‘ಜಟ್ಟ’ ಸಿನೆಮಾದ ಒಂದು ಸೀನ್ ನಲ್ಲಿ…

ಅಂಜಲಿ ರಾಮಣ್ಣ

ಜಟ್ಟ ಸಿನೆಮಾದ ಒಂದು ಸೀನ್ ನಲ್ಲಿ ಆಕೆ ಅವಳಿಗೆ ಹೇಳುತ್ತಾಳೆ ‘ಏನು ಹೆಂಗಸರೋ ನೀವು ಗಂಡ ಹೊಡದು ಬಡಿದು ಏನು ಮಾಡಿದರೂ ಸರಿ, ಇನ್ನೊಬ್ಬಳ ಜೊತೆ ಮಲಗಬಾರದು ಅಷ್ಟೇ…’ ಈಗ ನೋಡುತ್ತಾ ನೆನಪಾಗಿದ್ದು – ಅವನು sophisticated, ಅತೀ ವಿದ್ಯಾವಂತ. ಅವಳೋ ನಯಾಗರ ಜಲಪಾತದಂತಹ ಒರಟೊರಟಿ. ನಾವೆಲ್ಲಾ ಅವಳನ್ನು ರೇಗಿಸುವಾಗ ಅವಳು ಹೇಳುತ್ತಿದ್ದದ್ದು ಒಂದೇ ಮಾತು ‘ಎಲ್ಲಾದ್ರೂ ಏನಾದ್ರೂ ಮಾಡಿಕೊಳ್ಳಲಿ, ರಾತ್ರಿ ಮನೆಗೆ ಬಂದು ನನ್ನ ಪಕ್ಕ ಮಲಗಿದ್ದಾರಾ… ಅಷ್ಟು ಸಾಕು…’

ವಾಸ್ತವದಲ್ಲಿ ಹೆಂಗಸರು ಮಂದಲಿಗೆ ಹಂಚಿಕೆಯನ್ನು ಕೂಡ ಒಂದು ಹಂತಕ್ಕೆ ಒಪ್ಪಿಕೊಳ್ಳುತ್ತಾರೆ (ಆದರೆ ಸಮಾಜ ಈ ಅಭಿಪ್ರಾಯ ಹೊಂದುವಂತೆ ಅವರನ್ನು ಬದಲು ಮಾಡಿದೆ) ಇದೊಂದೇ ಅಭಿಪ್ರಾಯಕ್ಕೆ ಜೋತು ಬಿದ್ದು ಎಂಥೆಂಥಾ ತಪ್ಪುಗಳನ್ನು ಮಾಫಿ ಮಾಡಿ ಸಂಸಾರದಲ್ಲಿ ನೊಂದು ಬೇಯುತ್ತಿದ್ದಾರೆ. ಇದಕ್ಕೆ ವರ್ಗ ಬೇಧವಿಲ್ಲ. ಸ್ವಾಭಿಮಾನ ಎನ್ನುವುದು ಹೆಂಗಸರ ನಿಘಂಟಿನಿಂದ ಹೋಗಿ ಬಿಟ್ಟಿದೆ. ತನ್ನ ವಿದ್ಯೆಯನ್ನು ಮೂರಾಬಟ್ಟೆ ಮಾಡಿಸಿಕೊಂಡಿದ್ದಾರೆ. ಚರ್ಮ ಕಿತ್ತುಬರುವ ಹೊಡೆತವನ್ನು ನೂರು ಸರ್ತಿ ಮಾಫಿ ಮಾಡುತ್ತಾರೆ. ಹತ್ತಾರು ಬಾರಿ ಛಳಿ ಮಳೆಗಳಲ್ಲಿ ಮನೆಯಿಂದ ಹೊರಗೆ ಹಾಕಿಸಿಕೊಳ್ಳುವುದನ್ನು ಕ್ಷಮಿಸಿದ್ದಾರೆ.

ಗೃಹಿಣಿಯರು ಗಂಡ ಅಡುಗೆಗೆ ದುಡ್ಡು ಕೊಡದ್ದನ್ನೂ ಕ್ಷಮಿಸುತ್ತಾರೆ. ಅವರಾಸೆ, ಹವ್ಯಾಸ ಎಲ್ಲಕ್ಕೂ ಒಡ್ಡುವ ತಡೆಯನ್ನು ಉಫಿ ಎನ್ನುತ್ತಿದ್ದಾರೆ. ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವವರು ಸಂಪೂರ್ಣ ಸಂಬಳವನ್ನು ಗಂಡನ ಕೈಗಿತ್ತು ತಮ್ಮ ಔಷಧಿಯ ಖರ್ಚಿಗೂ ಕೈ ಚಾಚುತ್ತಾರೆ ಮತ್ತು ಮಾಫಿಮಾಫಿ ಎನ್ನುತ್ತಾ ಅವನ ಸಾಲವನ್ನು ತಾವು ತೀರಿಸುತ್ತಾರೆ.

ಅವರ ತವರಿಗೆ ಅನಾವಶ್ಯಕವಾಗಿ ಆಗುವ ಅವಮಾನವನ್ನು ಕ್ಷಮಯಾಧರಿತ್ರಿಗಳಾಗಿ ಮುಚ್ಚುತ್ತಾರೆ. (ಇದು ಕೇವಲ ಬಡವರ, ಮಧ್ಯಮ ವರ್ಗದವರ ಕಥೆ ಅಲ್ಲ, ನಮ್ಮ ತಕ್ಕಡಿಯಲ್ಲಿ ವಿದ್ಯಾವಂತರು ಶ್ರೀಮಂತರು ಎನಿಸಿಕೊಂಡವರ ಸ್ಥಿತಿಯೂ ಇದೇ) ಆತ ಬೇರೆಯವರ ಬಳಿ ಮಲಗಿ ಬಂದರೂ ಪರವಾಗಿಲ್ಲ ತಮ್ಮ ಜೊತೆ ಮನುಷ್ಯನ ಹಾಗೆ ನಡೆದುಕೊಂಡರೆ ಸಾಕು ಎಂದು ಕಾಯುತ್ತಿರುವ ಹೆಂಗಸರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಮoದಲಿಗೆ ಹಂಚಿಕೆ ಮಾತ್ರ ಸಹಿಸೋಲ್ಲ ಅವಳು ಎನ್ನುವುದನ್ನು ತುಂಬಲಾಗಿದೆ, ಅದನ್ನೇ ಹೆಂಡಿರು ಹೇಳುತ್ತಾರೆ, ಹೇಳುತ್ತಿರುತ್ತಾರೆ ಮತ್ತು ಇದೇ ಅಭಿಪ್ರಾಯ ಎಲ್ಲಾ ಹೆಂಗಸರಲ್ಲೂ ಗಟ್ಟಿಗೊಳ್ಳುತ್ತಾ ಹೋಗುತ್ತೆ, ಬೇರೆ ಎಲ್ಲಾ ತಪ್ಪುಗಳು ಅಲ್ಲ, ಅಪರಾಧಗಳು ಮಾಫಿಯಾಗುತ್ತಾ ಹೋಗುತ್ತವೆ!

‍ಲೇಖಕರು Admin

November 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: