿಗೆ ಚಲಿಸುವ ನನ್ನದೇ ನೆರಳಿನಂತೆ..
ಬೋನಿಗೆ ಬಿದ್ದ ವ್ಯಾಘ್ರ
ಮಾಂಸಕ್ಕಾಗಿ ತಪ್ಪಿಸಿಕೊಂಡು ಓಡಿದಂತೆ

ನಾನು ಕನ್ನಡಿ ನೋಡಿಕೊಳ್ಳಲು
ಹೋದಾಗ ನನ್ನ ಕಣ್ಣಿಗೆ ಕಾಣುವ ಅವನು
ಥೇಟ ನನ್ನಂತೆ ಸೋ ಕಾಲ್ಡ್ ಜಂಟಲ್ ಮ್ಯಾನ್
ಸುಸಂಸ್ಕೃತ ನಡೆ ನುಡಿ ಸೂಕ್ಷ್ಮತೆ ವಿನಯವಂತಿಕೆ..
ಆಕರ್ಷಣೀಯ ಸಮವಸ್ತ್ರ,
ಅಕ್ಷಯ ಕುಮಾರ್ ಹೇರ್ ಕಟ್,
……….ಪ್ರೇಂಚ್ ಕಟ್..
ಸೂಟ್ ಬೂಟ್ ಸೂಪರ್
ನಾನು ಕುಡಿಯದೇ ಅಮಲೇರುತ್ತೇನೆ
ನೈಂಟಿ ಹಾಕಿದರೆ ಸಾಕು ಆತ
ಪಟಪಟ ಅರಳು ಹುರಿದಂತೆ
ಶುದ್ಧ ಕನ್ನಡೋ.. ಕಂಟ್ರಿ ಇಂಗ್ಲೀಸೋ..
ಸಕಲ ಭಾಷಾ ಚತುರನಾಗಿ ಬಿಡುವುದು
ವಿಸ್ಮಯವೇ ಸರಿ..
ಹೆಣ್ಣು ವಿವಾಹಿತೆಯೋ ಅವಿವಾಹಿತೆಯೋ..
ಸಂಬಂಧ ಎಂತೋ ಏನೋ
ನಿರ್ಭಯವಾಗಿ.. ಐಲವ್ಯೂ ಸಾರಿಬಿಡೋಣು
ಮನದ ಮೂಲೆಯಲ್ಲಿ ಕಾಲು ಕೆದರಿ
ನಿಂತ ಬೀಜದ ಹೋರಿಗೆ ಮೈಸವರಿ
ಮುದ್ದುಮಾಡಿ ಅಖಾಡಕ್ಕೆ ಇಳಿಸಿದರೆ
ಹೆದರಿದ ಗೋವುಗಳೆಲ್ಲ ದಿಕ್ಕಾಪಾಲು !

ಮನದಲ್ಲೆ ಚಪಲ ತೀರಿಸಿಕೊಳ್ಳಲು
ಹಗಲೋ ಇರಳೋ ಏಕಾಂತದಲಿ ನನ್ನಂತೆ
ಕಣ್ಮುಚ್ಚಿ ಹಾಲು ಕುಡಿಯೋ ಬೆಕ್ಕಲ್ಲವನು
ಒಪ್ಪಿದರೆ ಒಂದು ತಿರಸ್ಕರಿಸಿದರೆ ಇನ್ನೊಂದು ಕೊನೆಯಾಸ್ತ್ರ ಅದೇ ಮೇಲೆರೆಗುವುದು
ತರು,ಲತೆ,ಹೂವು,ಹಣ್ಣು ಯಾವದಾದರೂ ಸರಿ
ಹರಿದು ಹಾಕಿ ಬೀಸಾಡಿ ಬಿಡೋದು
ದೇಹ ಛಿದ್ರ ಛಿದ್ರ ರಕ್ತಸಿಕ್ತವಾಗಲೇಬೇಕು
ಆ ಗಾಯಗೊಂಡ ಅವಯವಗಳು
ನನ್ನ ವಿಕಾರ ಮನದ ತುಂಬ
ಜೋತು ಬಿದ್ದ ತಗಲು ಬಾವಲಿಗಳು !

ರೋಮ ಚರ್ಮ ನರನಾಡಿಗಳೆಲ್ಲ
ದೇಹದ ಕಣಕಣವೂ
ಯಾರ ಕಣ್ಣಿಗೂ ಕಾಣದಂತೆ ಗಬಗಬನೇ
ತಿಂದು ತೇಗಿದರೂ ಅತೃಪ್ತಿಯಿಂದ ಕುದಿಯುವ
ನನ್ನೊಳಗಿನ ಅವನಿಗೂ ನನಗೂ ಒಂದೇ ವ್ಯತ್ಯಾಸ
ಸಮಾಜದ ಎದಿರು ಅಪರಾಧಿಯವನು
ನಾನು ನಿರಪರಾಧಿ ಎನ್ನುವುದು ತೃಪ್ತಿ
ನನಗೂ ನಿಮಗೂ ಎಲ್ಲರಿಗೂ
ಮಾನಸಿಕ ಆಘಾತಕ್ಕಿಂತ ದೈಹಿಕ ಆಘಾತ
ಮಿಗಿಲು ಎನ್ನುವುದು ಮನಸಿಗಂಟಿದ ಹಳೆ ವೃಣ !

‍ಲೇಖಕರು Admin

November 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: